ಈಗಿನ ಕಾಲದಲ್ಲಿ ದೇವರ ಹೆಸರನ್ನು ಬಳಸಿಕೊಂಡು ಹಣ ಸಂಪಾದನೆ ಮಾಡುವರೇ ಹೆಚ್ಚು. ಇಂತ ಕಾಲದಲ್ಲಿ ದುಡ್ಡು ಕಾಸು ಇಲ್ಲದೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಸಾಧ್ಯವೇ ಎಂದು ನೀವು ಯೋಚನೆ ಮಾಡುತ್ತಿರಬಹುದು, ಆದರೆ ಈ ದೇವಸ್ಥಾನದಲ್ಲಿ ದುಡ್ಡು ಕಾಸು ಇಲ್ಲದೆ ಎಲ್ಲ ಭಕ್ತಾದಿಗಳು ಕೂಡ ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಈ ದೇವಸ್ಥಾನ ಯಾವುದು ಎನ್ದಫು ನೀವು ಯೋಚಿಸುತ್ತಿದ್ದೀರಾ ಆಗಾದರೆ ಆ ದೇವಸ್ಥಾನದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಲ್ಪತರ ನಾಡು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ಶ್ರೀ ಸ್ವರ್ಣ ಗೌರಮ್ಮ. ಈ ಗೌರಮ್ಮ ನಿಗೆ ಹಣ ಕಾಸು ಚಿನ್ನ ಯಾವುದೆ ರೀತಿಯ ಬೆಲೆಬಾಳುವ ವಸ್ತುಗಳನ್ನು ದೇವತೆ ಬಯಸುವುದಿಲ್ಲ. ಈ ದೇವರಿಗೆ ಕರ್ಪೂರ ಅಂದರೆ ಬಲು ಪ್ರೀತಿ. ಈ ದೇವರ ದರ್ಶನ ಪಡೆಯಲು ಹೋಗುವರು ತಾಯಿಗೆ ಕರ್ಪೂರವನ್ನೇ ಹರಕೆಯಾಗಿ ಅರ್ಪಿಸುತ್ತಾರೆ. ಈ ದೇವರಿಗೆ ಕರ್ಪೂರ ಮತ್ತು ಮಡಿಲಕ್ಕಿಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸುವುದರ ಮೂಲಕ ತಮ್ಮ ಬೇಡಿಕೆಯನ್ನಿಡುತ್ತಾರೆ.

ಭಕ್ತರ ಏನೇ ಕಷ್ಟವಿದ್ದರೂ ಸಹ ಗೌರಮ್ಮ ಆ ಕಷ್ಟವನ್ನು ದೂರ ಮಾಡುತ್ತದೆ ಎನ್ನುವ ನಂಬಿಕೆ. ಹಾಗೂ ಗೌರಿ ಗಣೇಶ ಹಬ್ಬದಂದು 9 ದಿನಗಳ ಕಾಲ ತಾಯಿ ಸ್ವರ್ಣಗೌರಿ ದೇವಿಯ ಮೂರ್ತಿಯನ್ನು ಅರಿಶಿಣದಿಂದ ತಯಾರಿಸಿ ಅದಕ್ಕೆ ವಜ್ರದ ಮೂಗೂತಿಯನ್ನು ಧರಿಸಲಾಗುತ್ತದೆ ಆಗ ದೇವಿಯ ಮೂರ್ತಿಯಲ್ಲಿ ಶಕ್ತಿ ಆವಾಹನೆಯಾಗುತ್ತದೆ ಎಂಬುದು ನಂಬಿಕೆ. ದೇವಿಯನ್ನು 9 ದಿನಗಳಕಾಲ ಆರಾಧಿಸಿ ನಂತರ ಕಲ್ಲಾಣಿಯಲ್ಲಿ ವಿಸರ್ಜಿಸಲಾಗುತ್ತದೆ. ಅಮ್ಮನಿಗೆ ಹರಕೆಯ ರೂಪದಲ್ಲಿ ಸೀರೆ.ಅಕ್ಕಿ ಯನ್ನು ನೀಡುವುದು ಪದ್ದತಿ ತಾಯಿಗೆ ಕರ್ಪೂರವೆಂದರೆ ಬಲು ಪ್ರೀತಿ ಎಂಬುದು ಪ್ರತೀತಿ ಕಾರಣ ದೇವಿಯ ದೇಗುಲದ ಕರ್ಪೂರದ ಕುಂಡ 9 ದಿನಗಳಕಾಲ ನಿರಂತರ ಪ್ರಜ್ವಲಿಸುತ್ತದೆ.9 ದಿನಗಳ ಕಾಲ ಭಕ್ತರಿಗೆ ದಾಸೋಹವಿರುತ್ತದೆ.ಮುಂಜಾನೆಯಿಂದ ರಾತ್ರಿ 11 ಗಂಟೆಯ ವರೆಗೂ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.

ಮಾರ್ಗ: ಅರಸೀಕೆರೆ ತಾಲೋಕು ಕೇಂದ್ರದಿಂದ 29 ಕಿ.ಮೀ. ದೂರದಲ್ಲಿದೆ. ಹಾಗೂ ಹಾಸನ ಜಿಲ್ಲಾ ಕೇಂದ್ರದಿಂದ 72 ಕಿ.ಮೀ ದೂರದಲ್ಲಿದೆ. ತಾಲೋಕು ಕೇಂದ್ರಕ್ಕೆ ಬಸ್ಸು ಹಾಗೂ ರೈಲಿನ ಮೂಲಕ ಬರಬಹುದಾಗಿದೆ. ತಾಲೋಕು ಕೇಂದ್ರದಿಂದ ಮಾಡಾಳುವಿಗೆ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

Leave a Reply

Your email address will not be published. Required fields are marked *