ಕೆಲವೊಮ್ಮೆ ಮನೆಯಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂದರೆ ನಾವು ಎಷ್ಟೇ ಕಕಷ್ಟಪಟ್ಟು ದುಡಿದರು ಕೂಡ ನಮ್ಮ ಮನೆಯಲ್ಲಿ ಆಗಲಿ ಸಾಧ್ಯವಾಗುವುದಿಲ್ಲ ಇದಕ್ಕೆ ಕೆಲವೊಂದು ಕಾರಣಗಳಿವೆ ಅದೇ ಕಾರಣಗಳು ನಾವು ಇಲ್ಲಿ ತಿಳಿಸಲು ಪ್ರಯತ್ನ ಮಾಡಿದ್ದೇವೆ ಮನೆಯ ಅಭಿವೃದ್ಧಿ ಆಗದಿರಲು ಬಹು ಮುಖ್ಯ ಕಾರಣಗಳು ನಾವು ಎಲ್ಲೇ ಹೋಗಲಿ ಎಷ್ಟೇ ವೈಭವಯುತ ಸ್ಥಾನದಲ್ಲಿ ಕಳೆದರು ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಅತ್ತ ಇತ್ತ ಚೆಲ್ಲುವುದು.

ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೆ ಕತ್ತಲಲ್ಲಿ ಇರುವುದು ದೇವರ ಮುಂದೆ ದೀಪ ಹಚ್ಚದೆ ಇರುವುದು ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ಉಂಟಾಗುತ್ತದೆ. ದಿನನಿತ್ಯ ಸ್ನಾನ ಮಾಡದೆ ಹಾಗೆ ಇರುವುದು. ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು. ಸದಾ ಬೇರೆಯವರಿಂದ ಅಥವಾ ಬೇರೆಯವರ ಮನೆಯಿಂದ ಏನನ್ನಾದರೂ ಕಡ ತೆಗೆದುಕೊಳ್ಳುವುದು .ಮುರಿದ ಬಾಚಣಿಕೆಯಿಂದ ತಲೆ ಬಾಚಿಕೊಳ್ಳುವುದು ಮನೆಯ ಮುಂದೆ ಚಪ್ಪಲಿಯನ್ನು ಬೋರಲು ಹಾಕಿ ಹಾಗೆಯೇ ಬಿಡುವುದು ಯಾವಾಗಲೂ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುವುದು.

ಪ್ರತಿದಿನ ದೇವರ ಕೋಣೆ ಸ್ವಚ್ಛಗೊಳಿಸದಿರುವುದು ಅಥವಾ ದೇವರ ಪೂಜೆಯನ್ನು ಮಾಡದೆ ಹಾಗೆ ಇರುವುದು ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಂಡು ಅದರಲ್ಲಿ ಮುಖವನ್ನು ನೋಡಿಕೊಳ್ಳುವುದು.ಸೂರ್ಯೋದಯವಾದರೂ ಬಹಳ ಹೊತ್ತಿನವರೆಗೆ ಮಲಗಿರುವುದು ಮತ್ತು ತಡವಾಗಿ ಎದ್ದೇಳುವುದು.ಸದಾ ಶೌಚಾಲಯದ ಬಾಗಿಲನ್ನು ತೆರೆದಿಡುವುದು ಮತ್ತು ವಾಶ್ರೂಮ್ ಅನ್ನು ಕ್ಲೀನ್ ಮಾಡದೆ ಹಾಗೆ ಗಬ್ಬು ವಾಸನೆ ಬರುವಂತೆ ಇಟ್ಟುಕೊಳ್ಳುವುದು. ಕೈಕಾಲುಗಳನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು.

ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದು ತಿಳಿದು ಬೇಜಾರು ಮಾಡಿಕೊಳ್ಳುವುದು ಅತಿಥಿಗಳಿಗೆ ಮರ್ಯಾದೆ ಕೊಡದಿರುವುದು ಮತ್ತು ಅವರೊಂದಿಗೆ ಒರಟಾಗಿ ಮಾತನಾಡುವುದು ಅಡುಗೆ ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು ಆಹಾರವನ್ನು ಪ್ರತಿನಿತ್ಯ ವೇಸ್ಟ್ ಮಾಡುವುದು.ಮನೆಯಲ್ಲಿ ನಳಗಳು ಸೋರುತ್ತಿದ್ದರೆ ಸರಿ ಮಾಡಿಸದೆ ಹಾಗೆ ಬಿಡುವುದು .ಮನೆಯಲ್ಲಿ ಕೆಟ್ಟ ಪದಗಳನ್ನು ಬಳಸುವುದು ಹಿರಿಯರಿಗೆ ಗೌರವ ಕೊಡದಿರುವುದು ಮತ್ತು ಅವರೊಂದಿಗೆ ಏಕವಚನದಲ್ಲಿ ಮಾತನಾಡುವುದು ಹಲ್ಲು ಕಚ್ಚುವುದು ಉಗುರು ಕಡಿಯುವುದು ಹೊತ್ತಿಲ್ಲದ ಹೊತ್ತಿನಲ್ಲಿ ನಿದ್ರೆ ಮಾಡುವುದು ತಡವಾಗಿ ಊಟ ಮಾಡುವುದು ಮತ್ತು ಸ್ನಾನ ಮಾಡುವುದು ಮನೆ ಎಂದರೆ ಅದು ಸ್ವರ್ಗ ಅದನ್ನು ಮಂದಿರ ಮಾಡುವುದು ಪ್ರತಿಯೊಬ್ಬರ ಕೈಯಲ್ಲಿದೆ ಈ ಮೇಲಿನ ಲಕ್ಷಣಗಳನ್ನು ಹೊಂದಿರುವವರು ಆದಷ್ಟು ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಸುಖವಾದ ಜೀವನವನ್ನು ಸಾಗಿಸಿ.

Leave a Reply

Your email address will not be published. Required fields are marked *