ಭಾಗ್ಯಲಕ್ಷ್ಮಿ ಯೋಜನೆ ₹1,00,000 ನಿಮ್ಮ ಮಗುವಿಗೆ ಸಿಗುತ್ತೆ ಅಥವಾ ಇಲ್ಲ. ನಿಮಗೆ ಅನುಮಾನ ಇದ್ರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ. ನಿಮ್ಮ ಅನುಮಾನಕ್ಕೆ ಪರಿಹಾರ ಸಿಗುತ್ತೆ.ಸರ್ಕಾರ ₹1,00,000 ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮ್ಮ ಹೆಣ್ಣು ಮಗುವಿನ 18 ವರ್ಷ ವಯಸ್ಸು ತುಂಬಿದ ನಂತರ ಈ ₹1,00,000 ನಿಮಗೆ ಸಿಗುತ್ತೆ ಅಥವಾ ಇಲ್ಲ ಅಂತ ನಿಮಗೆ ತುಂಬಾ ಜನರಿಗೆ ಅನುಮಾನ ಇದೆ. ಅದು ಹೇಗೆ ಸಿಗುತ್ತೆ ಏನು, ಯಾವ ರೀತಿ, ಎಷ್ಟು ಹಣ ಡಿಪಾಸಿಟ್ ಮಾಡಿದ್ದಾರೆ. ಮಗುವಿನ ಹೆಸರಲ್ಲಿ ಎಲ್ಲ ಮಾಹಿತಿ ಇವತ್ತಿನ ‌ ನಿಮಗೆ ತಿಳಿಸಿಕೊಡುತ್ತೇನೆ.

ಭಾಗ್ಯಲಕ್ಷ್ಮಿ ಯೋಜನೆ ಯಾವ ಯೋಜನೆ ಭಾಗ್ಯಲಕ್ಷ್ಮಿ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಮೊದಲನೆ ಹೆಣ್ಣು ಮಗುವಿಗೆ ಹಾಗು ಎರಡನೇ ಹೆಣ್ಣು ಮಗುವಿಗೆ ₹1,00,000 ಈ ಒಂದು ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಸಿಗುತ್ತೆ. ಹೇಗೆ ಸಿಗುತ್ತೆ ಯಾವ ಮಗುವಿಗೆ ಸಿಗುತ್ತೆ .ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ “ಭಾಗ್ಯಲಕ್ಷ್ಮಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಆರ್ಥಿಕ ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ/ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದಲ್ಲಿ ನೀಡಲಾಗುವುದು.

ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31.3.2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಆರ್ಹರಿರುತ್ತಾರೆ.ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ.ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ.

ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕದ್ದು ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ 2ಕ್ಕಿಂತ ಹೆಚ್ಚಿಗೆ ಇರಬಾರದು. ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ದಿನಾಂಕ 31.07.2008ರವರೆಗೆ ಜನಿಸಿದ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗಿದೆ. ಅತಿ ಹೆಚ್ಚು ಮಾಹಿತಿಗಾಗಿ ಕೆಳಗಿರುವ ಲಿಂಕನ್ನು ಓಪನ್ ಮಾಡಿಕೊಳ್ಳಿ http://blakshmi.kar.nic.in:8080/First.jsp

Leave a Reply

Your email address will not be published. Required fields are marked *