ವ್ಯವಸಾಯದಲ್ಲಿ ಪ್ರಯೋಗ ಮಾಡುವುದರ ಜೊತೆ ಶ್ರದ್ಧೆಯಿಂದ ಮಾಡಿದರೆ ಅದು ನಾವು ಈ ಊಯಿಸಿದ್ದಕ್ಕೂ ಮೀರಿ ಎರಡು ಪಟ್ಟು ಲಾಭ ಕೊಡುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ರೈತ ಹೈಟೆಕ್ ರೈತ ಎಂದು ಹೆಸರುವಾಸಿಯಾಗಿರುವ ಇವರ ತೋಟಕ್ಕೆ 10,00,000 ಜನ ಭೇಟಿ ಕೊಟ್ಟಿದ್ದಾರೆ ಅಂದ್ರೆ ನೀವೇ ಊಹೆ ಮಾಡಿಕೊಳ್ಳಿ. ಈ ರೈತನ ಟೆಕ್ನಿಕ್ ಎಷ್ಟು ಫೇಮಸ್ ಎಂದು ಹಾಗಾದ್ರೆ ಇವರು ಮಾಡಿದ ವಿಧಾನಗಳಾದರೂ ಏನು ಎಂದು ನೋಡೋಣ ಬನ್ನಿ.

ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಇವರ ಹೆಸರು ರಾಮ್‌ಶರಣ್ ವರ್ಮ ಯಾವುದೇ ಹೊಸ ಪ್ರಯೋಗ ಮಾಡಿ ತಾತ ಮುತ್ತಾತರ ಕಾಲದಿಂದ ಮಾಡಿಕೊಂಡು ಬರುತ್ತಿದ್ದ ಒಂದೇ ಪದ್ಧತಿಯ ವ್ಯವಸಾಯ ಮಾಡುತ್ತಿದ್ದ ತಂದೆಯನ್ನು ನೋಡಿ ರಾಮ್ ಅವರಿಗೆ ಬೇಜಾರಾಯಿತು. ಕಾರಣ ಬೆವರು ಸುರಿಸಿ ದುಡಿಯುತ್ತಿದ್ದ ತಂದೆಗೆ ಕೊನೆಗೆ ಒಂದು ರೂಪಾಯಿಯನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಒಂದಷ್ಟು ಹಣವನ್ನು ಜೋಡಿಸಿಕೊಂಡ ರಾಮ್ ಅವರು ಭಾರತದ ನಾನಾ ಪ್ರದೇಶಗಳಿಗೆ ಸುತ್ತಿದರು. ಆಗಲೇ ಸಕ್ಸಸ್ ಆಗಿದ್ದ ರೈತರನ್ನು ಭೇಟಿ ಮಾಡಿ ಅವರಿಂದ ಮಾರ್ಗದರ್ಶನ ಪಡೆದು ವಾಪಸ್ ಊರಿಗೆ ಹೋಗಿ ನಾನು ಹೊಸ ವಿಧಾನದ ಮೂಲಕ ವ್ಯವಸಾಯ ಮಾಡುತ್ತೇನೆ ಎಂದು ತಂದೆಗೆ ಹೇಳಿದರು.

ಆದರೆ ತಂದೆ ಅದಕ್ಕೆ ಒಪ್ಪಲಿಲ್ಲ. ಆಗ ಒಂದು ಎಕರೆ ಜಮೀನನ್ನು ತಂದೆಯಿಂದ ಪಡೆದ ರಾಮ್ ಅವರು ಅದರದಲ್ಲಿ ಬಾಳೆಹಣ್ಣಿನ ಗಿಡ ಹಾಕಿದರು. ಹಾಗಾದ್ರೆ ಅವರು ಉಪಯೋಗಿಸಿದ ವಿಧಾನ ಯಾವುದು ಗೊತ್ತ ಬಾಳೆಹಣ್ಣಿನ ಟಿಶ್ಯೂ ವಿಧಾನವನ್ನು ಮಾಡಲು ಮುಂದಾದಾಗ ಅವರಿಗೆ ಸಾಕಷ್ಟು ವಿರೋಧಗಳು ಬಂದರೂ ಕೂಡ ತನ್ನ ಗುರಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲಿಲ್ಲ ಮನುಷ್ಯನಿಗೆ ಜೀವನದಲ್ಲಿ ಗುರಿಯೊಂದು ಇದ್ದರೆ ಸಾಕು. ಯಾವುದೇ ಕಷ್ಟಗಳು ಬಂದರೂ ಕೂಡ ಗುಡ್ಡ ಬಂದರೂ ಕೂಡ ಅದನ್ನು ಕಡೆದು ಹಾಕುತ್ತಾರೆ ಹಾಗೆಯೇ ರಾಮ ಅವರು ಕೂಡ ಇದೇ ರೀತಿಯ ಮಾತುಗಳನ್ನು ಪಾಲಿಸುತ್ತಾ ಬಂದಿದ್ದಾರೆ.

ಇದೇ ಕಾರಣದಿಂದ ಅವರಿಗೆ ಮುಂದೊಂದು ದಿನ ಒಳ್ಳೆಯ ಲಾಭ ಬರುತ್ತದೆ ಎಂದು ಅವರು ಊಹಿಸಿಕೊಂಡಿದ್ದರು. ರಾಮ್ ಅವರು ಒಳ್ಳೆಯ ಫಸಲಿನ ಜೊತೆ ಒಳ್ಳೆಯ ರುಚಿಕರ ಬಾಳೆಹಣ್ಣು ಕೊಡುತ್ತಿದ್ದ ಗಿಡಗಳನ್ನು ತಂದು ತಾವೇ ಖುದ್ದಾಗಿ ತಮ್ಮ ತೋಟದಲ್ಲಿ ಟಿಶ್ಯೂ ಕಲ್ಚರ್ ಮೂಲಕ ಬಾಳೆಹಣ್ಣಿನ ಗಿಡಗಳನ್ನು ಬೆಳೆಸಿ ಅವುಗಳನ್ನು ತನ್ನ ಒಂದು ಎಕರೆ ಜಮೀನಿನಲ್ಲಿ ನೆಟ್ಟಿದ್ದರು. 1,00,000 ಇನ್ವೆಸ್ಟ್ ಮಾಡಿದ ರಾಮ್ ಅವರು ಗಳಿಸಿದ್ದು ನಾಲ್ಕು ಲಕ್ಷದಷ್ಟು ಲಾಭ. ಹೀಗೆ ವಿವಿಧ ಪ್ರಯೋಗಗಳನ್ನು ಮಾಡಿದ ರಾಮ್ ಅವರು ಬಳಸಿದ್ದು ನಾಲ್ಕು ತಂತ್ರಗಳನ್ನು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು, ಕೃಷಿ ಮಾಡುವುದು, ವಾತಾವರಣ ಅರ್ಥ ಮಾಡಿಕೊಂಡು ಒಳ್ಳೆಯ ತಳಿಯ ಬೀಜ ಉಪಯೋಗಿಸುವುದು ಹಾಗೂ ಹೊಸ ಹೊಸ ಪ್ರಯೋಗ ಮಾಡುವುದು.

ಹೀಗೆ ತಂತ್ರಜ್ಞಾನ ಬಳಸಿಕೊಂಡರು. ಅವರು ಒಂದು ಎಕರೆ ಜಮೀನಿನಲ್ಲಿ 500 ಕ್ವಿಂಟಲ್ ಟೊಮೆಟೊ ಬೆಳೆದರು. ಈಗ ನೂರಾ 50 ಎಕರೆಯಲ್ಲಿ ವ್ಯವಸಾಯ ಮಾಡುತ್ತಿರುವ ರಾಮ್ ಅವರಿಗೆ ದೇಶ ವಿದೇಶಗಳಿಂದ ಆಹ್ವಾನ ಬರುತ್ತಿದೆ. ಇವರ ತೋಟಕ್ಕೆ ಇಲ್ಲಿಯವರೆಗೂ 10,00,000 ಜನ ಭೇಟಿ ಕೊಟ್ಟಿದ್ದಾರೆ. ಹಳ್ಳಿಯ ಜನ ನಗರಗಳಿಗೆ ಹೋಗದಂತೆ ನೋಡಿಕೊಳ್ಳುವುದೇ ನನ್ನ ಉದ್ದೇಶ ಎಂದು ಭಾವಿಸಿದ ರಾಮ್ ಅವರು ಬಹಳಷ್ಟು ಜನರಿಗೆ ಜನರಿಗೆ ಉದ್ಯೋಗ ಕೊಟ್ಟು ಅವರಿಗೆ ಒಳ್ಳೆಯ ಮಾರ್ಗದರ್ಶನವನ್ನು ಕೊಟ್ಟಿದ್ದಾರೆ.

 

Leave a Reply

Your email address will not be published. Required fields are marked *