ರಾಜ್ಮಾ ಉತ್ತರಭಾರತದ ರಾಜ್ಯಗಳಲ್ಲಿ ಬಹಳ ಜನಪ್ರಿಯ ಧಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ದಕ್ಷಿಣಭಾರತದಲ್ಲೂ ಅಡುಗೆಯಲ್ಲಿ ಬಳಸಿಕೊಳ್ಳುತ್ತಾರೆ. ಸಾಂಬಾರು, ಪಲ್ಯ ಮಾಡಲು ರಾಜ್ಮಾ ವನ್ನು ಬಳಸಲಾಗುತ್ತದೆ. ಬೀನ್ಸ್ ಬೀಜದಂತಿದ್ದು, ದೊಡ್ಡ ಗಾತ್ರದಲ್ಲಿರುವ ರಾಜ್ಮಾ ಹಲವು ಆರೋಗ್ಯಕರ ಗುಣಗಳನ್ನು ಸಹ ಹೊಂದಿದೆ. ರಾಜ್ಮಾವನ್ನು ನೀರಿನಲ್ಲಿ ನೆನೆಸಿಟ್ಟು, ಕುಕ್ಕರ್‌ನಲ್ಲಿ ಬೇಯಿಸಿ ಜೀರಿಗೆ,. ಧನಿಯಾ, ಬೆಳ್ಳುಳ್ಳಿ, ಮೆಣಸು ಮೊದಲಾದ ಮಸಾಲೆಗಳನ್ನು ಸೇರಿಸಿ ಸಾಂಬಾರನ್ನು ಸಿದ್ಧಪಡಿಸಲಾಗುತ್ತದೆ. ಅನ್ನದ ಜತೆಗೆ ಇದನ್ನು ಬಡಿಸಲಾಗುತ್ತದೆ. ಆರೋಗ್ಯ ಕ್ಕೆ ಹಿತವಾಗಿರುವ ಉತ್ತರಭಾರತದಲ್ಲಿ ಮೂರು ಹೊತ್ತಿನ ಊಟದಲ್ಲೂ ರಾಜ್ಮಾವನ್ನು ಕಡ್ಡಾಯವಾಗಿ ಬಳಸುತ್ತಾರೆ. ಸ್ವಲ್ಪ ಪ್ರಮಾಣದ ಬಿಳಿ ಅನ್ನ ಅಥವಾ ಚಪಾತಿಯೊಂದಿಗೆ ರಾಜ್ಮಾವನ್ನು ತಿನ್ನುವುದು ಮಧುಮೇಹ ಇರುವವರಿಗೆ ಆರೋಗ್ಯಕರ ಊಟವಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮೈಕ್ರೋ ನ್ಯೂಟ್ರಿಯಂಟ್‌ಗಳು, ಫೈಬರ್ ಮತ್ತು ಪ್ರೊಟೀನ್‌ಗಳು ರಾಜ್ಮಾದಲ್ಲಿ ಸಮೃದ್ಧವಾಗಿದೆ. ರಾಜ್ಮಾ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಅಲ್ಲದೆ, ಮಧುಮೇಹ ಹೊಂದಿರುವ ಜನರಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ರಾಜ್ಮಾ ಸೇವನೆ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೂ ರಾಜ್ಮಾ ಸೇವನೆ ಬೆಸ್ಟ್. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರಾಜ್ಮಾದಲ್ಲಿರುವ ನಾರಿನಂಶವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ರಾಜ್ಮಾದಲ್ಲಿರುವ ಖನಿಜಗಳು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧಿಯು ಮೂಳೆಗಳನ್ನು ಬಲಪಡಿಸಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ರಾಜ್ಮಾವನ್ನು ನಿಯಮಿತವಾಗಿ ಸೇವಿಸುವುದು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ರಾಜ್ಮಾದಲ್ಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಇರುವ ಕಾರಣ, ಇದು ಪರಿಪೂರ್ಣ ತೂಕ ನಷ್ಟದ ಆಹಾರವಾಗಿದೆ. ರಾಜ್ಮಾದಲ್ಲಿನ ಕರಗುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಕೊಲೆಸ್ಟ್ರಾಲ್ ಅನ್ನು ಮರುಹೀರಿಕೆ ಮಾಡುವುದನ್ನು ತಡೆಯುತ್ತದೆ ಎಂದು ಪುರಾವೆಗಳು ಸಾಬೀತುಪಡಿಸುತ್ತವೆ.

Leave a Reply

Your email address will not be published. Required fields are marked *