ನಮಸ್ತೆ ಪ್ರಿಯ ಓದುಗರೇ, ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಹಣವನ್ನು ಇಡುತ್ತೇವೆ? ಎನ್ನುವುದರ ಆಧಾರದ ಮೇಲೆ ಸಂತೋಷ ಹಾಗೂ ನೆಮ್ಮದಿ ವೃದ್ಧಿಯಾಗುವುದು. ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗಬಾರದು, ವ್ಯಾಪಾರ ಹಾಗೂ ವೃತ್ತಿಯಲ್ಲಿ ಯಾವಾಗಲೂ ಹಣದ ಹರಿವು ಇರಬೇಕು ಎಂದರೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಮೊದಲನೆಯದಾಗಿ ಹಣದ ಪೆಟ್ಟಿಗೆಯನ್ನು ಎಲ್ಲಿ ಇಡಬೇಕು ಎಂದು ನೋಡೋಣ ಸ್ನೇಹಿತರೆ, ಹಣದ ಪೆಟ್ಟಿಗೆಯನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕುಬೇರ ಮೂಲೆಯಲ್ಲಿ ಇಡಬೇಕು ಎಂದು ತಿಳಿದಿದೆ. ಆದರೆ ಸಾಮಾನ್ಯವಾಗಿ ಹಣದ ಪೆಟ್ಟಿಗೆಯನ್ನು ಉತ್ತರಾಭಿಮುಖವಾಗಿ ಕುಬೇರ ಮೂಲೆಯಲ್ಲಿ ಇಡಬೇಕು ಅಂದ್ರೆ ನೀವು ಹಣದ ಪೆಟ್ಟಿಗೆಯ ಬಾಗಿಲನ್ನು ತೆರೆ ದರೆ ಅದು ಉತ್ತರ ಮುಖಕ್ಕೆ ತೆಗೆದುಕೊಳ್ಳಬೇಕು ಹಾಗೆ ನೀವು ನಿಮ್ಮ ಹಣದ ಪೆಟ್ಟಿಗೆಯನ್ನು ಇಡಬೇಕು. ಹೀಗೆ ಇಟ್ಟಲ್ಲಿ ನಿಮ್ಗೆ ಹಣದ ಹರಿವು ಜಾಸ್ತಿ ಆಗುತ್ತೆ. ಎರಡನೆಯದಾಗಿ ಹಣದ ಪೆಟ್ಟಿಗೆಯಲ್ಲಿ ಕನ್ನಡಿಯನ್ನು ಅಳವಡಿಸಿ. ಹೀಗೆ ಹಣದ ಪೆಟ್ಟಿಗೆಯನ್ನು ತೆರೆ ದಾಗ ಕನ್ನಡಿಯನ್ನು ಹಣ ಕಾಣುವಂತೆ ಅಳವಡಿಸಿದರೆ ಹಣ ದುಪ್ಪಟ್ಟದಂತೆ ಕಾಣಿಸುತ್ತ ದೇ. ಈಗ ನಿಮ್ಮಲ್ಲಿ ಹಣ ಕಡಿಮೆ ಇದ್ದರೆ ಅದಕ್ಕೆ ಗಾಜು ಅಥವಾ ಕನ್ನಡಿ ಅಳವಡಿಸುವುದರಿಂದ ಹಣದ ಗುಣಿಕೆ ಆಗಿ ಹಣ ವೃದ್ಧಿ ಆಗುತ್ತಾ ಹೋಗುತ್ತದೆ.

