ನಮಸ್ತೇ ಆತ್ಮೀಯ ಪ್ರಿಯ ಓದುಗರೇ ಆರೋಗ್ಯ ಅಂದಮೇಲೆ ನಾವು ತುಂಬಾನೇ ಯೋಚನೆ ಹಾಗೂ ಗಮನ ಹರಿಸಬೇಕಾಗುತ್ತದೆ ಹಾಗೆಯೇ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಆರೋಗ್ಯವೂ ಯಾವಾಗಲೂ ನೈಸರ್ಗಿಕವಾಗಿ ಅಭಿವೃದ್ದಿ ಆಗುತ್ತಾ ಹೋಗಬೇಕು. ಇಲ್ಲವಾದರೆ ದೇಹಕ್ಕೆ ರಾಸಾಯನಿಕ ಅಂಶಗಳು ಸೇರಿಕೊಂಡರೆ ದೇಹವು ರೋಗಗಳಿಗೆ ತುತ್ತಾಗುತ್ತದೆ. ನೆನೆಸಿದ ಶೇಂಗಾ ಕಾಳುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲ ಲಾಭಗಳು ಸಿಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

ಇಂತಹ ಆಹಾರ ಪದ್ದತಿಯನ್ನು ನಮ್ಮ ಹಿರಿಯರು ಅನುಸರಣೆ ಮಾಡಿಕೊಂಡು ಬರುತ್ತಿದ್ದರು. ಹಾಗೆಯೇ ಅವರು ಆರೋಗ್ಯವಾಗಿರುತ್ತಿದ್ದರು. ನೀವು ತುಂಬಾ ಸಮಯ ಮನೆಯಲ್ಲಿ ಇದ್ದು, ಕಡಿಮೆ ಕೆಲಸವನ್ನು ಮಾಡಿದರೆ ನಿಮಗೆ ಹೊಟ್ಟೆ ಉಬ್ಬರ ಸಮಸ್ಯೆ ಬರಬಹುದು. ಕರುಳಿನ ಅಸ್ತವ್ಯಸ್ತ ಆಗಬಹುದು. ಇದರ ಅರ್ಥ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಆಗಿದೆ ಅಂತ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮಲಬದ್ಧತೆ ಕಂಡು ಬರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು ಹೃದಯಾಘಾತ ಕೂಡ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.

ಜೊತೆಗೆ ಉಸಿರಾಟದ ತೊಂದರೆ ಕೂಡ ಆಗುತ್ತದೆ. ನೀವು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ನೆನೆಸಿದ ಶೇಂಗಾ ಬೀಜವನ್ನು ತಿನ್ನಿ. ನಿಮಗೆ ಬೇಗನೆ ಪರಿಹಾರ ಸಿಗುತ್ತದೆ. ನೀವು ವ್ಯಾಯಾಮ ಮಾಡುತ್ತಿದ್ದರೆ ಅಚ್ಚು ಕಟ್ಟಾಗಿ ಸ್ನಾಯುಗಳನ್ನು ಬಲಪಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ಅದಕ್ಕಾಗಿ ನಾವು ಉತ್ತಮವಾದ ಡಯೆಟ್ ಅನ್ನು ಅನುಸರಣೆ ಮಾಡಬೇಕಾಗುತ್ತದೆ. ಜೊತೆಗೆ ನೆನೆಸಿದ ಕಡಲೆ ಬೀಜಗಳು ಸಹಾಯ ಮಾಡುತ್ತದೆ.

ನೆನೆಸಿದ ಶೇಂಗಾ ಬೀಜದ ಜೊತೆಗೆ ಬೆಲ್ಲವನ್ನು ಸೇವನೆ ಮಾಡುವುದರಿಂದ ಕೀಳು ನೋವು ಮೈ ಕೈ ನೋವು ಕಡಿಮೆ ಆಗುತ್ತದೆ. ಕ್ಯಾನ್ಸರ್ ಜೀವಕೋಶಗಳು ಅಭಿವೃದ್ದಿ ಆಗುವ ಸಾಧ್ಯತೆ ಇದ್ದರೆ, ತದ ನಂತರ ಕಂಡು ಬರುತ್ತದೆ. ದೇಹದ ಭಾಗಗಳು ಬೆಳೆದು ಕ್ಯಾನ್ಸರ್ ಜೀವಕೋಶಗಳು ಬೆಳೆಯುತ್ತವೆ. ಹೀಗೆ ಪೂರ್ತಿ ದೇಹವನ್ನು ಸೇರಿ ಜೀವವನ್ನೇ ಆಹುತಿ ಪಡೆಯುತ್ತದೆ. ಹೀಗಾಗಿ ನೆನೆಸಿದ ಶೇಂಗಾ ಬೀಜ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಗಳು ಸಿಗುತ್ತದೆ.

ಕಬ್ಬಿಣ ಕ್ಯಾಲ್ಷಿಯಂ ಜಿಂಕ್ ಸಿಗುತ್ತದೆ. ನಿಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ. ಪ್ರತಿದಿನ ನೆನೆಸಿದ ಶೇಂಗಾ ಬೀಜ ತಿನ್ನುವುದರಿಂದ ಕ್ಯಾನ್ಸರ್ ರೋಗಕ್ಕೆ ಪರಿಹಾರ ಕಂಡು ಕೊಳ್ಳಬಹುದು. ಇನ್ನೂ ರಕ್ತ ಹರಿಯುವಿಕೆ ಉತ್ತಮವಾಗಿ ಆರೋಗ್ಯಕರ ಆರೋಗ್ಯ ಹಾಗೂ ಹೃದಯದ ಆರೋಗ್ಯವೂ ನಿಮ್ಮದಾಗುತ್ತದೆ. ಕೆಲವೊಂದು ಕೆಟ್ಟ ಚಟಗಳಿಂದ ನಿಮ್ಮ ದೇಹಕ್ಕೆ ಅಗತ್ಯವಾದ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.

ರಕ್ತ ಸಂಚಾರ ಸರಿಯಾಗಿ ಆಗಲು ನೀವು ದಿನನಿತ್ಯ ಸಂಜೆ ಹಾಗೂ ಬೆಳಿಗ್ಗೆ ನೆನೆಸಿದ ಶೇಂಗಾ ಬೀಜ ಸೇವನೆ ಮಾಡಿ. ನಿಮ್ಮ ಮೆದುಳು ಇದರಿಂದ ಚುರುಕು ಆಗುವುದಲ್ಲದೆ ದೇಹದಲ್ಲಿ ಉಷ್ಣಾಂಶ ಹೆಚ್ಚುತ್ತದೆ. ಜೊತೆಗೆ ರಕ್ತ ಸಂಚಾರ ಸರಿಯಾಗಿ ಆಗಿ ಹೃದಯ ಆರೋಗ್ಯವಾಗಿರುತ್ತದೆ. ಹೃದಯಾಘಾತ ಮತ್ತು ಇನ್ನಿತರ ಆರೋಗ್ಯದ ಸಮಸ್ಯೆಗಳು ಕಂಡು ಬರಲು ಸಾಧ್ಯವಿಲ್ಲ ಅದಕ್ಕಾಗಿ ನೀವು ನಿತ್ಯವೂ ನೆನೆಸಿದ ಶೇಂಗಾ ಬೀಜ ಸೇವನೆ ಮಾಡಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *