ನಮಸ್ತೆ ಪ್ರಿಯ ಓದುಗರೇ, ಮೇಲಿನ ಶೀರ್ಷಿಕೆಯೇ ಹೇಳುವ ಹಾಗೆ ಸಕಾರಾತ್ಮಕ ಯೋಚನೆ ಮಾಡೋದ್ರಿಂದ ದೇಹ ಹಾಗೂ ಮನಸ್ಸಿಗೆ ತುಂಬಾ ಒಳ್ಳೆಯದು ಅಂತ ಗೊತ್ತು. ಆದ್ರೆ ಆ ಸಕಾರಾತ್ಮಕ ಚಿಂತನೆಗಳು ಹುಟ್ಟೋದು ಎಲ್ಲಿಂದ? ‘ಸರಳ ಬದುಕಿನಿಂದ’. ಕೆಲವರಿಗೆ ಡಿಪ್ರೆಶನ್ ಅಂದ್ರೆ ಖಿನ್ನತೆ, ಕೆಲವರಿಗೆ ಆತಂಕ ಮೂಡುವುದು, ಕೆಲವರಿಗೆ ನಿದ್ದೆ ಬರದೇ ಇರುವುದು ಹೇಗೆ ವಿವಿಧ ವಾದ ಮನೋರೋಗಗಳು ಜಾಸ್ತಿ ಆಗ್ತಾ ಇವೆ. ಇಂತಹ ಸಂದರ್ಭದಲ್ಲಿ ಯಾವ ರೀತಿ ನಾವು ಒಂದು ಧನಾತ್ಮಕ, ಸಕಾರಾತ್ಮಕ ಯೋಚನೆ, ಚಿಂತನೆಗಳನ್ನು ಇಟ್ಟುಕೊಂಡು ನಮ್ಮ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ? ಇದರ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ತಿಳಿದುಕೊಳ್ಳೋಣ ಸ್ನೇಹಿತರೆ. ಮೇಲಿನ ಎಲ್ಲಾ ಸಮಸ್ಯೆಗಳಿಗೆ ಏನೆಲ್ಲಾ ಮಾಡಬಹುದು ಎಂದು ಸ್ವಲ್ಪ ಚರ್ಚೆ ಮಾಡೋಣ ಸ್ನೇಹಿತರೆ. ಬೆಳಿಗ್ಗೆ ಏಳುತ್ತಾ ಇದ್ದಂಗೆ ಒಂದು ಧನಾತ್ಮಕ ಚಿಂತನೆ, ಯೋಚನೆ, ಒಂದು ಧನಾತ್ಮಕ ಭರವಸೆ ಇಂದ ಏಳುವುದು. ಅದು ಹೇಗೆ ಸಾಧ್ಯ ಅಂತ ಕೇಳಬಹುದು ನೀವು. ಬೆಳಿಗ್ಗೆ ಎದ್ದ ಮೇಲೆ ಚೆನ್ನಾಗಿ ಫ್ರೆಶ್ ಆಗಿ ಸ್ನಾನ ಇತ್ಯಾದಿ ಕೆಲಸಗಳನ್ನು ಮುಗಿಸಿ, ದೇವರಿಗೆ ನಮಿಸಿ, ಇಂದಿನ ದಿನ ತುಂಬಾ ಚೆನ್ನಾಗಿರಲಿ ದೇವರೇ ಅಂತ ಕೇಳಿಕೊಂಡು ಅಂದಿನ ಕೆಲಸವನ್ನು ಚೆನ್ನಾಗಿ ಆಗುತ್ತೆ ಅನ್ನೋ ಭರವಸೆ ಇಂದ ಶುರು ಮಾಡುವುದು, ದಿನವನ್ನು ಹೇಗೆ ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ದಿನವನ್ನು ಕಳೆಯುವುದು ಎಂದು ಆಲೋಚನೆ ಮಾಡಬೇಕು.