ಇದು ಕೇವಲ ಹಣದ ಪೆಟ್ಟಿಗೆ ಗೆ ಮಾತ್ರ ಅಲ್ಲ. ನಿಮ್ಮ ಒಡವೆಗಳು ಇಡುವ ಪೆಟ್ಟಿಗೆಯಲ್ಲಿ ಸಹ ಕನ್ನಡಿಯನ್ನು ಅಳವಡಿಸಿ ಬಂಗಾರ ಕೂಡ ವೃದ್ಧಿ ಆಗುತ್ತಾ ಹೋಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ ನೀವು ಇಡುವ ಹಣದ ಪೆಟ್ಟಿಗೆ ಮೇಲೆ ಯಾವುದೇ ಸಜ್ಜಾ, ಶೆಲ್ಫ್, ಅಥವಾ ಯಾವುದೇ ರೀತಿಯ ಪಿಲ್ಲರ್ ಇರಕೂಡದು. ಹಾಗೆ ಈ ಕುಬೇರ ಮೂಲೆ ಏನಾದ್ರೂ ಕಟ್ ಆಗಿದ್ರೆ ಒಡೆದು ಹೋಗುವುದು, ಅಲ್ಲಿನ ಗೋಡೆ ಬಿದ್ದು ಹೋಗುವುದು ಆಗಿದ್ದರೆ ನಿಮಗೆ ಹಣದ ಮುಗ್ಗಟ್ಟು ಉಂಟಾಗುತ್ತದೆ. ಇದನ್ನು ನೀವು ತುಂಬಾ ಹುಷಾರಾಗಿ ನೋಡಿಕೊಳ್ಳಬೇಕು. ಈ ಕುಬೇರ ದಿಕ್ಕಿನಲ್ಲಿ ಏನಾದರೂ ಸಮಸ್ಯೆ ಇದ್ದಾರೆ ಅದನ್ನು ಸರಿ ಮಾಡಿಕೊಳ್ಳಬೇಕು. ಹಾಗೆಯೇ ನಿಮ್ಮ ಮನೆಯ ಅಗ್ನಿ ಮೂಲೆ ಅಥವಾ ಉತ್ತರ ದಿಕ್ಕಿನಲ್ಲಿ ಸಹ ಯಾವುದೇ ವಾಸ್ತು ದೋಷಗಳು ಇರದ ಹಾಗೆ ನೋಡಿಕೊಳ್ಳಬೇಕು. ಏಕೆಂದರೆ ಈ ಎರೆಡು ದಿಕ್ಕಿನಲ್ಲಿ ತೊಂದರೆ ಉಂಟಾದರೆ ಅದು ನಿಮ್ಮ ಖಜಾನೆಯ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ಹಾಗೆಯೇ ಕೆಬೇರ ಮೂಲೆಯಲ್ಲಿ ಯಾವುದೇ ಸೆಪ್ಟಿಕ್ ಟ್ಯಾಂಕ್ ಅಥವಾ ಟಾಯ್ಲೆಟ್ ಬರಬಾರದು ಇದರಿಂದ ನಿಮ್ಮ ಖಜಾನೆಯ ವೃದ್ಧಿ ಆಗುವುದಿಲ್ಲ. ವಸ್ತು ಸೂತ್ರದ ಪ್ರಕಾರ ಕುಬೇರನು ಉತ್ತರ ದಿಕ್ಕಿನಿಂದ ಒಳ ಬಂದು ನೈಋತ್ಯ ಮೂಲೆಗೆ ಸೇರಿಕೊಳ್ಳುತ್ತಾನೆ.

ಹಾಗಾಗಿ ಉತ್ತರ ದಿಕ್ಕಿನಲ್ಲಿ ಏನೇ ಸಮಸ್ಯೆ ಆದರೂ ನಮ್ಮ ಮನೆಯ ಖಜಾನೆಗೆ ಹೊಡೆತ ಬೀಳುತ್ತದೆ. ಹಾಗಾಗಿ ಉತ್ತರ ದಿಕ್ಕಿಗೆ ಅಥವಾ ಉತ್ತರ ದಿಕ್ಕಿನಿಂದ ಬರುವ ದಾರಿಯಲ್ಲಿ ಯಾವುದೇ ಭಾರದ ವಾಸ್ತು ಅಥವಾ ಗಜಿ ಬಿಜಿ ಎನ್ನುವ ವಸ್ತುಗಳನ್ನು ಇಡದಿದ್ದರೆ ಒಳ್ಳೆಯದು. ಯಾವಾಗಲೋ ಮನೆಯ ಮುಖ್ಯ ದ್ವಾರ ಅಗಲವಾಗಿ ತುಂಬಾ ಬೆಳಕು ಚೆಲ್ಲುವ ಹಾಗೆ ಇರಬೇಕು. ಕತ್ತಲಿನ ಕಡೆಗೆ ಯಾವುದೇ ಕಾರಣಕ್ಕೂ ಬಾಗಿಲನ್ನು ಇಡಬಾರದು. ಮತ್ತೆ ಮನೆಯ ಬಾಗಿಲನ್ನು ಸಂದಿಯಲ್ಲಿ ಸಿಕ್ಕಿಸಿ ಹಾಕಬಾರದು. ವಿಸ್ತಾರವಾದ ದ್ವಾರದೊಳಗೆ ಒಳ್ಳೆಯ ಪಾಸಿಟಿವ್ ಎನರ್ಜಿ ಬರುತ್ತದೆ. ನಿಮ್ಮ ಮನೆಯ ಅಗ್ನಿ ಮೂಲೆಯಲ್ಲಿ ನೀಲಿ ಬಣ್ಣ ಹೊಡೆಸಿದ್ದರೆ ಕೂಡ ನಿಮ್ಮ ಮನೆಯ ಖಜಾನೆಗೆ ಹೊಡೆತ ಬೀಳುತ್ತದೆ. ಹಾಗೆಯೇ ಅಗ್ನಿ ಮೂಲೆ ಅಂದ್ರೆ ನಿಮ್ಮ ಅಡುಗೆ ಮನೆಯಲ್ಲಿ ನೀವು ಈಗಾಗಲೇ ನೀಲಿ ಬಣ್ಣ ಹೊಡೆಸಿದ್ದರೆ ಈ ವಾಸ್ತು ದೋಷವನ್ನು ಪರಿಹರಿಸಲು ನಿಮ್ಮ ಅಡುಗೆ ಮನೆಯಲ್ಲಿ ಒಂದು ಕೆಂಪು ಬಣ್ಣದ ಲೈಟ್ ಹಾಕಿರಿ. ಇದರಂತೆಯೇ ಉತ್ತರ ದಿಕ್ಕಿನಲ್ಲಿ ಕೂಡ ಹಳದಿ ಬಣ್ಣದ ಲೈಟ್ ಅಥವಾ ಹಳದಿ ಬಣ್ಣವನ್ನು ಉತ್ತರ ದಿಕ್ಕಿನ ಗೋಡೆಗೆ ಹೊಡೆಸುವುದರಿಂದ ನಿಮ್ಮ ಖಜಾನೆಯ ಶಕ್ತಿ ಹೆಚ್ಚಿ ಹಣ ವೃದ್ಧಿ ಆಗಲು ಸಹಾಯ ಆಗುತ್ತದೆ. ಅಥವಾ ಉತ್ತರ ದಿಕ್ಕಿನಲ್ಲಿ ಒಂದು ಹಳದಿ ಬಣ್ಣದ ನೀರಿನ ಬಾಟಲ್ ಅಲ್ಲಿ ನೀರು ತುಂಬಿ ಇಟ್ಟರೂ ಈ ಸಮಸ್ಯೆ ಪರಿಹಾರ ಆಗುತ್ತೆ. ಹೀಗೆ ಹಲವಾರು ಚಿಕ್ಕ ಚಿಕ್ಕ ತಪ್ಪುಗಳಿಂದ ನಮ್ಮ ಮನೆಯ ಖಜಾನೆ ವೃದ್ಧಿ ಆಗಲು ತೊಂದರೆಗಳು ಉಂಟಾಗುತ್ತದೆ. ಇವೆಲ್ಲವುಗಳ ಗಮನ ಹರಿಸಿದರೆ ನಿಮ್ಮ ಮನೆಯ ಹಣದ ಪೆಟ್ಟಿಗೆ ಸದಾ ಬೆಳೆಯುತ್ತಾ ಹೋಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *