ಸ್ನೇಹಿತರೆ ನಮ್ಮ ಭಾರತದ ಜನರು ಬಹಳಷ್ಟು ಹೊಸ ವಸ್ತುಗಳನ್ನು ಕಂಡುಹಿಡಿಯಲು ಮುಂದೆ ಇರುತ್ತಾರೆ ಹಾಗೆ ಯಾವುದೇ ಒಂದು ಹಾಳಾದ ವಸ್ತುಗಳನ್ನು ಕೊಟ್ಟರೂ ಕೂಡ ಅದನ್ನು ಉಪಯೋಗಕ್ಕೆ ಬರುವಂತೆ ಮಾಡುವುದು ನಮ್ಮ ಜನಕ್ಕೆ ಹೊಸದೇನಲ್ಲ. ನಮ್ಮ ಜಗತ್ತಿನಲ್ಲಿ ನೀವು ಎಲ್ಲಾ ಕಡೆ ನೋಡಿದರೆ ನಿಮಗೆ ಸಾಮಾನ್ಯವಾಗಿ ಕಾಣುವುದು ಸಿಗರೇಟ್ ಸೇದುವವರು ಇದು ನಮಗೆ ಆರೋಗ್ಯಕ್ಕೆ ಬಹಳಷ್ಟು ಹಾನಿಕಾರಕವೆಂದು ಗೊತ್ತಾದರೂ ಕೂಡ ಯಾವುದೇ ಕಾರಣಕ್ಕೂ ಜನ ಇದನ್ನು ಬಿಡಲು ಮುಂದೆ ಬರುವುದಿಲ್ಲ.

ಹಾಗೆ ನೋಡಿದರೆ ಇದರಿಂದ ಸುಮಾರು ಜನ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಷ್ಟೋ ಸಾರಿ ಇದರ ಬಗ್ಗೆ ಪರಿಣಾಮವನ್ನು ಹೇಳಿದರೂ ಕೂಡ ಜನ ಬಿಡುವುದಿಲ್ಲ ಇವತ್ತಿನ ಮಾಹಿತಿ ಕೂಡ ಅದೇ ರೀತಿ ವಿಷಯಕ್ಕೆ ಸಂಬಂಧಪಟ್ಟಿದೆ. ಪ್ರಪಂಚದಲ್ಲಿ ಸಿಗರೇಟ್ ಸೇದುವವರಿಗೆನು ಕಮ್ಮಿ ಇಲ್ಲ. ಬರೀ ಬೆಂಗಳೂರಿನಲ್ಲಿ ಮಾತ್ರ ದಿನಕ್ಕೆ 31,00,000 ಸಿಗರೇಟ್ ಸೇದುತ್ತಾರೆ. ಸೇರಿದ ಮೇಲೆ ಸಿಗರೇಟ್ ಬೇರೆ ಕಡೆ ಬಿಸಾಡಿ ಬಿಡುತ್ತಾರೆ. ಇಲ್ಲ ಕಾಲುಗಳಿಗೆ ಹಾಕಿ ತುಳಿಯುತ್ತಾರೆ. ಆದರೆ ಇವರು ಬಿಸಾಕಿದ ಸಿಗರೇಟ್ ಫಿಲ್ಟರ್ ನಿಂದ ಕೋಟಿ ಕೋಟಿ ಗಳಿಸುತ್ತಿದ್ದಾರೆ.

ವಿಶಾಲ ಮತ್ತು ನಮನ್ ಗುಪ್ತ ಒಂದು ಸಾರಿ ಸ್ನೇಹಿತರ ಜೊತೆಗೆ ಪಾರ್ಟಿ ಮಾಡಲು ಹೋಗಿದ್ದರು. ಆಗ ಅಲ್ಲಿ ಬಿದ್ದಿದ್ದ ಸಾವಿರಾರು ಸಿಗರೇಟ್ ಫಿಲ್ಟರ್ ನೋಡಿ ಒಂದು ಕ್ಷಣ ಶಾಕ್ ಆದರು. ಇಲ್ಲಿ ಇಷ್ಟು ಇದ್ದರೆ ಪ್ರಪಂಚದಲ್ಲಿ ಎಷ್ಟು ಇರಬೇಕು ಎಂದುಕೊಂಡ ವಿಶಾಲ್ ಮತ್ತು ನಮ್ಮನ್ ಗುಪ್ತಾಗೆ ಅಲ್ಲಿಗೆ ಒಂದು ಯೋಚನೆ ಬಂದಿತ್ತು. ಆ ಯೋಚನೆಯ ತಮ್ಮ ವ್ಯಾಪಾರಕ್ಕಾಗಿ ತಿರುಗಿಸಿಕೊಂಡರು ಈ ಒಂದು ಯೋಚನೆಯಿಂದ ಇವರ ವ್ಯಾಪಾರ ಇವತ್ತಿಗೆ ಕೋಟಿ ಕೋಟಿ ಗುರಿ ಮುಟ್ಟಿದೆ ಅಷ್ಟಕ್ಕೂ ಅವರು ಮಾಡಿದ್ದು ಏನು ಗೊತ್ತಾ ಒಂದು ಆಲೋಚನೆ ಬರುತ್ತೆ.