ಕೆಲಸದ ಒತ್ತಡ ಅಂತ ಹೇಳಿ ಬೆಳಿಗ್ಗೆ ಉಪಹಾರ ಸೇವಿಸದೇ ಕೆಲಸಕ್ಕೆ ಹೊರಡುವುದು, ತಡ ರಾತ್ರಿ ಕೆಲಸ ಮಾಡಿ, ನಿದ್ದೆ ಸರಿ ಹೋಗದೇ ಇರುವುದು ತಮ್ಮ ಬಗ್ಗೆ ತಾವೇ ಕಾಳಜಿ ವಹಿಸದೇ ಇರುವುದು ತಪ್ಪು. ಬೆಳಿಗ್ಗೆ ಎಲ್ಲಿಗೆ ಹೋದರೂ ಚೆನ್ನಾಗಿ ತಿಂಡಿ ತಿಂದೆ ಹೊರಗಡೆ ಕಾಲಿಡಬೇಕು. ಆಗ ನಿಮ್ಮ ದೇಹ ಮತ್ತು ಮನಸ್ಸು ಒಳ್ಳೆಯ ಏಕಾಗ್ರತೆ ಇಂದ ಇರಲು ಸದಾ ಚೈತನ್ಯ ವಾಗಿ ಇರಲು ಸಹಾಯ ಆಗುತ್ತೆ. ಇದೆಲ್ಲ ದಿನವನ್ನು ಹೇಗೆ ಸಕಾರಾತ್ಮಕವಾಗಿ ಶುರು ಮಾಡಬೇಕು ಎಂದಾಯ್ತು. ನಂತರ ಜೀವನ ಎಂದಮೇಲೆ ಧನಾತ್ಮಕ ಹಾಗೂ ಋಣಾತ್ಮಕ ವಾಗಿಯೂ ನಡೀತಾ ಇರುತ್ತೆ. ಒಂದು ಸಣ್ಣ ವಿಷಯ ಧನಾತ್ಮಕವಾಗಿ ನಡೆದರೂ, ಧನಾತ್ಮಕ ಅನ್ನಿಸಿದರೂ ಖುಷಿ ಪಡಿ. ಅದನ್ನು ಸಂಭ್ರಮಿಸಿ. ಋಣಾತ್ಮಕ ಅಂಶಗಳನ್ನು ಆದಷ್ಟು ಮನಸ್ಸಿನಿಂದ ಅಳಿಸಲು ಪ್ರಯತ್ನ ಮಾಡಿ. ಸಣ್ಣ ಸಣ್ಣ ಖುಷಿ ಗಳಿಗೆ ಮಹತ್ವ ಕೊಡಿ ಅದನ್ನು ಗುರುತಿಸಿ. ಧನಾತ್ಮಕ ಅಂಶಗಳ ಬಗ್ಗೆ ಗಮನ ಕೊಡುತ್ತಾ ಇದ್ದರೆ ಮುಂದೆ ಒಳ್ಳೆಯದಾಗುತ್ತದೆ ಎನ್ನುವ ಭರವಸೆ ಮೂಡುತ್ತದೆ. ಇದರಿಂದ ಆತ್ಮವಿಶ್ವಾಸ ಕೂಡ ಬೆಳೆದು ಇದು ನನ್ನಿಂದ ಆಗುತ್ತೆ ನಾನು ಸಾಧಿಸಬಲ್ಲೆ ಅನ್ನೋದು ಮನಸ್ಸಿಗೆ ಬರುತ್ತೆ. ಏನಾದರೂ ಋಣಾತ್ಮಕ ವಾಗಿ ನಡೆದಿದ್ದರೆ ಅದನ್ನು ಬೇರೆಯವರ ಮುಂದೆ ಹೇಳಿಕೊಂಡು ಅದರ ಮೇಲೆ ಜೋಕ್ ಮಾಡಿ ಅದನ್ನು ಅಲ್ಲೇ ಬಿಟ್ಟು ಬಿಡಿ. ಉದಾಹರಣೆಗೆ ಈ ಥರ ಆಯ್ತು ಅಂತ ನೀವು ಬೇಜಾರಿನ ವಿಷ್ಯ ನಿಮ್ಮ ಗೆಳೆಯರಿಗೆ ಹೇಳಿದಾಗ ಅವರು ಅದನ್ನು ಸುಧಾರಿಸಿ ಜೋಕ್ ಮಾಡಿದಾಗ ಆ ಪರಿಸ್ಥಿತಿ ಯ ತೀವ್ರತೆ ಕಡಿಮೆ ಆಗುತ್ತದೆ. ಆಗ ನಮ್ಮ ಧೈರ್ಯ ಆತ್ಮ ವಿಶ್ವಾಸ ವಾಪಸ್ ಬರುತ್ತದೆ.

ಏನಾದರೂ ನೆಗಟಿವ್ ಆಗಿ ನಡೆದಾಗ ಆ ಸನ್ನಿವೇಶದ ಕುರಿತು ಸಂಪೂರ್ಣ ವಾಗಿ ಆಲೋಚಿಸಿ, ಯಾಕೆ ಹೀಗಾಯ್ತು, ಎಲ್ಲಿ ಏನು ತಪ್ಪಾಯ್ತು ಅಂತ ಆಲೋಚನೆ ಮಾಡಿದರೆ ನಿಮ್ಮ ಉತ್ತರ ಸಿಕ್ಕೆ ಸಿಗುತ್ತದೆ. ಮುಂದಿನ ಬಾರಿ ಹಾಗೆ ಆಗದ ಹಾಗೆ ನನ್ನಲ್ಲಿ ಏನು ಬದಲಾವಣೆ ತಂದುಕೊಳ್ಳಬಹುದು ಅಂತ ಗಮನ ವಹಿಸಿ. ತುಂಬಾ ನೆಗಟಿವ್ ಯೋಚನೆಗಳು ಬರುತ್ತಿರುವಾಗ ಅವುಗಳನ್ನು ನಾವು ಹೇಗೆ ಪಾಸಿಟಿವ್ ಆಗಿ ಚೇಂಜ್ ಮಾಡಬಹುದು ಎಂದು ನೋಡುವುದಾದರೆ, ಮೊದಲನೆಯದು ನಿಮ್ಮಲ್ಲಿ ನೀವು ಆತ್ಮವಿಶ್ವಾಸ ಇಟ್ಟು ನಿಮ್ಮ ಜೊತೆ ನೀವೇ ಮಾತನಾಡಿ ಧೈರ್ಯ ತುಂಬಿಕೊಳ್ಳುವುದು. ಹೇಗೆಂದರೆ ಏನೋ ಕೆಲಸ ಆಗಿಲ್ಲ ಎಂದಾಗ ನಿಮ್ಮೊಡನೆ ನೀವೇ ಮಾತನಾಡಿ ಇಲ್ಲ ಇದು ನನ್ನಿಂದ ಆಗುತ್ತೆ ನಾನು ಮಾಡೆ ಮಾಡ್ತೀನಿ ಅನ್ನೋ ಭರವಸೆಯನ್ನು ನಿಮ್ಮ ಮನಸ್ಸಿಗೆ ನೀಡಿ. ಅಥವಾ ಇಂತಹ ಕ್ಲಿಷ್ಟಕರ ಸಮಯದಲ್ಲಿ ನಿಮಗೆ ಯಾರು ಸರಿಯಾಗಿ ಗೈಡ್ ಅಥವಾ ಉಪದೇಶ ಮಾಡುತ್ತಾರೋ ಅಂತ ಫ್ರೆಂಡ್ಸ್ ಜೊತೆ, ಯಾರು ಧನಾತ್ಮಕ ವೈಬ್ ಕೊಡ್ತಾರೆ ಅಂತ ಫ್ರೆಂಡ್ಸ್ ಫ್ಯಾಮಿಲಿ ಜೊತೆಗೆ , ಯಾರು ನಿಮ್ಮಲ್ಲಿ ಉತ್ಸಾಹ ತುಂಬುತ್ತಾರೆ ಅಂಥವರ ಜೊತೆಗೆ, ಯಾರು ನಿಮಗೆ ನಿನ್ನಿಂದ ಆಗುತ್ತೆ ಅಂತ ಸ್ಪೂರ್ತಿ ತುಂಬುತ್ತಾರೆ ಅಂಥವರ ಜೊತೆಗೆ ಮಾತನಾಡಿ ಸಲಹೆ ಪಡೆಯಿರಿ. ಆಗ ಅಪ್ಪಿ ತಪ್ಪಿ ತಮ್ಮಲ್ಲಿ ತಾವು ಭಯ ಪಡುವವರನ್ನು, ನೆಗಟಿವ್ ಆಗಿ ಮಾತನಾಡುವವರನ್ನು ಸ್ವಲ್ಪ ಅವಾಯ್ಡ್ ಮಾಡಿ ದೂರವಿಡಿ. ಈಗಿನ ವರ್ತಮಾನದ ಬಗ್ಗೆ ಅಷ್ಟೇ ಯೋಚನೆ ಮಾಡಿ, ಆಗಿ ಹೋದುದರ ಬಗ್ಗೆ ಜಾಸ್ತಿ ಯೋಚನೆ ಬೇಡ. ಜೀವನದ ಬಗೆಗೆ ಕೆಟ್ಟ ಯೋಚನೆ, ಭಯ, ಆತಂಕ ಬೇಡ. ಇವತ್ತು ಅಥವಾ ನಾಳೆ ಎನ್ನುವ ಬಗ್ಗೆ ಮಾತ್ರ ಯೋಚನೆ ಮಾಡಿ. ಹಾಗಂತ ಭವಿಷ್ಯತ್ ಕಾಲದ ಬಗ್ಗೆ ಹೆಚ್ಚಿನ ಯೋಚನೆ ಬೇಡ. ಆಗ ಡಿಪ್ರೆಶನ್, ಖಿನ್ನತೆ, ಆತಂಕ ಮೂಡುವುದು ಸಹಜ ವಾಗಿ ಕಡಿಮೆ ಆಗುತ್ತದೆ. ಚೆನ್ನಾಗಿ ತಿನ್ನಿ ಊಟಾ ಮಾಡಿ ಆರೋಗ್ಯದಿಂದ ಇರಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ

Leave a Reply

Your email address will not be published. Required fields are marked *