ನಿರುದ್ಯೋಗಿಗಳನ್ನು ಮತ್ತು ಮನೆಯಲ್ಲಿರುವ ಗೃಹಿಣಿಯರು ಸೇರಿದಂತೆ ಎಲ್ಲರೂ ಕೂಡ ಯಾವುದೇ ಗ್ಯಾರಂಟಿ ಇಲ್ಲದೆ 10,00,000 ರೂಪಾಯಿಗಳ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ನೀವು ಯಾವುದೇ ಕೆಲಸ ಮಾಡಲು ಅಥವಾ ನೀವು ಯಾವುದೇ ಬಿಸಿನೆಸ್ ಮಾಡಲು ಹಣ ಹುಡುಕ್ತಾ ಇದ್ರೆ ಸರ್ಕಾರದಿಂದಲೇ ನಿಮಗೆ ಯಾವುದೇ ಗ್ಯಾರಂಟಿ ಇಲ್ಲದೆ 10,00,000 ರೂಪಾಯಿಗಳ ಸಾಲ ಸೌಲಭ್ಯವನ್ನು ನೀಡಲು ಮುದ್ರಾ ಯೋಜನೆ ಅಂದ್ರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಈ ಯೋಜನೆಯ ಬಗ್ಗೆ ಜನರಿಗೆ ಸಂಪೂರ್ಣವಾಗಿ ಗೊತ್ತಿರುತ್ತೆ.

ಇದನ್ನು ಎಲ್ಲಿ ಮತ್ತು ಹೇಗೆ ಪಡೆದುಕೊಳ್ಳಬೇಕು? ಯಾರಿಲ್ಲ ಅರ್ಜಿಯನ್ನು ಸಲ್ಲಿಸಬೇಕು, ಎಷ್ಟು ಹಣ ಸಿಗುತ್ತೆ ಹಾಗೂ ಯಾವಾಗ ನಮಗೆ ಸಾಲ ಸಿಗುತ್ತೆ. ಯಾವ ಯಾವ ಕೆಲಸಗಳಿಗೆ ಈ ಸಾಲವನ್ನ ಸಿಗುತ್ತದೆ.ಹೀಗೆ ಎಲ್ಲ ರೀತಿಯ ಮಾಹಿತಿಯ ಸಂಪೂರ್ಣವಾಗಿ ಗೊತ್ತಿಲ್ಲದೇ ಇರುವ ಕಾರಣಕ್ಕಾಗಿ ಈ ಮುದ್ರಾ ಯೋಜನೆ ಹಣ ಪಡೆದುಕೊಳ್ಳುವಲ್ಲಿ ಅಂದ್ರೆ ಈ ಮುದ್ರಾ ಯೋಜನೆಯ ಸಾಲ ಪಡೆದುಕೊಳ್ಳುವಲ್ಲಿ ಬಹಳಷ್ಟು ಜನ ವಿಫಲರಾಗುತ್ತಿದ್ದಾರೆ. ಆದರೆ ನೀವು ಯಾವುದೇ ಸ್ವಯಂ ಉದ್ಯೋಗ ಆರಂಭಿಸಿಕೊಳ್ಳಲು ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೆ ₹10,00,000 ಮತ್ತು ಅದಕ್ಕಿಂತಲೂ ಕೂಡ ಹೆಚ್ಚು ಹಣವನ್ನ ಹೇಗೆ ಸಾಲ ರೂಪದಲ್ಲಿ ಪಡೆದುಕೊಳ್ಳಬಹುದು ಮತ್ತು ಇದಕ್ಕೆ ಎಷ್ಟು ಸಬ್ಸಿಡಿ ಹಣ ಇರುತ್ತದೆ ಹಾಗೂ ಮರಳಿ ಎಷ್ಟು ಕಟ್ಟಬೇಕು ಮತ್ತು ಯಾವೆಲ್ಲಾ ಬಿಸಿನೆಸ್ಗಳಿಗೆ ಈ ಹಣ ಕೊಡುತ್ತಾರೆ ಮತ್ತು ಯಾರಿಗೆಲ್ಲ ಸಿಗುತ್ತೆ.

ಈ ಹಣ ಪಡೆದುಕೊಳ್ಳಲು ಏನು ಮಾಡಬೇಕು? ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಾರ್ಪೋರೇಟ್ ಅಲ್ಲದೆ ಕೃಷಿ ಸಣ್ಣ ಅಥವಾ ಸೂಕ್ಷ್ಮ ಉದ್ಯಮಗಳಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಈ ಸಾಲಗಳನ್ನ ಮುದ್ರಾ ಸಾಲ ಎಂದು ಕರೆಯಲಾಗುತ್ತದೆ.ಈ ಲೋನ್ಗಳನ್ನ ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು MFS ವಿತರಿಸುತ್ತವೆ.ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಮೂರು ವರ್ಗಗಳ ಅಡಿಯಲ್ಲಿ ಸಾಲಗಳು ಲಭ್ಯವಿದೆ. ಮಕ್ಕಳು ಹದಿಹರೆಯದವರು ಮತ್ತು ಯುವ ವಯಸ್ಕರು ಫಲಾನುಭವಿಯ ಸೂಕ್ಷ್ಮ ಘಟಕ ಅಥವ ಉದ್ಯಮದ ಬೆಳವಣಿಗೆ ಅಥವಾ ಅಭಿವೃದ್ಧಿ ಮತ್ತು ಹಣಕಾಸಿನ ಅಗತ್ಯಗಳನ್ನು ಆಧರಿಸಿ ಈ ವರ್ಗಗಳನ್ನು ನಿರ್ಧರಿಸಲಾಗುತ್ತದೆ.

ಶಿಶು ಸಾಲವು 50,000 ರೂಪಾಯಿವರೆಗಿನ ಸಾಲಗಳನ್ನು ಒಳಗೊಂಡಿದೆ.ಈ ವರ್ಗವು ಆರಂಭಿಕ ಹಂತದಲ್ಲಿರುವ ಅಥವಾ ಇನ್ನು ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಕಡಿಮೆ ಹಣದ ಅಗತ್ಯ ಇರುವ ಉದ್ಯಮಿಗಳನ್ನ ಒಳಗೊಂಡಿದೆ. ಕಿಶೋರ್ ವರ್ಗದಲ್ಲಿ 5,00,000 ವರೆಗೆ ಸಾಲ ಲಭ್ಯವಿದೆ. ಈ ವರ್ಗವು ಈಗಾಗಲೇ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದ ಮತ್ತು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹೆಚ್ಚಿನ ಹಣವನ್ನ ಬಯಸುವ ಉದ್ಯಮಿಗಳನ್ನು ಒಳಗೊಂಡಿದೆ. ತರುಣ ಸಾಲದ ಮೂರನೇ ವರ್ಗವಾಗಿದೆ.ಇದು 10 ಲಕ್ಷದವರೆಗಿನ ಸಾಲವನ್ನು ಒಳಗೊಂಡಿದೆ.

ಇದು ಮುದ್ರಾ ಸಾಲದಲ್ಲಿ ನೀಡುವ ಅತ್ಯಧಿಕ ಮೊತ್ತವಾಗಿದೆ. ತನ್ನ ಉತ್ಪಾದನಾ, ಉದ್ಯಮ, ಅಂಗಡಿ, ಹಣ್ಣು ಮತ್ತು ತರಕಾರಿ ಮಾರಾಟಗಾರರು, ಕುಶಲಕರ್ಮಿಗಳು ಮೀನು ಸಾಕಣೆ, ಜೇನು ಸಾಕಣೆ, ಕೋಳಿ ಸಾಕಣೆ, ಡೈರಿ ಮೀನುಗಾರಿಕೆ, ಕೃಷಿ ಚಿಕಿತ್ಸಾಲಯಗಳು ಮತ್ತು ಕೃಷಿ ವ್ಯಾಪಾರ ಕೇಂದ್ರಗಳು, ಆಹಾರ ಮತ್ತು ಕೃಷಿ ಸಂಸ್ಕರಣೆ ಇವರಿಗೆ ಸಿಗುತ್ತದೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *