ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಕರಿಬೇವು ಇಲ್ಲದೇ ಅಡುಗೆ ಅಪರಿಪೂರ್ಣ ಅಂತ ಹೇಳುತ್ತಾರೆ.ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, ನಮ್ಮ ಪರಿಸರದಲ್ಲಿ ಹಲವಾರು ಬಗೆಯ ಗಿಡಮರಗಳು ಇವೆ. ಅವುಗಳು ಒಂದೊಂದು ಬಗೆಯ ಪ್ರಯೋಜನವನ್ನು ಒದಗಿಸಿ ಕೊಡುತ್ತವೆ. ಇದರ ಜೊತೆಗೆ ವಿಶೇಷ ಆರೋಗ್ಯ ರಕ್ಷಣೆಯನ್ನು ಮಾಡುವ ನೈಸರ್ಗಿಕ ಆಹಾರ ಉತ್ಪನ್ನ ಎಂದರೆ ಮೊದಲಿಗೆ ನೆನಪು ಬರುವುದು ಕರಿಬೇವಿನ ಎಲೆ. ಇದನ್ನು ಸಮಾನ್ಯವಾಗಿ ಅಡುಗೆಯ ಒಗ್ಗರಣೆಗೆ ಬಳಸುತ್ತೇವೆ. ಇದರಲ್ಲಿರುವ ಸುವಾಸನೆ ಮತ್ತು ಆರೋಗ್ಯಕರ ಅಂಶಗಳು ಆಹಾರದ ರುಚಿ ಹಾಗೂ ಪರಿಮಳವನ್ನು ಬದಲಿಸುವುದು.

ಬಹಳ ಜನರ ಕರಿಬೇವು ತಿನ್ನುವುದಿಲ್ಲ ಪಕ್ಕಕ್ಕೆ ಇಡುತ್ತಾರೆ. ಆದರೆ ಹಾಗೆ ಮಾಡುವುದನ್ನು ತಪ್ಪಿಸಿ ಕರಿಬೇವು ಸೇವನೆ ಮಾಡಿ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಕರಿಬೇವು ಗರ್ಭಿಣಿಯರಿಗೆ ರಕ್ತದ ಕೊರತೆ ಇರುವವರಿಗೆ ಕರಿಬೇವು ದಿವ್ಯ ಔಷಧವಾಗಿದೆ. ನೈಸರ್ಗಿಕ ಗಿಡಮೂಲಿಕೆಯಾದ ಕರಿಬೇವಿನ ಎಲೆಯು ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದನ್ನು ಪೋಷಕಾಂಶಗಳ ಆಗರ, ಶಕ್ತಿ ಮನೆ ಎಂದೆಲ್ಲಾ ಕರೆಯಲಾಗುವುದು. ಈ ಪುಟ್ಟ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಬಿ12 ಗಳು ಅಧಿಕವಾಗಿರುತ್ತವೆ.

ಅಲ್ಲದೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುವುದರಿಂದ ನಿತ್ಯವೂ ಇದನ್ನು ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಆಗಲೇ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ನೈಸರ್ಗಿಕವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಕರಿಬೇವಿನ ಎಲೆಯಲ್ಲಿ ಆಲ್ಕಲಾಯ್ಡ್ ಅಂಶವಿದೆ. ಇದು ಆಳವಾದ ಅಥವಾ ಗಂಭೀರವಾದ ಗಾಯವನ್ನು ಸಹ ಗುಣಪಡಿಸುವ ಗುಣವನ್ನು ಪಡೆದುಕೊಂಡಿದೆ. ನಂಜು ನಿರೋಧಕ ಗುಣವನ್ನು ಹೊಂದಿರುವ ಈ ಎಲೆಯ ಪೇಸ್ಟ್‍ಅನ್ನು ಅಥವಾ ಇತರ ಔಷಧೀಯ ಗಿಡಮೂಲಿಕೆಯೊಂದಿಗೆ ಕರಿಬೇವನ್ನು ಬೆರೆಸಿ ಪೇಸ್ಟ್ ತಯಾರಿಸಬಹುದು.

ಮಧುಮೇಹದ ನಿಯಂತ್ರಣಕ್ಕೆ ಕರಿಬೇವಿನ ಸೊಪ್ಪು ಸಂಶೋಧಕರ ಪ್ರಕಾರ ಅವರು ಸಂಶೋಧನೆಯಲ್ಲಿ ಬಳಸಿದ ಕರಿಬೇವಿನ ಸೊಪ್ಪಿನಿಂದ ಸಂಶೋಧನೆಗೆ ಒಳಪಡಿಸಿದ ಅತಿಯಾದ ಮಧುಮೇಹ ಹೊಂದಿದ ಜನರಲ್ಲಿ ಶೇಕಡ 45 ರಷ್ಟು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕರಿಬೇವಿನ ಸೊಪ್ಪು ತನ್ನ ಶಕ್ತಿ ತೋರಿಸಿದೆ. ಬೇಧಿ, ಆಮಶಂಕೆ ನಿವಾರಣೆಗೆ ಕರಿಬೇವು ಸಹಕಾರಿ ಅದಕ್ಕಾಗಿ ಎಳೆಯದಾದ ಕರಿಬೇವಿನ ಎಲೆಯನ್ನು ಜೇನು ತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯುವುದರಿಂದ ಬೇಧಿ, ಆಮಶಂಕೆಯನ್ನು ನಿವಾರಿಸಬಹುದು.

ರಕ್ತಹೀನತೆಯ ನಿವಾರಣೆಗೆ ಕರಿಬೇವು ಸಹಕಾರಿ ಅದಕ್ಕ1/2 ಚಮಚ ಕರಿಬೇವು ಸೊಪ್ಪಿನ ಪುಡಿಯನ್ನು, ಜೇನು ತುಪ್ಪದ ಜೊತೆ ಸಮ ಪ್ರಮಾಣದಲ್ಲಿ ಬೆರಸಿ ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.ಕೂದಲು ಉದುರುವುದು, ಕೂಡಲು ಸಿಳುವುಕೆ, ಮತ್ತು ಹೊಟ್ಟಿನ ಸಮಸ್ಯೆ ಇದ್ದಲ್ಲಿ ಕರಿಬೇವಿನ ಎಲೆಯ ಪೇಸ್ಟ್ ಅಥವಾ ಎಣ್ಣೆಯ ಜೊತೆ ಲಿಂಬೆ ರಸ ಸೇರಿಸಿ, ತಲೆ ಕೂದಲಿನ ಬುಡದಲ್ಲಿ ಹಚ್ಚುವುದರಿಂದ ತಲೆಯಲ್ಲಿ ಹೊಟ್ಟಿನ ಪ್ರಮಾಣ ಕಡಿಮೆಯಾಗುತ್ತದೆ.

ಕರಿಬೇವು ಕೂದಲಿನ ಬೆಳವಣಿಗೆಗೆ ಕಾರಣವಾಗಿರುವ ನ್ಯೂಟ್ರಿಕ್ ಮತ್ತು ಪ್ರೊಟೀನ್ ಅಂಶಗಳನ್ನೂ ಹೊಂದಿದ್ದು, ಕೂದಲು ಉದುರುವುದನ್ನು ತಡೆಯುತ್ತದೆ. ಸ್ವಲ್ಪ ಕರಿಬೇವನ್ನು ತೆಗೆದುಕೊಂಡು, ಪೇಸ್ಟಮಾಡಿಕೊಂಡು ಅದಕ್ಕೆ ಮೊಸರು ಸೇರಿಸಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ, ಕೂದಲು ಉದುರುವುದನ್ನು ತಡೆಯಬಹುದು. ಹಾಗು ಇದರಿಂದ ಕೂದಲು ಕೂಡ ಸೊಂಪಾಗಿ ಬೆಳೆಯುತ್ತದೆ.

Leave a Reply

Your email address will not be published. Required fields are marked *