ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಸಕ್ಕರೆ ಕಾಯಿಲೆ ಅನ್ನುವುದು ಒಮ್ಮೆ ಬಂದು ಸೇರಿಕೊಂಡರೆ ಸಾವಿನ ಕೂಪಕ್ಕೆ ತಳ್ಳುತ್ತದೆ. ಒಮ್ಮೆ ಅಂಟಿಕೊಂಡರೆ ತನ್ನ ಪ್ರಭಲ ಶಕ್ತಿಯನ್ನು ತೋರಿಸುತ್ತದೆ. ತಜ್ಞರು ಹೇಳುವ ಪ್ರಕಾರ ಇದು ಒಮ್ಮೆ ಮನುಷ್ಯನ ದೇಹದಲ್ಲಿ ಸೇರಿಕೊಂಡರೆ ಬಿಟ್ಟು ಹೋಗುವ ಕಾಯಿಲೆ ಅಲ್ಲ ಅಂತ ಹೇಳುತ್ತಾರೆ. ಆದರೆ ನಾವು ಬದಲಾವಣೆ ಮಾಡಿಕೊಳ್ಳುವ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು.

ಹಾಗಾದರೆ ಬನ್ನಿ ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಿದರೆ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು ಅಂತ ತಿಳಿಯೋಣ. ಸಕ್ಕರೆ ಕಾಯಿಲೆ ಇದ್ದವರು ಕೆಲವು ಆಹಾರವನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕಾಗುತ್ತದೆ. ವೈದ್ಯರು ಹೇಳಿದ ಮಾತ್ರೆಗಳನ್ನು ಔಷಧಗಳನ್ನು ಸೇವನೆ ಮಾಡುತ್ತಾ ಬಂದ್ರೆ ಸ್ವಲ್ಪ ಮಟ್ಟಿಗೆ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಸಕ್ಕರೆ ಕಾಯಿಲೆ ಇದ್ದವರು ತಮ್ಮ ಆಹಾರದಲ್ಲಿ ಹೂಕೋಸು ಎಲೆಕೋಸು ಬ್ರೋಕಲಿಂ ಅನ್ನು ಸೇರಿಸಿಕೊಂಡರೆ ಬಹಳ ಒಳ್ಳೆಯದು.

ಸಕ್ಕರೆ ಅಂಶವು ಕಡಿಮೆ ಆಗಲು ಹೆಚ್ಚು ನಾರಿನಾಂಶ ಹಾಗೂ ಕಡಿಮೆ ಕೊಬ್ಬು ಕಡಿಮೆ ಕಾರ್ಭೋಹೈಡ್ರೆಟ್ ಕಡಿಮೆ ಇರುವ ಸಿಹಿ ಅಂಶವು ಕಡಿಮೆ ಇರುವ ಆಹಾರವನ್ನು ಸೇವನೆ ಮಾಡಿದರೆ ಸಕ್ಕರೆ ಅಂಶವೂ ಕಡಿಮೆ ಆಗುತ್ತದೆ ಇದರಿಂದ ಮಧುಮೇಹ ನಿಯಂತ್ರನಕ್ಕೆ ಬರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಹೂಕೋಸು ಕ್ಯಾಬೇಜ್ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಅಂತ ತಿಳಿಯೋಣ.

ಡಯಾಬಿಟೀಸ್, ಪಾರ್ಶ್ವವಾಯು, ಮೆದುಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಕಾಲಿಫ್ಲವರ್ ಸಮರ್ಥವಾಗಿ ನಿವಾರಿಸುತ್ತದೆ.ದೇಹದ ತೂಕವನ್ನು ಆರೋಗ್ಯಕರವಾದ ಕ್ರಮದಲ್ಲಿ ಕಡಿಮೆ ಮಾಡಿಕೊಳ್ಳುವುದಕ್ಕೂ, ಸ್ಥೂಲಕಾಯವನ್ನು ನಿವಾರಿಸಿಕೊಳ್ಳುವುದಕ್ಕೂ ಇದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಹೃದಯದ ಹಾಗೂ ಮನಸ್ಸನ್ನು ಆರೋಗ್ಯವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ.
ಹೂಕೋಸುವಿನಲ್ಲಿ ಸಲ್ಫೋರಾಫೇನ್ ಸಮೃದ್ಧವಾಗಿರುವದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೂದಲಿನ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ಎನ್ನಬಹುದು. ಹೂಕೋಸು ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ.ಹೂಕೋಸು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ದೀರ್ಘಕಾಲದ ಕಾಯಿಲೆ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹೂಕೋಸುವಿನಲ್ಲಿ ಫೈಬರ್ ಮತ್ತು ನೀರಿನ ಅಂಶ ಅಧಿಕವಾಗಿದೆ. ಹೀಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ತಡೆಯುತ್ತದೆ.ಇದರ ಜೊತೆಯಲ್ಲಿ ಹೂಕೋಸು ದೇಹದ ಚಯಾಪಚಯ ಕ್ರಿಯೆಗೆ ಅಗತ್ಯವಾದ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ.

ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ಸೋಂಕುಗಳ ವಿರುದ್ಧ ರಕ್ಷಣೆ ನೀಡುವ ಜೊತೆಗೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಗಾಯಗಳನ್ನು ಸರಿಪಡಿಸುತ್ತದೆ ಮತ್ತು ನಮ್ಮ ಚರ್ಮ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಇದರ ಜೊತೆಗೆ ಈ ಎರಡು ತರಕಾರಿಗಳಲ್ಲಿ ಸಣ್ಣ ಪ್ರಮಾಣದ ಮತ್ತು ದೊಡ್ಡ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತವೆ. ಪೊಟ್ಯಾಶಿಯಂ ಮ್ಯಾಂಗನೀಸ್ ಮತ್ತು ಇನ್ನಿತರ ಖನಿಜಾಂಶಗಳನ್ನು ನಾವು ಬ್ರೊಕೋಲಿ ಮತ್ತು ಹೂಕೋಸಿನಲ್ಲಿ ಕಾಣಬಹುದು. ಆಂಟಿ ಆಕ್ಸಿಡೆಂಟ್ ಅಂಶಗಳು ಜೀವಕೋಶಗಳ ಅಭಿವೃದ್ಧಿಯಲ್ಲಿ ಸಹಾಯಮಾಡುತ್ತದೆ, ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ತಡೆದು, ದೇಹದಲ್ಲಿ ಫ್ರೀ ರಾಡಿಕಲ್ ಗಳ ಅಂಶವನ್ನು ಹೋಗಲಾಡಿಸುತ್ತದೆ.

Leave a Reply

Your email address will not be published. Required fields are marked *