ಇಂದಿರಾ ಕ್ಯಾಂಟೀನ್ ಗಿಂತ ಕಡಿಮೆ ದರದಲ್ಲಿ ಇಲ್ಲಿ ತಿಂಡಿಯನ್ನ ತಿನ್ನಬಹುದು. ಹಾಗಾದ್ರೆ ಈ ಕ್ಯಾಂಟೀನ್ ಇರುವುದು ಎಲ್ಲಿ? ಸಂಪೂರ್ಣ ಮಾಹಿತಿ ನಿಮಗಾಗಿ. ಈ ಹೋಟೆಲ್ ಇರುವುದು ಕೊಪ್ಪಳದಲ್ಲಿ. ನಿತ್ಯವೂ ಕೂಡ ಶಾಲೆ ಮಕ್ಕಳು ಇಲ್ಲಿ ಬಂದು ಟಿಫಿನ್ ನನ್ನ ತೆಗೆದುಕೊಂಡು ಹೋಗ್ತಾರೆ. ಒಂದು ರೂಪಾಯಿಗೆ ಒಂದು ಪೇಪರ್ ಮೆಂಟ್ ಕೂಡ ಸಿಗದ ಈ ಕಾಲದಲ್ಲಿ ಒಂದು ರೂಪಾಯಿಗೆ ಒಂದು ಇಡ್ಲಿ ಪೂರಿ ಸಿಗುತ್ತದೆ ಈ ಹೋಟೆಲ್ನಲ್ಲಿ. ಹೋಟೆಲ್ ನ ಮಾಲೀಕರು ಹೇಳುತ್ತಾರೆ ಹೋಟೆಲ್ ಮಾಡಿದ್ದು ಯಾವುದೇ ವ್ಯಾಪಾರಕಲ್ಲ ಹಣವನ್ನು ದುಡಿಯಲು ಹಸಿವನ್ನ ನೀಗಿಸುವುದೇ ನಮ್ಮ ಕೆಲಸ ಅಂತ ಹೇಳಿದ್ದಾರೆ.

ಇದು ಇರುವುದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ. ಮಾಲೀಕರ ಹೆಸರು ದೇವಪ್ಪ ಹಳ್ಳಿ ಕೆರೆ ಅಂತ. 10 ಪೂರಿ 10 ಇಡ್ಲಿ ತಿಂದರೂ ಕೂಡ 20 ರೂಪಾಯಿ ದಾಟುವುದಿಲ್ಲ. ಇವರು ಮನೆಯಲೇ ಹೋಟೆಲ್ ನಡೆಸುತ್ತಿದ್ದಾರೆ ಸುಮಾರು 20 ವರ್ಷಗಳಿಂದ ಇವರ ಹೋಟೆಲ್ ಹೆಸರುವಾಸಿಯಾಗಿದೆ

ಹತ್ತು ರೂಪಾಯಿಗೆ ಒಂದು ಪ್ಲೇಟ್ ಪಲಾವ್ ಸಿಗತ್ತೆ ಇಲ್ಲಿ. ದೇಶದ ಯಾವ ಮೂಲೆಯಲ್ಲಿಯೂ ಕೂಡ ಎಷ್ಟು ಕಮ್ಮಿ ಪುಲಾವ್ ಅಲ್ಲ ಒಂದು ಪೂರಿ ಕೂಡ ಬರೋದಿಲ್ಲ. ನಿಜವಾಗಲೂ ಆಶ್ಚರ್ಯ ಎನ್ನುವಂತಿದೆ. ಇಷ್ಟು ದುಬಾರಿಯಾಗಿರುವ ಜಗತ್ತಿನಲ್ಲಿ ಇಷ್ಟು ಅತಿ ಕಡಿಮೆ ದರದಲ್ಲಿ ಉಪಹಾರ ಕೊಡುತ್ತಿರುವ ದೇವಪ್ಪ ಹಳ್ಳಿಗೆರೆಯವರು ನೆಮ್ಮದಿಯಿಂದ ಅವರ ಜೀವನ ನಡೆಸುತ್ತಿದ್ದಾರೆ..

ಶಾಲೆ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ ಇವರ ತಿಂಡಿಯನ್ನು ಬೆಳಿಗ್ಗೆ ಎದ್ದು ಸೀದಾ ಇಲ್ಲಿ ಬಂದು ಶಾಲೆಗೆ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಸ್ಥಳೀಯರು ಕೂಡ ಈ ಹೊಟೇಲ್ ಗೆ ತುಂಬಾ ಮುಗಿಯುತ್ತಾರೆ ರೇಟ್ ಕಮ್ಮಿ ಅಂತ ಟೆಸ್ಟ್ ಕೂಡ ಕಮ್ಮಿಯಾಗಿಲ್ಲ. ಅಂತ ಹೇಳುತ್ತಿದ್ದಾರೆ ಸ್ಥಳೀಯರು. ಈ ಹಣದುಬ್ಬರದ ಜಗತ್ತಿನಲ್ಲಿ ಈ ದುಬಾರಿ ದುನಿಯಾದಲ್ಲಿ ಇಂಥವರು ಕೂಡ ಇರ್ತಾರ ಅಂತ ಆಶ್ಚರ್ಯವಾಗುತ್ತಿದೆ ಅಲ್ಲವೇ? ಇನ್ನು ಕೂಡ ಹೊಸ ಹೊಸ ಮಾಹಿತಿಯೊಂದಿಗೆ ಭೇಟಿಯಾಗೋಣ.

Leave a Reply

Your email address will not be published. Required fields are marked *