ವೀಕ್ಷಕರೆ ನಮ್ಮ ಜೀವನದಲ್ಲಿ ನಾವು ಹಲವಾರು ವ್ಯಕ್ತಿಗಳನ್ನು ತಮ್ಮ ಸ್ವಂತ ಅಭಿವೃದ್ದಿಗಾಗಿ ಬಹಳಷ್ಟು ದಿನಗಳಿಂದ ಕಷ್ಟವನ್ನು ಪಡುತ್ತಾ ಬರುತ್ತಿರುತ್ತಾರೆ. ಕೆಲವೊಬ್ಬರ ತಮ್ಮ ಕುಟುಂಬವನ್ನು ನಡೆಸಿಕೊಂಡು ಹೋಗುವುದಕ್ಕೆ ಬಹಳಷ್ಟು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ದುಡಿಯುತ್ತಾ ಇರುತ್ತಾರೆ ಹಾಗೆ ಇದರ ಜೊತೆಗೆ ಇಂದಿನ ಟೆಕ್ನಾಲಜಿಗಳನ್ನು ಬಳಸಿಕೊಂಡು ಯಾವುದೇ ಇಂಜಿನಿಯರಿಗಿಂತ ಕಡಿಮೆ ಅಲ್ಲ ಎಂಬುದು ರೈತ ಇತ್ತೀಚಿನ ದಿನಗಳಲ್ಲಿ ತೋರಿಸುತ್ತಾ ಬರುತ್ತಿರುತ್ತಾರೆ.

ಎಷ್ಟೋ ಜನ ತಮ್ಮ ಕೆಲಸಗಳನ್ನು ಬಿಟ್ಟು ಮತ್ತೆ ರೈತ ವರ್ಗಕ್ಕೆ ಮರಳುತ್ತಿದ್ದಾರೆ ಹಾಗೆ ಇವತ್ತಿನ ಮಾಹಿತಿ ಕೂಡ ಅದೇ ರೀತಿ ಇದೆ. ಈತ ತಾನು ಸಾಕಿರುವ ಆಕಳುಗಳಿಂದ ಲಕ್ಷಗಟ್ಟಲೆ ಆದಾಯವನ್ನು ಗಳಿಸುತ್ತಾ ಇದ್ದಾನೆ.ಹೈನುಗಾರಿಕೆ ಮಾಡಿಕೊಂಡು ಎಷ್ಟು ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಿದ್ದಾನೆ ಹಾಗೆ ನಮಗೆ ಗೊತ್ತಿರುವ ಹಾಗೆ ಸಗಣಿಯಿಂದ ಕೇವಲ ಕೆಲವೊಂದು ಉಪಯೋಗಗಳು ಅಷ್ಟೇ ನಮಗೆ ಗೊತ್ತಿದೆ ಆದರೆ ಈತ ಮಾಡಿರುವಂತಹ ಐಡಿಯಾ ನಿಜಕ್ಕೂ ನಿಮಗೆ ದಿಗ್ಭ್ರಮೆಗೊಳಿಸುತ್ತದೆ ಎಂದರೆ ಇವನು ಕೇವಲ ಸಗಣಿಯಿಂದಲೇ ಏನಿಲ್ಲವೆಂದರೂ ಎರಡುವರೆಯಿಂದ ಮೂರು ಲಕ್ಷ ತನಕ ಆದಾಯವನ್ನು ಗಳಿಸುತ್ತಾ ಇದ್ದಾನೆ.

