ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಮಗೆ ಸಿಗುವ ಹಲವಾರು ತರಕಾರಿಗಳಲ್ಲಿ ಬೂದುಗುಂಬಳ ಕೂಡ ಒಂದು. ಇದರಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ. ಬೂದು ಕುಂಬಳಕಾಯಿ ಇಂದ ಪೇಟಾ ಎಂಬ ಸಿಹಿ ಪದಾರ್ಥವನ್ನು ತಯಾರಿಸುತ್ತಾರೆ. ಅಷ್ಟೇ ಅಲ್ಲದೇ ಇದನ್ನು ಸಾಂಬಾರ ತಯಾರಿಸಲು ಬಳಕೆ ಮಾಡುತ್ತಾರೆ ಏಕೆಂದ್ರೆ ಇದರಲ್ಲಿ ಅಷ್ಟೊಂದು ಪೌಷ್ಟಿಕತೆ ಸಿಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೂದು ಕುಂಬಳ ಕಾಯಿ ಸೇವನೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಪರಿಚಯ ಮಾಡಿ ಕೊಡುತ್ತೇವೆ.

ನಾವು ಸೇವನೆ ಮಾಡುವ ಆಹಾರವೂ ನಮ್ಮ ದೇಹದ ಮೇಲೆ ಹಾಗೂ ಆರೋಗ್ಯದ ಮೇಲೆ ಅವಲಂಬಿತ ವಾಗಿರುತ್ತದೆ. ದೇಹವು ಕಾರ್ಯ ನಿರ್ವಹಿಸುವ ಹಾಗೆ ಪರಿಣಾಮ ಬೀರುತ್ತದೆ. ದೇಹವು ಕ್ಷಾರೀಯ ಮಟ್ಟದಲ್ಲಿ ಇದ್ದಾಗ ಪಿಹೆಚ್ ಮಟ್ಟವು ಹೆಚ್ಚುತ್ತದೆ. ಇದು ದೀರ್ಘಕಾಲದ ಅಪಾಯವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ದೇಹದ ಕ್ಷಾರೀಯ ಮಟ್ಟ ಅಂದ್ರೆ ಅನಾರೋಗ್ಯದ ಮಟ್ಟವು ಕಡಿಮೆ ಇರುತ್ತದೆ. ಇನ್ನೂ ಬೂದು ಕುಂಬಳ ಕಾಯಿ ಪೋಷಕಾಂಶಗಳಿಂದ ಕೂಡಿರುತ್ತದೆ.

ಬೂದು ಕುಂಬಳಕಾಯಿ ನಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್-ಸಿ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣದ ಅಂಶ ಮತ್ತು ಫಾಸ್ಫರಸ್ ಅಂಶ ಜೊತೆಗೆ ನಾರಿನ ಅಂಶ ಕೂಡ ಇದರಲ್ಲಿ ಹೆಚ್ಚು ಸಿಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಇದರ ಪ್ರಯೋಜನವನ್ನು ಪಡೆಯಬಹುದು. ಬೂದು ಕುಂಬಳಕಾಯಿ ರಸ ವು ಮ್ಯಾಗ್ನಿಷಿಂ ಕ್ಯಾಲ್ಷಿಯಂ ಖನಿಜಗಳು ಲವನಗಳಿಂದ ಕೂಡಿರುತ್ತದೆ ಇದು ತೂಕವನ್ನು ಕಡಿಮೆ ಮಾಡಿಸುತ್ತದೆ.

ಹಾಗೂ ಹೊಟ್ಟೆಯನ್ನು ತಂಪು ಮಾಡಿಸುತ್ತದೆ. ದೇಹದ ಕ್ಷಾರವನ್ನು ಹೆಚ್ಚು ಮಾಡಲು ಬೂದು ಕುಂಬಳಕಾಯಿ ಬಹಳ ಉತ್ತಮ. ಇದರಲ್ಲಿ ಫೈಬರ್ ಅಂಶ ಇರುವುದರಿಂದ ಇದು ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಮಲಬದ್ಧತೆ ಅಸಿಡಿಟಿ ಗ್ಯಾಸ್ಟ್ರಿಕ್ ಅಜೀರ್ಣತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಶಕ್ತಿಯನ್ನು ಅಂದ್ರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ದೇಹದ ದೌರ್ಬಲ್ಯವನ್ನು ಅನುಭವಿಸುವವರು ಬೂದು ಕುಂಬಳಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಹಾಗಾದರೆ ಇದರ ರಸವನ್ನು ಹೇಗೆ ತಯಾರಿಸಬೇಕು ಅಂತ ಹೇಳುವುದಾದರೆ, ಬೂದು ಕುಂಬಳಕಾಯಿ ಸಿಪ್ಪೆಯನ್ನು ತೆಗೆದು ಅದರಳೊಳಗೆ ಇರುವ ಬೀಜವನ್ನು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ ನಂತ್ರ ಅವುಗಳನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಚೆನ್ನಾಗಿ ರುಬ್ಬಿಕೊಂಡು ಒಂದು ಬಟ್ಟೆಯಲ್ಲಿ ಅದರ ರಸವನ್ನು ತೆಗೆದುಕೊಳ್ಳಿ. ಅದರ ರಸವನ್ನು ಹೆಚ್ಚಿಸಲು ನಿಂಬೆ ರಸವನ್ನು ಹಾಕಿಕೊಳ್ಳಿ. ಸ್ವಲ್ಪ ಕಲ್ಲುಪ್ಪು ಸೇರಿಸಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ನೀವು ಬದಲಾವಣೆ ಕಾಣುವಿರಿ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬೂದುಕುಂಬಳಕ್ಕೆ ಹೆಚ್ಚಿನ ಆದ್ಯತೆ ಇದೆ.

ಇದರ ಬೀಜಗಳಲ್ಲಿ ಜಂತು ನಾಶಕ ಗುಣಗಳಿವೆ. ಕುಂಬಳಕಾಯಿಯ ಉಪಯೋಗ ಅದರ ಬೆಳವಣಿಗೆಯ ಮೇಲೆ ನಿರ್ಧಾರವಾಗುತ್ತದೆ.ದೇಹದ ತೂಕ ಇಳಿಸಿಕೊಳ್ಳಲುಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೂದುಕುಂಬಳ ಬಲು ಉಪಯೋಗಿ. ಕೊಬ್ಬರಿ ಎಣ್ಣೆಯಲ್ಲಿ ಬೂದುಕುಂಬಳ ಕಾಯಿ ಯಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯಲು ಸಹಕಾರಿ. ಒಣ ಮತ್ತು ಒರಟು ತಲೆಗೆಮೃದುತ್ವ ನೀಡುತ್ತದೆ. ಇದರ ತಿರುಳಿನಿಂದ ಕುಷ್ಮಾಂಡ ಲೇಹವನ್ನು ತಯಾರಿಸಲಾಗುತ್ತದೆ. ಇದರ ತೈಲವನ್ನುತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

Leave a Reply

Your email address will not be published. Required fields are marked *