ನಮ್ಮ ದೇಶದಲ್ಲಿ ಹಲವಾರು ಜನ ನಟರು ತಾವು ನೀಡಿದ ದಾನದಿಂದಲೇ ಹೆಸರುವಾಸಿಯಾಗಿದ್ದಾರೆ ಅವರು ಮಾಡುವ ದಾನ ಯಾರಿಗೂ ಗೊತ್ತಾಗದ ಹಾಗೆ ನಡೆಸಿಕೊಂಡು ಬರುತ್ತಿದ್ದಾರೆ ಭಾರತೀಯ ಚಿತ್ರರಂಗದಲ್ಲಿ ಈ ನಟ ಒಬ್ಬ ಅದ್ಭುತ ಕಲಾವಿದ. ಯಾವ ಪಾತ್ರ ಕೊಟ್ಟರು ಸರಿ ಸರಿ ಎನಿಸುವಂತೆ ನಟನೆ ಹೀರೋ ಆಗಿ ವಿಲನ್ ಆಗಿ ಯಾವುದೇ ಭಾಷೆಯಾದರೂ ಸರಿ ಅಷ್ಟೇ ಗಡುಸಿನ ನಟನೆ ಇನ್ನೊಂದು ಕಡೆ ತನ್ನ ಆಸ್ತಿಯನ್ನು ಇತರರಿಗೆ ಹಂಚಿ ನಿಜವಾದ ಮಾನವೀಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಅಷ್ಟಕ್ಕೂ ಈ ನಟ ಯಾರು ಅವರೇ ನಾನಾ ಪಾಟೇಕರ್ ಕಡು ಬಡತನದಲ್ಲಿ ಹುಟ್ಟಿದ ನಾನಾ ಪಾಟೇಕರ್ ಪ್ರಾರಂಭಿಕ ದಿನಗಳಲ್ಲಿ ರೋಡ್ ಪಕ್ಕ ಪೇಂಟ್ ಹಾಕುವುದು ಸಿನಿಮಾ ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸುವುದು ಹೀಗೆ ಕೈಗೆ ಸಿಕ್ಕ ಕೆಲಸ ಮಾಡುತ್ತಿದ್ದರು ಆಗ ದಿನಕ್ಕೆ ₹30 ಸಂಪಾದಿಸುತ್ತಿದ್ದರು. ವ್ಯವಸಾಯದ ಕುಟುಂಬದಲ್ಲಿ ಹುಟ್ಟಿದ ನಾನು ಬಡತನದಿಂದ ಆಚೆ ಬರಬೇಕು ಎಂದು ಥಿಯೇಟರ್ ಆರ್ಟಿಸ್ಟ್ ಆಗಿ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತನ್ನ ಅಮೋಘ ನಟನೆಯಿಂದ ಚಿತ್ರಗಳನ್ನು ಸಹ ಮೆಚ್ಚಿಸಿದರು. ಕೃಷಿಕನಾಗಿ ತನ್ನ ತಂದೆ ತಾನು ಅನುಭವಿಸಿದ ಕಷ್ಟಗಳನ್ನು ನಾನಾ ಪಾಟೇಕರ್ ಮರೆಯಲಿಲ್ಲ.

ರೈತರ ಅಭ್ಯುದಯಕ್ಕಾಗಿ ಪಣ ತೊಟ್ಟಿದ್ದ ಈ ನಟ ‌ಪೌಂಡೇಷನ್ನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ರೈತರ ನಾನೂರು ಕುಟುಂಬಗಳಿಗೆ 15 ಸಾವಿರದಂತೆ ಹಂಚಿದರು. ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ರೈತರಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲು ಸುಮಾರು ಎರಡು ಕೋಟಿಗೂ ಅಧಿಕ ಹಣ ಶೇಖರಿಸಿದರು ಸಂಪಾದಿಸಿದ 90% ಹಣವನ್ನು ಫೌಂಡೇಶನ್ ಗೆ ಹಾಕಿ ರೈತರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ನಾನಾ ಪಾಟೇಕರ್ ಈಗಲೂ ಹಳ್ಳಿಯ ಒಂದು ಸಿಂಗಲ್ ಬೆಡ್ ರೂಂ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಶೂಟಿಂಗ್ ಇಲ್ಲ ಅಂದ್ರೆ ಮುಗಿದ ಮೇಲೆ ಒಂದು ಟವೆಲ್ ಹಾಕಿಕೊಂಡು ಹಳ್ಳಿಗಳನ್ನು ಸುತ್ತುವ ಇವರು ದಿನವೆಲ್ಲ ಹಳ್ಳಿಯಲ್ಲೇ ಇದ್ದು ಅವರ ತೊಂದರೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವವರೆಗೂ ಬಿಡುವುದಿಲ್ಲ. ವ್ಯವಸಾಯ ಮಾಡಲು ರೈತರಿಗೆ ನೀರಿನ ವ್ಯವಸ್ಥೆ ಮಾಡುವುದು ನಾನು ಅವರ ಮುಖ್ಯ ಉದ್ದೇಶ ಆಗಿದೆ.ನಾನು ಅಂದ್ರೆ ನಮ್ಮಣ್ಣ ಅನ್ನೋ ಭಾವನೆ. ನೂರಾರು ಹಳ್ಳಿ ಜನರ ಮನಸ್ಸಿನಲ್ಲಿದೆ. ಹಾಗಾಗಿ ಈ ಒಂದು ಭಾವನೆಯನ್ನು ಅವರದ ದಕ್ಕೆ ತರದ ಹಾಗೆ ನೋಡಿಕೊಳ್ಳುತ್ತಾ ಬರುತ್ತಿದ್ದಾರೆ. ನೋಡಿದ್ರಲ್ಲ ತಾನು ಎಷ್ಟೇ ಯಶಸ್ವಿಯಾಗಿ ಹೊರಹೊಮ್ಮಿದ ನಟ ಬಡವರಿಗಾಗಿ ಎಷ್ಟೆಲ್ಲ ದಾನಗಳನ್ನು ಮಾಡುತ್ತಾರೆ ಅಂತ.

Leave a Reply

Your email address will not be published. Required fields are marked *