ಹಾಗಾದರೆ ಅಷ್ಟಕ್ಕೂ ಇವನು ಮಾಡುತ್ತಿರುವುದು ಏನು ಎಂಬ ಕೊಂಚ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ.ಈತ ಮಾಡುವುದೇನೆಂದರೆ ತಾನು ಸಾಕಿದ ಆಕಳುಗಳಿಂದ ಬಂದಂತಹ ಶಗಣಿಯಿಂದ ಫಲವತ್ತಾದ ಗೊಬ್ಬರವನ್ನು ತಯಾರು ಮಾಡುತ್ತಾರೆ. ಇದನ್ನು ಉಪಯೋಗಿಸಿಕೊಂಡು ತಮ್ಮ ಹೊಲದಲ್ಲಿ ಹಾಕಿಕೊಂಡು ಉತ್ತಮವಾದಂತಹ ಬೆಳೆಯನ್ನು ಕೂಡ ಇವರು ಬೆಳೆಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಬೇರೆ ಊರಿಗೆ ಕೂಡ ಅಂದರೆಶಿರಸಿ ಕಡೆಗೆ ಕೂಡ ಬಹಳಷ್ಟು ಗೊಬ್ಬರವನ್ನು ಕಳಿಸಿ ಅಲ್ಲಿಂದನೂ ಕೂಡ ಲಾಭವನ್ನು ಪಡೆದುಕೊಳ್ಳುತ್ತಾ ಇದ್ದಾರೆ.

ಒಂದು ಲಾರಿಗೆ ಇವರು ಗೊಬ್ಬರವನ್ನು ಕಳಿಸಿದರೆ ಅದರಿಂದ ಬರುವಂತಹ ಆದಾಯ 12 ರಿಂದ 13 ಸಾವಿರ ರೂಪಾಯಿ. ಇವರ ದಿನನಿತ್ಯದ ಕೆಲಸವೇನೆಂದರೆ, ಇವರು ಇರುವುದು ಐದು ಮಂದಿ ಸಹೋದರರು ಬೆಳಿಗ್ಗೆ ಬೇಗನೆ 5:00 ಗಂಟೆಗೆ ಎದ್ದು ಎಲ್ಲವನ್ನು ಸ್ವಚ್ಛತೆ ಮಾಡಿಕೊಂಡು ನಂತರ ಹಾಲನ್ನು ಹಿಂಡಲು ಶುರು ಮಾಡುತ್ತಾರೆ ಸುಮಾರು ಆರು ಗಂಟೆ ಅಥವಾ 6:30ಗೆ ಈ ಹಾಲುಗಳನ್ನು ತೆಗೆದುಕೊಂಡು ಹೋಗಲು ಹಾಲಿನ ಡೈರಿಯ ವಾಹನ ಬರುತ್ತದೆ. ಅದರಲ್ಲಿ ಹಾಲನ್ನು ಹಾಕಿ ಕಳಿಸುತ್ತಾರೆ ಅಷ್ಟೇ ಅಲ್ಲದೆ ಇವರು ಮನೆಯಲ್ಲಿರುವಂತಹ ಮಹಿಳೆಯರು ಕೂಡ ಇಲ್ಲಿ ಬಂದು ಕೆಲಸವನ್ನು ಮಾಡುತ್ತಾರೆ ಅದೇ ಶ್ರದ್ಧೆ ಇವರನ್ನು ‌ಇಲ್ಲಿಯ ಮಟ್ಟಕ್ಕೆ ತಂದು ಮುಟ್ಟಿಸಿದೆ.

ಮನುಷ್ಯನಿಗೆ ಜೀವನದಲ್ಲಿ ಬೇಕಾಗಿರುವುದು ಮುಖ್ಯವಾಗಿ ಗುರಿ ಆ ಗುರಿಯನ್ನು ಇದ್ದರೆ ಎಂತಹ ಕಷ್ಟ ಬಂದರೂ ಕೂಡ ಸಲೀಸಾಗಿ ಅವೆಲ್ಲವನ್ನು ದಾಟಿಕೊಂಡು ಮನುಷ್ಯ ಗುರಿಯನ್ನು ಮುಟ್ಟುತ್ತಾನೆ ಹಾಗೆ ಇವರ ಬಗ್ಗೆ ಸಂಪೂರ್ಣವಾಗಿ ಇನ್ನ ನೀವು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ಇರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *