ನಮಸ್ತೇ ಪ್ರಿಯ ಓದುಗರೇ ಆಚಾರ್ಯ ಚಾಣಕ್ಯ ರಚಿಸಿದ ನೀತಿ ಗ್ರಂಥ ಎಲ್ಲರಿಗೂ ಒಂದು ಮಾರ್ಗದರ್ಶಕ. ಅವರ ನಿಯಮಗಳು ತತ್ವಗಳು ಈಗಲೂ ಪ್ರಸ್ತುತ. ಹಾಗೂ ಇವರ ನಿಯಮಗಳು ಜೀವನವನ್ನು ಸುಖಮಯ ಮತ್ತು ಸಂತೋಷವನ್ನಾಗಿಸಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಅವರು ಹೇಳುವ ಪ್ರತಿಯೊಂದು ಮಾತುಗಳು ಜೀವನಕ್ಕೆ ಹೊಸ ಮಾರ್ಗ. ಚಾಣಕ್ಯನ ಪ್ರತಿಯೊಂದು ಮಾತುಗಳು ಬದುಕಿನಲ್ಲಿ ಬೆಳಕನ್ನು ತೋರುತ್ತವೆ. ಚಾಣಕ್ಯರು ಇಂತಹ ನಾಲ್ಕು ಸ್ಥಳದಲ್ಲಿ ಇರಬಾರದು ಅಂತ ಹೇಳಿದ್ದಾರೆ. ಹಾಗೂ ಅಂಥಹ ಸ್ಥಳದಲ್ಲಿ ಇದ್ದರೆ ಅದರಿಂದ ಆಗುವ ಅನೇಕ ಪರಿಣಾಮಗಳನ್ನು ಕುರಿತು ಕೂಡ ನಮಗೆ ತಿಳಿಸಿದ್ದಾರೆ. ಹೌದು ನೀವು ಸುಖವಾಗಿ ಇರಲು ಇಷ್ಟ ಪಡುವುದಾದರೆ ಈ ನಾಲ್ಕು ಸ್ಥಳದಲ್ಲಿ ನಿಲ್ಲಬಾರದು ಎಂಬುದು ಚಾಣಕ್ಯರ ಅಭಿಪ್ರಾಯ. ಅಂಥಹ ನಾಲ್ಕು ಜಾಗಗಳು ಯಾವುವು ಅಂತ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ.ಮೊದಲಿಗೆ ಗೌರವ ಸಿಗದ ಜಾಗ. ಹೌದು ಒಬ್ಬ ವ್ಯಕ್ತಿಗೆ ಆತ್ಮ ಸ್ವಾಭಿಮಾನ ಹಾಗೂ ಸೆಲ್ಫ್ ರೆಸ್ಪೆಕ್ಟ್ ಅನ್ನುವುದು ತುಂಬಾನೇ ಮುಖ್ಯವಾಗಿರುತ್ತದೆ. ಸ್ವಾಭಿಮಾನ ಅನ್ನುವುದೊಂದಿದ್ದರೆ ನಾವು ಎಂಥಹ ಕೆಟ್ಟ ಸ್ಥಳದಲ್ಲಿ ಕೂಡ ಇದ್ದು ಜಯಸಿ ತೋರಿಸಬಹುದು. ಯಾವ ವ್ಯಕ್ತಿಗೆ ಗೌರವ ಸಿಗುವುದಿಲ್ಲ ಅಂಥಹ ಸ್ಥಳದಲ್ಲಿ ಒಂದು ಕ್ಷಣ ಕೂಡ ಇರಬಾರದು.

ವ್ಯಕ್ತಿ ಸಮಾಜದಲ್ಲಿ ಗೌರವದಿಂದ ಬೆಳೆಯಬೇಕಾದರೆ ಮೊದಲು ಆತನು ಸಮ್ಮಾನ ಸ್ವಾಭಿಮಾನವನ್ನು ಗಳಿಸಬೇಕು. ಹಾಗೂ ಅದನ್ನು ಕಾಪಾಡಿಕೊಂಡು ಬರಬೇಕು ಒಂದುವೇಳೆ ನಿಮಗೆ ಎಲ್ಲಿ ಗೌರವ ಸಿಗುವುದಿಲ್ಲ ಅಲ್ಲಿ ನೀವು ಇರಬಾರದು ಹಾಗೆಯೇ ಗೌರವ ಪ್ರೀತಿ ಇರುವ ಜಾಗದಲ್ಲಿ ನೀವು ಕಷ್ಟವಾದರೂ ಸರಿಯೇ ಇರಬೇಕು. ಅದಕ್ಕಾಗಿ ಸ್ವಾಮಿ ವಿವೇಕಾನಂದರು ಕೂಡ ಒಂದು ಮಾತು ಹೇಳುತ್ತಾರೆ ಗೌರವ ಸಿಗದ ಜಾಗದಲ್ಲಿ ನಮ್ಮ ಚಪ್ಪಲಿಗಳನ್ನು ಕೂಡ ಬಿಡಬಾರದು ಎಂದು. ಹಾಗೆಯೇ ಆಚಾರ್ಯ ಚಾಣಕ್ಯರು ಕೂಡ ತಿಳಿಸಿದ್ದಾರೆ. ಇನ್ನೂ ಎರಡನೆಯದು, ನಿಮಗೆ ಯಾವ ಸ್ಥಳದಲ್ಲಿ ಹೊಸದನ್ನು ಕಲಿಯಲು ಆಗುವುದಿಲ್ಲವೋ ಅಂಥಹ ಸ್ಥಳದಲ್ಲಿ ನೀವು ಎಂದಿಗೂ ನಿಲ್ಲಕೂಡದು. ಹೌದು ವ್ಯಕ್ತಿ ನಿರಂತರವಾಗಿ ಕಲೆಯುತ್ತಲೆ ಇರಬೇಕು. ನಿಂತ ನೀರ ಹಾಗೆ ಇರಕೂಡದು. ಹೊಸದಾಗಿ ಏನಾದರೂ ಕೂಡ ಕಲಿಯಬೇಕು. ಇದು ಯಶಸ್ಸಿಗೆ ಮಾತ್ರವಲ್ಲದೆ ಜೀವನದುದ್ದಕ್ಕೂ ಸಹಾಯಕ್ಕೆ ಬರುತ್ತದೆ. ಒಂದು ವೇಳೆ ನಿಮಗೆ ಹೊಸದಾದನ್ನು ಕಲಿಯಲು ಆಗದೇ ಇದ್ದರೆ ಅಂಥಹ ಸ್ಥಳದಲ್ಲಿ ಎಂದಿಗೂ ನಿಲ್ಲಬೇಡಿ. ಅದಕ್ಕಾಗಿ ನಾವು ಅವಕಾಶವನ್ನು ಮಾಡಿಕೊಂಡು ಕಲಿಯಬೇಕು ಅನ್ಯರಿಗೂ ಕೂಡ ಕಲಿಸಬೇಕು. ಇದು ನಿಮ್ಮ ಮುಂದಿನ ಪೀಳಿಗೆಗೆ ಸಹಾಯ ಆಗುತ್ತದೆ. ಕಾಲಕ್ಕೆ ತಕ್ಕಂತೆ ನಡೆಯುತ್ತಾ ಹೊಸ ವಿಷಯಗಳನ್ನು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು.

ಮೂರನೆಯದು, ಪ್ರೀತಿ ಇಲ್ಲದ ಜಾಗದಲ್ಲಿ ಎಂದಿಗೂ ಇರಬಾರದು. ಹೌದು ಮನುಷ್ಯ ಭಾವನಾ ಜೀವಿ ಅಂತ ಹೇಳಿದರೆ ತಪ್ಪಾಗಲಾರದು, ಭಾವನೆಗಳಿಂದ ತುಂಬಿದ ಮನುಷ್ಯ ಪ್ರೀತಿ ವಾತಾವರಣ ಹಾಗೂ ಅರ್ಥ ಮಾಡಿಕೊಳ್ಳುವ ಜೀವವನ್ನು ಬಯಸುತ್ತಾನೆ. ಇನ್ನೂ ನಮ್ಮನ್ನು ಇಷ್ಟ ಪಡುವವರು ಜೊತೆಗೆ ಇದ್ದರೆ ನಮ್ಮ ಎಲ್ಲ ಕಷ್ಟಗಳು ನಷ್ಟಗಳನ್ನು ಹೇಳಿಕೊಳ್ಳುವ ಮನಸ್ಸು ಬರುತ್ತದೆ. ಇಲ್ಲವಾದರೆ ಮನಸ್ಸು ಕುಗ್ಗುತ್ತದೆ. ಕಲ್ಲಿನಂತೆ ಆಗುತ್ತದೆ. ನಿಮ್ಮ ಮಾತು ಕೇಳುವವರು ಹಾಗೂ ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಹಾಗೂ ನಿಮ್ಮನ್ನು ಪ್ರೀತಿ ಮಾಡುವವರು ಇಲ್ಲದೇ ಇರುವ ಜಾಗದಲ್ಲಿ ಎಂದಿಗೂ ಇಡಬೇಡಿ ಅಂಥ ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಇನ್ನೂ ನೀವು ಮಾಡುವ ಕೆಲಸದಲ್ಲಿ ಆನಂದ ಖುಷಿ ಕೊಡುತ್ತಿಲ್ಲ ಅಂದರೆ ಅಲ್ಲಿ ಎಂದಿಗೂ ಇರಬೇಡಿ. ನೀವು ಕೆಲಸವನ್ನು ಇಷ್ಟ ಪಟ್ಟು ಮಾಡುವುದರಿಂದ ಅದರಿಂದ ಖುಷಿ ಸಿಗುತ್ತದೆ ಅಂದರೆ ಮಾತ್ರ ಅಲ್ಲಿ ನೀವು ಉಳಿದುಕೊಳ್ಳಿ. ಸಿಗುವ ಕೆಲಸವನ್ನು ದೇವರು ಕೊಟ್ಟ ಕೆಲಸ ಅಂತ ತಿಳಿದುಕೊಂಡು ಸಿಕ್ಕ ಕೆಲಸವನ್ನು ಚೆನ್ನಾಗಿ ಶ್ರದ್ಧೆ ಭಕ್ತಿಯಿಂದ ಮಾಡಿ. ಜೀವನದಲ್ಲಿ ಸುಖ ಶಾಂತಿ ಆಗಿ ಇರಬೇಕೆಂದರೆ ನೀವು ಇಂತಹ ಸ್ಥಳದಲ್ಲಿ ಎಂದಿಗೂ ಇರಬೇಡಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *