ಪ್ರಯತ್ನ ಮತ್ತು ಶ್ರದ್ಧೆ ಒಬ್ಬ ವ್ಯಕ್ತಿಯ ಜೀವನ ಹೇಗೆ ಬದಲಾಯಿಸುತ್ತದೆ ಅನ್ನೋದಕ್ಕೆ ಬೆಂಗಳೂರಿನ ಈ ಮಹಿಳೆ ಉದಾಹರಣೆ ಒಂದು ಮಾಹಿತಿಯನ್ನು ತಿಳಿದು ಅದರ ಹಿಂದೆ ಬಿದ್ದು ಶ್ರದ್ಧೆಯಿಂದ ಅದನ್ನು ಕಾರ್ಯರೂಪಕ್ಕೆ ತಂದು ಇವತ್ತು ಕೈತುಂಬ ಹಣ ಸಂಪಾದಿಸುತ್ತಿರುವ ಇವರ ಜೀವನದ ಹಾದಿಯ ಬಗ್ಗೆ ನೋಡೋಣ ಬನ್ನಿ. ಇವರ ಹೆಸರು ನಂದಿನಿ. ಬೆಂಗಳೂರು ಗ್ರಾಮಾಂತರ ಪ್ರದೇಶದವರು ನಂದಿನಿ.ಅವರ ತಂದೆ ದೇವಸ್ಥಾನದಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. ಓದಿನಲ್ಲಿ ಮುಂದಿದ್ದ ನಂದಿನಿ ಅವರು ಡಾಕ್ಟರ್ ಆಗಬೇಕು ಎಂದು ಕನಸು ಕಂಡರು. ಆದರೆ ಬಡತನ ಅವರ ಆಸೆಯನ್ನು ನುಂಗಿ ಬಿಡ್ತು.ಪಿಯುಸಿ ಆದ್ಮೇಲೆ ನಂದಿನಿ ಅವರಿಗೆ ಮದುವೆ ಮಾಡಿದರು.

ನಂದಿನಿ ಅವರ ಗಂಡ ಕೂಡ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದರು. ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದ ನಂದಿನಿ ಅವರು ಹೇಗೋ ಹಾಗೆ ಕುಟುಂಬ ಮುನ್ನಡೆಸುತ್ತಿದ್ದರು. ಆದರೆ 1 ದಿನ ನಂದಿನಿ ಅವರ ತಂದೆ ಹಠಾತ್ತಾಗಿ ಮರಣ ಹೊಂದಿದರು.ಆಗ ತನ್ನ ತಂಗಿಗೆ ಮದುವೆ ಮಾಡುವ ಜವಾಬ್ದಾರಿ ನಂದಿನಿಯ ಹೆಗಲಿನ ಮೇಲೆ ಬಂತು. ಚೆನ್ನಾಗಿ ದುಡಿದು ತಂಗಿಗೆ ಒಳ್ಳೆ ಕಡೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಆಶಯ ನಂದಿನಿಯವರದ್ದಾಗಿತ್ತು. ಸ್ನೇಹಿತರೊಬ್ಬರು ಹೇಳಿದ ಸಲಹೆಯಂತೆ ತನ್ನ ಎಲ್ಲಾ ಒಡವೆಗಳನ್ನು ಒತ್ತೆ ಇಟ್ಟು ನಂದಿನಿ ಅದರಿಂದ ಬಂದ ಹಣದಿಂದ ಒಂದು ಕಾರನ್ನು ಖರೀದಿ ಮಾಡಿ ಉಬರ್ ನಲ್ಲಿಬಿಟ್ಟರು

ಆಗ ನಂದಿನಿ ಅವರಿಗೆ ಒಂದು ವಿಷಯ ತಿಳಿಯಿತು, ಅದೇನೆಂದರೆ ನಮ್ಮ ಜೀವನದಲ್ಲಿ ನಾವು ಮುಂದೆ ಬರಬೇಕು ಎಂದರೆ ನಾವು ಯಾವುದಾದರೂ ಒಂದು ಕೆಲಸಕ್ಕೆ ನಮ್ಮ ಸಂಪೂರ್ಣವಾದ ಶ್ರಮವನ್ನು ಅದಕ್ಕೆ ಕೊಡಬೇಕು ಅದು ಅವರ ಜೀವನವನ್ನು ಬದಲಾಯಿತು. ತಮಗೆ ಗೊತ್ತಿರುವ ಡ್ರೈವರ್ ನನ್ನು ಒಬ್ಬ ಸಂಸ್ಥೆಗೆ ರೆಫರ್ ಮಾಡಿದರೆ ಆತ ಕೆಲವು ಟ್ರಿಪ್‌ಗ್ಳನ್ನು ಪೂರ್ತಿ ಮಾಡಿದಾಗ 3000 ಕಮಿಷನ್ ಬರುತ್ತೆ ಅನ್ನೋದನ್ನು ತಿಳಿದ ನಂದಿನಿ ಅವರು ತಮಗೆ ತಿಳಿದಿರುವ ಡ್ರೈವರ್ ಅನ್ನು ರೆಫರ್ ಮಾಡಿದರು. ಹಾಗೆ ಡ್ರೈವರ್ಬೇಕು ಎಂದು ಎಲ್ಲ ಕಡೆ ಪೋಸ್ಟರ್ ಅಂಟಿಸಿದರು.

ಪ್ರಾರಂಭದಲ್ಲಿ ರೈಲ್ವೆ ಸ್ಟೇಷನ್, ಐಟಿ ಪಾರ್ಕ್‌ಗೆ ತೆರಳಿ ಡ್ರೈವರ್‌ಗಳನ್ನು ಮಾತನಾಡಿಸಿ ಊಬರ್ಗೆ ಸೇರುವಂತೆ ಮಾಹಿತಿ ಕೊಟ್ಟರು. ಹೀಗೆ ಡ್ರೈವರ್ಗಳನ್ನು ರೆಫರ್ ಮಾಡಿದ ನಂದಿನಿ ಹಣ ಗಳಿಸಲು ಪ್ರಾರಂಭಿಸಿದರು. ಈಗ ಎರಡು ಸಾವಿರಕ್ಕೂ ಹೆಚ್ಚು ಡ್ರೈವರ್ನ ಫಿಕ್ಸ್ ಮಾಡಿದ್ದು, ಪ್ರತಿ ತಿಂಗಳು ಎರಡು ಲಕ್ಷಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾರೆ. ನೋಡಿದ್ರಲ್ಲ ನಮ್ಮ ಲಕ್ ಯಾವುದರಲ್ಲಿ ತೆರೆಯುತ್ತದೆ ಎಂಬುದನ್ನು ನಮಗೆ ಗೊತ್ತಿರುವುದಿಲ್ಲ ಹಾಗಾಗಿ ನಾವು ಎಲ್ಲಾ ಕೆಲಸವನ್ನು ಕೂಡ ಪ್ರಯತ್ನ ಮಾಡಲೇಬೇಕು ಇಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ

Leave a Reply

Your email address will not be published. Required fields are marked *