ಮ್ಯಾರೇಜ್ ಸರ್ಟಿಫಿಕೇಟ್ ನಿಂದ ಏನು ಲಾಭವಿದೆ? ಮ್ಯಾರೇಜ್ ಸರ್ಟಿಫಿಕೇಟ್ ಇದ್ರೆ ಬೆನಿಫಿಟ್ ಏನು ಸಿಗುತ್ತೆ. ಗಂಡ ಮತ್ತು ಹೆಂಡತಿಗೆ ಸಾಮಾನ್ಯವಾಗಿ ಮದುವೆಯ ಒಂದು ಸರ್ಟಿಫಿಕೇಟ್ ಅಥವಾ ದಾಖಲೆ ಎಂದು ನಂಬಿರುತ್ತಾರೆ. ಇವತ್ತಿನ ಕಾಲದಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಅದೊಂದು ದಾಖಲೆಯೂ ಹೌದು. ಅದಕ್ಕಿಂತ ಮುಖ್ಯವಾಗಿ ಕೆಲವೊಂದು ಸಮಯದಲ್ಲಿ ಹಣ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಗಂಡ ಮತ್ತು ಹೆಂಡತಿ ಕಾನೂನು ಬದ್ಧವಾಗಿ ಮದುವೆ ಆಗಿರೋದಕ್ಕೆ ಸಾಕ್ಷಿದಂತೆ. ಇದು ಒಂದು ಸರ್ಟಿಫಿಕೇಟ್ ಮ್ಯಾರೇಜ್ ಸರ್ಟಿಫಿಕೇಟ್ ಮನೆ ಜಮೀನು, ಸೈಟು, ಪ್ಲೇಟು ಇವೆಲ್ಲವು ಗಂಡನಿಂದ ಹೆಂಡತಿಗೆ ಅಥವಾ ಹೆಂಡತಿಯಿಂದ ಗಂಡನಿಗೆ ಆಸ್ತಿ ವರ್ಗಾವಣೆ ಮಾಡುವ ಸಮಯದಲ್ಲಿ ಸರ್ಟಿಫಿಕೇಟ್ ತುಂಬಾನೇ ಮಹತ್ವ ಪಾತ್ರ ವಹಿಸುತ್ತೆ ಅಂದ್ರೆ ದಾಖಲೆಯಾಗಿ ಅನುಕೂಲವಾಗುತ್ತೆ.

ಹೊಸದಾಗಿ ಮದುವೆಯಾಗಿದ್ದರೆ ಹೆಂಡತಿ ಹೆಸರು ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವ ಸಮಯದಲ್ಲಿ ಸರ್ಟಿಫಿಕೇಟ್ ತುಂಬಾನೇ ಸಹಾಯವಾಗುತ್ತೆ. ಹಾಗೆ ಅದೇ ರೀತಿ ಪಾಸ್‌ಪೋರ್ಟ್‌ನಲ್ಲಿ ಗಂಡ ಮತ್ತು ಹೆಂಡತಿ ಹೆಸರು ಸೇರಿಸುವುದಕ್ಕೆ ಮ್ಯಾರೇಜ್ ಸರ್ಟಿಫಿಕೇಟ್ ಇದ್ರೆ ಯಾವುದೇ ತರ ಬೇರೆ ದಾಖಲೆಗಳು ಬೇಕಾಗುವುದಿಲ್ಲ. ಸಂಗಾತಿಯು ಅಂದ್ರೆ ಗಂಡ ಅಥವಾ ಹೆಂಡತಿ ಅಕಾಲಿಕವಾಗಿ ಸತ್ತರೆ ಇಟ್ಟಿರುವ ಹಣ ಕುಟುಂಬಕ್ಕೆ ಯಾವುದೇ ರೀತಿಯಿಂದ ಬರುವ ಪೆನ್ಷನ್ ಹೀಗೆ ಅನೇಕ ಸರ್ಕಾರದಿಂದ ಬರುವ ವಿಮಾ ಸೌಲಭ್ಯಗಳ ಹಣ ಪಡೆದುಕೊಳ್ಳಲು ಸರ್ಟಿಫಿಕೇಟ್ ತುಂಬಾನೇ ಅವಶ್ಯಕತೆ ಇರುತ್ತೆ.

ಅದೇ ರೀತಿ ಸಾಮಾನ್ಯವಾಗಿ ಇವತ್ತಿನ ಕಾಲದಲ್ಲಿ ಎಲ್ಲರೂ ಬ್ಯಾಂಕ್ ಅಕೌಂಟ್ ಇರುತ್ತೆ ಮತ್ತು ಪೋಸ್ಟ್ ಆಫೀಸ್ ನಲ್ಲೂ ಇದ್ದೇ ಇರುತ್ತೆ. ಪತಿ ಅಥವಾ ಪತ್ನಿ ಅಕಾಲಿಕವಾಗಿ ಸತ್ತರೆ ಇದರಿಂದ ಇದ್ರಲ್ಲಿ ಇಟ್ಟಿರುವ ಹಣ ಪಡೆದುಕೊಳ್ಳುವುದಕ್ಕೆ ಅಂದ್ರೆ ರಿಟರ್ನ್ ಪಡೆದುಕೊಳ್ಳುವುದಕ್ಕೆ ಮ್ಯಾರೇಜ್ ಸರ್ಟಿಫಿಕೇಟ್ ಇದ್ರೆ ತುಂಬಾನೇ ಅನುಕೂಲವಾಗುತ್ತೆ. ಮುಖ್ಯವಾಗಿ ಸರಕಾರದ ಪ್ರತಿಯೊಂದು ಸವಲತ್ತು ಪಡೆಯಲು ತುಂಬಾನೇ ಪ್ರಯೋಜನವಾಗುತ್ತೆ. ಹಾಗೆ ಗಂಡ ಅಥವಾ ಹೆಂಡತಿ ವಿದೇಶದಲ್ಲಿ ವಾಸಿಸುತ್ತಿದ್ದರೆ ಪಾಸ್ ಪೋರ್ಟ್ ಮತ್ತು ವೀಸಾ ಕೆಲಸದ ಪರವಾನಿಗೆ ಇತ್ಯಾದಿಗಳನ್ನು ಪಡೆಯಲು ತುಂಬಾನೇ ಪ್ರಯೋಜನೆಯಾಗಿದೆ.

ಅಲ್ಲದೆ ವಿಚ್ಛೇದನ, ಕಾನೂನುಬದ್ದ ಗಂಡ, ಹೆಂಡತಿ ಬೇರ್ಪಡಿಕೆ, ಜೀವನಾಂಶ, ಮಕ್ಕಳ ಪಾಲನೆ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಪತ್ರವು ತುಂಬಾ ಬೇಕಾಗಬಹುದು. ಮಹಿಳಾ ಭದ್ರತೆ ಅದು ಹೇಗೆಂದರೆ ಪುರುಷರು ತಮ್ಮ ಹೆಂಡತಿಯರನ್ನು ಮದುವೆ ನಂತರ ಬಿಡುವುದು ತಡೆಯುತ್ತೆ. ಇಲ್ಲದಿದ್ದರೆ ಅವರಿಗೆ ಜೀವನಾಶ ಪಾವತಿಸಲುರಾಗಿರಬೇಕು ಅಥವಾ ಕಠಿಣ ಕಾನೂನು ಶಿಕ್ಷೆಗೆ ಗಂಡಂದಿರು ಒಳಗಾಗಬಹುದು. ಇದಕ್ಕೆ ಮ್ಯಾರೇಜ್ ಸರ್ಟಿಫಿಕೇಟ್ ತುಂಬಾನೇ ಅನುಕೂಲವಾಗುತ್ತೆ.

ಇಬ್ಬರಿಗೂ ಸಮಾನ ಅವಕಾಶ ಒದಗಿಸಲು ಮ್ಯಾರೇಜ್ ಸರ್ಟಿಫಿಕೇಟ್ ಇದ್ರೆ ಈ ಮೇಲೆ ಹೇಳಿದ ಎಲ್ಲ ಅನುಕೂಲಗಳು ಸರಿಯಾದ ಸಮಯಕ್ಕೆ ನಿಮಗೆ ಸಿಗುತ್ತೆ. ಹಾಗಾದರೆ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲವೆಂದರೆ ಅನಾನುಕೂಲ ಇವೆ ಎಂದು ನೋಡುವುದಾದರೆ, ಉದಾಹರಣೆಗೆ ಪತಿ ಅಥವಾ ಪತ್ನಿ ಅಕಾಲಿಕವಾಗಿ ಮರಣ ಹೊಂದಿದಲ್ಲಿ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣ ನಿಮಗೆ ಸಿಗುವುದಿಲ್ಲ ಹಾಗೆ ಮುಂದೆ ಬಹಳಷ್ಟು ಸಮಸ್ಯೆಗಳು ಉದಾಹರಣೆಗೆ ಪಾಸ್ಪೋರ್ಟ್ ಮಾಡಲು ಜಂಟಿ ಬ್ಯಾಂಕ್ ಖಾತೆ ತೆರೆಯಲು ಸಮಸ್ಯೆಗಳು ಬರುತ್ತವೆ.

Leave a Reply

Your email address will not be published. Required fields are marked *