ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೀವು ಅರ್ಜಿ ಸಲ್ಲಿಸಿದ್ದೀರಾ ಪ್ರತಿ ತಿಂಗಳು ಕೂಡ ನೀವು 2000 ಹಣವನ್ನು ಪಡೆಯುತ್ತಿದ್ದೀರಾ. ₹2000 ಬರ್ತಾ ಇದೆ. ನಮಗೆ ಇನ್ನು ಗೃಹಲಕ್ಷ್ಮಿ ಪಿಂಕ್ ಕಾರ್ಡ್ ಸಿಕ್ಕಿಲ್ಲಾ ನೀವು ಅಂದುಕೊಳ್ಳಬಹುದು ನಮಗೆ ಪಿಂಕ್ ಕಾರ್ಡ್ ಸಿಗದೇ ಇರುವಂತಹ ಕಾರಣದಿಂದ ನಿಮ್ಮ ಹತ್ತನೇ ಕಂತಿನ ಹಣವನ್ನು ಸರ್ಕಾರದವರು ನಿಲ್ಲಿಸಿದ್ದಾರೆ ಎಂಬ ಗೊಂದಲಗಳು ಸಾಮಾನ್ಯವಾಗಿ ನಿಮಗೆ ಕಾಡುತ್ತದೆ ಅದೇ ರೀತಿಯಿಂದಾಗಿ ನಾವು ಇವತ್ತಿನ ಮಾಹಿತಿಯಲ್ಲಿ ನಿಮಗೆ ಪಿಂಕ್ ಕೋಡ್ ಹೇಗೆ ತೆಗೆದುಕೊಳ್ಳಬೇಕು. ಹಾಗೆ ಇದರ ಜೊತೆಗೆ ನಿಮ್ಮ ಹತ್ತನೇ ಕಂತಿನ ಹಣ ಏನಾಗಿದೆ ಎಂಬ ಮಾಹಿತಿಯನ್ನು ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮೊದಲಿಗೆ ನಾವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಕಾಂಗ್ರೆಸ್ ಸರ್ಕಾರದ ಪ್ರಮುಖ ಖಾತರಿ ಯೋಜನೆಯಲ್ಲಿ ಒಂದಾಗಿರುವ ಗ್ರಹಲಕ್ಷ್ಮಿ ಯೋಜನೆ ಇದೇ ತಿಂಗಳು ಅಂದರೆ ಆಗಸ್ಟ್ 27ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗಿತ್ತು. ಅಂದಿನಿಂದ ಮನೆಯ ಯಜಮಾನಿಯವರ ಖಾತೆಗೆ ನೇರವಾಗಿ 2000 ಹಣ ವರ್ಗಾವಣೆ ಯಾಗಲಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ತಿಳಿಸಿದ್ದರು. ಹಾಗೂ ಗೃಹಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್ ಕೂಡ ನೀಡುವುದಾಗಿ ಹೇಳಿದ್ದರು.ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಪಿಂಕ್ ಸ್ಮಾರ್ಟ್ ಕಾರ್ಡ್ ಅನ್ನು ನೀಡಲಾಗುತ್ತದೆ ಈ ಪಿಂಕ್ ಸ್ಮಾರ್ಟ್ ಕಾರ್ಡ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಡಿಸಿಎಂ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಾಗೂ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರ ಭಾವಚಿತ್ರ ಇರಲಿದೆ.

ಅದರ ಜೊತೆಗೆ ಫಲಾನುಭವಿಗಳ ವಿವರ ಕೂಡ ಈ ಒಂದು ಪಿಂಕ್ ಸ್ಮಾರ್ಟ್ ಕಾರ್ಡ್ ನಲ್ಲಿ ಇರಲಿದೆ. ಹಾಗೆ ಈ ಒಂದು ಪಿಂಕ್ ಸ್ಮಾರ್ಟ್ ಕಾರ್ಡ್ ನಲ್ಲಿ ರೂಪಾಯಿ 2000/- ಎಂದು ಸ್ಮಾರ್ಟ್ ಕಾರ್ಡ್ ನಲ್ಲಿ ನಮಗಿಸಲಾಗಿದೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇಲ್ಲಿ ತನಕ 1.05 ಕೋಟಿ ಜನರು ಈಗಾಗಲೇ ಅರ್ಜಿ ನೋಂದಾಯಿಸಿದ್ದಾರೆ . ಇನ್ನು ಕೂಡ ಅರ್ಜಿ ಯಾರು ಸಲ್ಲಿಸಿಲ್ಲ ಅವರು ಅರ್ಜಿಯನ್ನ ನೋಂದಣಿ ಮಾಡಬಹುದಾಗಿದೆ. ಅರ್ಜಿ ನೋಂದಣಿ ಮಾಡಿದವರಿಗೆ ಗೃಹ ಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದರು.

ಈಗ ಇನ್ನೊಂದು ಆಶ್ಚರ್ಯಕರ ಮಾಹಿತಿ ಏನೆಂದರೆ ನಿಮಗೆ ಒಂದು ವೇಳೆ ಪಿಂಕ್ ಕಾರ್ಡ್ ಇಲ್ಲದಿದ್ದರೆ ನಿಮಗೆ ಹತ್ತನೇ ಕಂತಿನ ಹಣ ಬರುವುದಿಲ್ಲ ಎಂದು ಸುದ್ದಿ ನೀಡಿದ್ದಾರೆ ಅವರು ಹೇಳಿರುವ ಮಾಹಿತಿಯ ಪ್ರಕಾರ ನೀವು ಯಾವುದೇ ಒಂದು ವಿಭಿನ್ನವಾದ ಅರ್ಜಿ ಸಲ್ಲಿಸಬೇಕಾದಂತಹ ಅಗತ್ಯವಿಲ್ಲ ನಿಮ್ಮ ಮನೆಗೆ ಬಂದು ಸ್ವತಃ ಅಂಗನವಾಡಿ ಕಾರ್ಯಕರ್ತರು ಈ ಪಿಂಕ್ ಕಾಡನ್ನು ನಿಮಗೆ ನೀಡಲಿದ್ದಾರೆ ಎಂದು ಹೇಳಿದ್ದರು.ಹಾಗಾಗಿ ನಿಮಗೆ ಇನ್ನೊಂದು ವಿಷಯ ಏನು ಹೇಳಬೇಕು ಎಂದರೆ ಈ ಪಿಂಕ್ ಕಾರ್ಡ್ ಇನ್ನು ಯಾರಿಗೆ ಕೂಡ ಕೊಟ್ಟಿರುವುದಿಲ್ಲ ಹಾಗಾಗಿ ಒಂದು ವೇಳೆ ಕೊಡುವುದಕ್ಕೆ ಶುರು ಮಾಡಿದರೆ ಎಲ್ಲರಿಗೂ ಒಂದೇ ಸಮನಾಗಿ ಕೊಡುತ್ತಾರೆ ಎಂಬುದು ನಾವು ಈ ಮಾಹಿತಿ ಮುಖಾಂತರ ಹೇಳಲಾಗುತ್ತದೆ ಹಾಗಾಗಿ ಗಾಬರಿ ಪಡುವಂತಹ ವಿಷಯ ಯಾವುದು ಇಲ್ಲ.

Leave a Reply

Your email address will not be published. Required fields are marked *