ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ನಮ್ಮ ಇಂದಿನ ಅತಿಥಿ ಒಬ್ಬರಲ್ಲ ಇಬ್ಬರು. ಐಪಿಎಸ್-ಐಎಎಸ್ ದಂಪತಿಯ ಯಶಸ್ಸಿನ ಕಥೆಯನ್ನು ನಾವಿಂದು ಹೇಳಲಿದ್ದೇವೆ. ಅನೇಕ ಯುಪಿಎಸ್ ಸಿ ಸಾಧಕರು ತಮ್ಮದೇ ವೃತ್ತಿಯವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂತಹವರ ಸಾಲಿಗೆ ಐಪಿಎಸ್ ಅಕ್ಷತ್ ಕೌಶಲ್ ಮತ್ತು ಐಎಎಸ್ ಅಂಕಿತಾ ಮಿಶ್ರಾ ಕೂಡ ಸೇರುತ್ತಾರೆ. ಐಪಿಎಸ್ ಅಕ್ಷತ್ ಕೌಶಲ್ ಮತ್ತು ಐಎಎಸ್ ಅಂಕಿತಾ ಮಿಶ್ರಾ ಅವರ ಪ್ರೇಮಕಥೆ ಹಾಗೂ ಯಶಸ್ಸಿನ ಕಥೆ ಬಹಳ ವಿಶೇಷವಾಗಿದೆ.

ಇವರಿಬ್ಬರು ತಮ್ಮ ಶ್ರಮದ ಆಧಾರದ ಮೇಲೆ ಉನ್ನತ ಸ್ಥಾನ ಮುಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಮೊದಲಿ ಈ ಜೋಡಿಯ ಪ್ರೇಮಕಥೆಯು ಮನ್ಸೂರಿಯನಲ್ಲಿ ಪ್ರಾರಂಭವಾಯಿತು. ಮಸೂರಿಯಯಲ್ಲಿರುವ ತರಬೇತಿಯ ಸಮಯದಲ್ಲಿ ಇಬ್ಬರೂ ಭೇಟಿಯಾದರು. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಮೊದಲು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಅನೇಕ ಐಎಎಸ್, ಐಪಿಎಸ್ ದಂಪತಿಗಳ ಸಂಬಂಧವು ತರಬೇತಿನಿಂದಲೇ ಆರಂಭವಾಗಿದೆ. ಐಪಿಎಸ್ ಅಕ್ಷತ್ ಕೌಶಲ್ ಅವರಿಗೆ ಸೆಂಟ್ರಲ್ ಡಿಸ್ಟ್ರಿಕ್ಟ್ ನಲ್ಲಿ ಪೋಸ್ಟ್ ಆಗಿದೆ.

ಇವರು ತಮ್ಮ 5ನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 2017ರ ಬ್ಯಾಚ್ ನ ಐಪಿಎಸ್ ಅಧಿಕಾರಿ. ಮೊದಲ 4 ಪ್ರಯತ್ನಗಳಲ್ಲಿ ವಿಫಲರಾದ ಬಳಿಕ ಅಕ್ಷತ್ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರು.ಆ ಸಮಯದಲ್ಲಿ ಸ್ನೇಹಿತರು ಹಾಗೂ ತಾಯಿಯ ಸಲಹೆ ಮೇರೆಗೆ 5ನೇ ಪ್ರಯತ್ನ ನೀಡಲು ಮುಂದಾದರು. ಕೇವಲ 17 ದಿನಗಳ ಕಾಲ ತಯಾರಿ ನಡೆಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆದರು. ಇಂದು ಐಪಿಎಸ್‌ ಅಧಿಕಾರಿಯಾಗಿ ದೇಶ ಸೇವೆ ಮಾಡುತ್ತಿದ್ದಾರೆ.

ಇನ್ನು ಅಕ್ಷತ್ ಅವರ ಪತ್ನಿ ಐಎಎಸ್ ಅಂಕಿತಾ ಮಿಶ್ರಾ ಅವರು ಗೋರಖ್ ಪುರದ ನಿವಾಸಿ. ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಪದವಿ ಪಡೆದಿದ್ದಾರೆ. ಇದರ ನಂತರ, ಅವರು ಅಧ್ಯಯನ ಮಾಡಲು ವಿದೇಶಕ್ಕೆ ಹೋಗಲು ಬಯಸಿದ್ದರು. ಆದರೆ ನಾಗರಿಕ ಸೇವಾ ಪರೀಕ್ಷೆಗೆ ತಯಾರಿಯಲ್ಲಿ ನಿರತರಾದರು. 2017 ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 105ನೇ ಯಾರ್ಂಕ್ ಪಡೆಯುವ ಮೂಲಕ ಅವರು ಐಎಎಸ್ ಆದರು.ಐಎಎಸ್ ಅಕ್ಷತ್ ಕೌಶಲ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಈ ಐಎಎಸ್-ಐಪಿಎಸ್ ಜೋಡಿ ಆಗಾಗ್ಗೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಅಷ್ಟೇ ಅಲ್ಲ, ತಮ್ಮ ಪೋಸ್ಟ್ ನಲ್ಲಿ ಪತ್ನಿ ಐಎಎಸ್ ಅಂಕಿತಾ ಮಿಶ್ರಾ ಅವರನ್ನು ಶ್ಲಾಘಿಸುವುದರ ಜೊತೆಗೆ, ಅವರನ್ನು ಪರಿಚಯಿಸಿದವರಿಗೆ ಧನ್ಯವಾದ ಹೇಳಲು ಅಕ್ಷತ್ ಮರೆಯುವುದಿಲ್ಲ.ತರಬೇತಿ ಮುಗಿದ ನಂತರ ಪೋಸ್ಟಿಂಗ್ ಸಿಕ್ಕ ಕೆಲವೇ ದಿನಗಳಲ್ಲಿ ಐಪಿಎಸ್ ಅಕ್ಷತ್ ಕೌಶಲ್ ಮತ್ತು ಐಎಎಸ್‌ ಅಂಕಿತಾ ಮಿಶ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

Leave a Reply

Your email address will not be published. Required fields are marked *