ಆ ಪ್ಲಾನ್ ಏನು ಅಂದ್ರೆ ಸೇದಿ ಬಿಸಾಕಿದ ಸಿಗರೇಟು ಫಿಲ್ಟರ್ ಗಳನ್ನು ರೀಸೈಕಲ್ ಮಾಡಿದರೆ ಹೇಗೆ ಅನ್ನೋದು ಈ ಆಲೋಚನೆ ಬಂದಿದ್ದೇ ತಡ. ಇಬ್ಬರು ಸ್ನೇಹಿತರು ಸೇರಿಕೊಂಡು ಕಂಪನಿಯನ್ನು ಸ್ಟಾರ್ಸ್ ಮಾಡ್ತಾರೆ. ಸೇದಿ ಬಿಸಾಕಿದ ಸಿಗರೇಟ್ ಗಳನ್ನು ರಿಸೀವ್ ಮಾಡೋದೇ ಈ ಕಂಪನಿಯ ಉದ್ದೇಶ. ಆದರೆ ಅಷ್ಟು ದೊಡ್ಡ ಮೊತ್ತದ ಸಿಗರೇಟ್ ಫಿಲ್ಟರ್‌ಗಳನ್ನು ಶೇಖರಣೆ ಮಾಡೋದು ಹೇಗೆ ಅನ್ನೋದು ಅವರ ಮುಂದಿದ್ದ ದೊಡ್ಡ ಸವಾಲು. ಆಗ ಸಿಗರೇಟ್ ಶೇಖರಣೆ ಮಾಡುವುದಕ್ಕೆ ಒಂದು ಐಡಿಯಾ ಮಾಡಿದ ಇಬ್ಬರು ಸ್ನೇಹಿತರು ಯಾರು ಸಿಗರೇಟ್ ಶೇಖರಣೆ ಮಾಡಿ ಕೊಡ್ತಾರೋ ಅವರಿಗೆ ಒಂದು ಕೆಜಿಗೆ ಇಷ್ಟು ಅಂತ ದುಡ್ಡು ಕೊಡುತ್ತೇವೆ ಎಂದು ಪಾಂಪ್ಲೆಟ್ ಹಂಚಿದರು.

ಯಾರಿಗಾದರೂ ಆಸಕ್ತಿ ಇದೆ ಅಂದ್ರೆ ಅವರ ಮನೆ ಬಳಿ ಒಂದು ಬಾಕ್ಸ್ ಇಡಲು ಶುರುಮಾಡಿದರು. ಯಾರ್ಯಾಗಿ ಸಿಗರೇಟ್ ಶೇಖರಣೆ ಮಾಡಿ ಕೊಟ್ಟರೆ ಒಂದು ಕೆಜಿಗೆ ಎಂಟನೂರು ರೂಪಾಯಿ ಕೊಡಲಾಗುತ್ತದೆ. ಇದನ್ನು ಕೇಳಿದ ಸಿಗರೇಟ್ ಸೇದುವವರು ಅವರೇ ಶೇಖರಣೆ ಮಾಡಿ ಮಾರಾಟ ಮಾಡಲು ಮುಂದಾದರು. ಕಡಿಮೆ ಶೇಖರಣೆ ಆಗಿದ್ದರೆ ಅದರ ತೂಕದ ಮೇಲೆ ದುಡ್ಡು ಕೊಡಲಾಗುತ್ತದೆ. ಈಗ ತಮ್ಮ ಕಂಪನಿಯನ್ನು 20 ರಾಜ್ಯಗಳಲ್ಲಿ ವಿಸ್ತರಿಸಿರುವ ವಿಶಾಲ್ ಮತ್ತು ನಮನ್ 10,000 ಸ್ಥಳಗಳಲ್ಲಿ ಶೇಖರಣೆಯನ್ನು ಶುರು ಮಾಡಿದ್ದಾರೆ.

Leave a Reply

Your email address will not be published. Required fields are marked *