ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಖಿನ್ನತೆ ಅಥವಾ ಇಂಗ್ಲಿಷ್ ಅಲ್ಲಿ ಡಿಪ್ರೆಶನ್ ಅಂತ ಕರಿಯೋ ಈ ಖಿನ್ನತೆ ಒಂದುವೇಳೆ ನಿಮಗೆ ಬಂದಿದ್ದರೆ ಅಥವಾ ನೀವು ಎಲ್ಲಾದರೂ ಹೊರಗಡೆ ಅಥವಾ ನಿಮ್ಮ ಮನೆಯೊಳಗೆ ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ, ಅದನ್ನು ಹೇಗೆ ಕಂಡು ಹಿಡಿಯುವುದು ಅದರ ಲಕ್ಷಣಗಳು ಏನೇನು ಎಂದು ನೋಡೋಣ. ವಿಶ್ವದಾದ್ಯಂತ ಇರುವ ಹಬ್ಬಿರುವ ಒಂದು ಅತೀ ಮುಖ್ಯವಾದ ಹಾಗೂ ಸಾಮಾನ್ಯ ಮನೋರೋಗ ಎಂದರೆ ಅದು ಖಿನ್ನತೆ ಅಥವಾ ಡಿಪ್ರೆಶನ್. ಇನ್ನೂ ನಮ್ಮ ಸಮಾಜದಲ್ಲಿ ಎಲ್ಲರೂ ಅಷ್ಟು ಇದನ್ನು ಯಾವುದೇ ನಿರ್ಭಂಧ ಇಲ್ಲದೆ ಓಪನ್ ಆಗಿ ಈ ಮನೋರೋಗಕ್ಕೆ ಇರುವ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಬರೋದಿಲ್ಲ. ಅವರಿಗೆ ತುಂಬಾ ಮುಜುಗರ ಆಗುವಂತಹ ವಿಷ್ಯ ಆಗಿಬಿಟ್ಟಿದೆ. ನಾನು ಮನೋರೋಗಿ ಅಂತ ಪ್ರೂವ್ ಆಗಿಬಿಡುತ್ತೆ, ಒಂದುವೇಳೆ ನಾನು ಖಿನ್ನತೆ ಇಂದ ಬಳಲುತ್ತಾ ಇರುವುದು ಬೇರೆಯವರಿಗೆ ಗೊತ್ತಾದರೆ ಅವರು ನನ್ನ ಬಗ್ಗೆ ಏನು ಅಂದುಕೊಳ್ಳಬಹುದು. ನನ್ನನು ದುರ್ಬಲ ಅಂತ ತಿಳಿದುಬಿಡು ತ್ತಾರೆ. ಹೀಗೆಲ್ಲಾ ಯೋಚನೆ ಮಾಡಿ ಮುಜುಗರದಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಹಾಗೆ ಮನೆಯಲ್ಲಿ ಉಳಿದು ಬಿಡುತ್ತಾರೆ.

ತುಂಬಾ ಜನರು ಈ ಸಮಸ್ಯೆಯಿಂದ ಬಳಲುತ್ತಿ ರೂತ್ತಾರೆ. ಕೆಲಸದ ಮೇಲೆ ಆಸಕ್ತಿ ವಹಿಸೋಕೆ ಆಗ್ತಾ ಇರಲ್ಲ, ಏಕಾಗ್ರತೆ ಮೂಡದೇ ಅವರು ಜೀವನದಲ್ಲಿ ಒದ್ದಾಡುತ್ತಾ ಇರ್ತಾರೆ. ಇದಕ್ಕೆ ಒಳ್ಳೆಯ ನಿಮ್ಮ ಎಲ್ಲಾ ಖಿನ್ನತೆ ಯಾನ್ನಾ ಹೋಗಲಾಡಿಸುವ ಚಿಕಿತ್ಸೆ ಇದೆ. ಒಂದುವೇಳೆ ಖಿನ್ನತೆ ಗೆ ಒಳಗಾಗಿದ್ದರೆ ಯಾವ ಯಾವ ಗುಣ ಲಕ್ಷಣಗಳು ಕಾಣಿಸಬಹುದು ಎಂದು ತಿಳಿಯೋಣ. ಕೆಲವೊಬ್ಬರು ತುಂಬಾ ಸಾಮಾನ್ಯವಾಗಿ ಮತ್ತು ಸರಳವಾಗಿ ಇದನ್ನು ತೋಗೋತರೆ ಅಂದ್ರೆ ಯಾವುದೋ ಚಿಕ್ಕ ವಿಷಯಕ್ಕೆ ಬೇಜಾರಾದ್ರೆ ನಾನು ತುಂಬಾ ಡೀಪ್ ರೆಸ್ ಆಗಿದಿನಿ ಅಂತ ಹೇಳ್ತಾ ಇರ್ತಾರೆ, ಆದ್ರೆ ಖಂಡಿತ ಅದು ಖಿನ್ನತೆ ಅಲ್ಲ. ಯಾರಿಗೆ 2 ವಾರಗಳು ಸತತವಾಗಿ ಮೂಡ್ ತುಂಬಾ ಆಫ್ ಇರುತ್ತೆ ಅಥವ ಲೋ ಇರುತ್ತೆ, ತುಂಬಾ ಬೇಜಾರು ಅನ್ನೋ ಭಾವನೆ ಬರ್ತಾ ಇರುತ್ತೆ, ಇದರ ಜೊತೆಗೆ ಬರೀ ಬೇಜಾರು ಅಲ್ಲದೇ ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವುದು, ಮನಸ್ಸಿಗೆ ಖುಷಿ ಕೊಡೋ ಕೆಲಸಗಳನ್ನು ಮಾಡಿದರೂ ಅವರು ಖುಷಿಯಾಗಿ ಇರಲು ಆಗದೆ ಇರುವುದು, ಯಾರ ಜೊತೆಗೋ ಮಾತನಾಡಲು ಇಷ್ಟ ಆಗೋದಿಲ್ಲ, ಒಬ್ಬರೇ ಇರಬೇಕು, ಯಾರ ಜೊತೆಯೂ ಯಾವುದೇ ಸಂಪರ್ಕ ಬೇಡ, ಜನರಿಂದ ದೂರ ಇದ್ದು ಬಿಡೋಣ, ಯಾವ ಫ್ರೆಂಡ್ಸ್, ಫ್ಯಾಮಿಲಿ ಯಾರೂ ಬೇಡ ಅಂತ ಅನ್ನಿಸುತ್ತಾ ಇದ್ದರೆ, ಮತ್ತು ಅವರಿಗೆ ಯಾವ ವಿಷಯದಲ್ಲೂ ಆಸಕ್ತಿ ಇರದೇ ಇರುವುದು, ಅಂದ್ರೆ ಹೊರಗಡೆ ಹೋಗೋದು, ಆಟ ಆಡುವುದು, ಬೇರೆಯವರ ಜೊತೆ ಮಾತನಾಡುವುದು ಇದ್ಯವುದರಲ್ಲಿ ಆಸಕ್ತಿ ಇರೋದಿಲ್ಲ.

ತುಂಬಾ ಸುಸ್ತು ಆಗೋದು, ದೇಹ ಶಕ್ತಿಹೀನ ಆಗ್ತಿದೆ, ದುರ್ಬಲ ಮನಸ್ಸು ದೇಹ, ದೇಹದಿಂದ ಶಕ್ತಿ ಸುಮ್ ಸುಮ್ನೆ ಹೋಗ್ತಾ ಇದೆ, ಸ್ವಲ್ಪ ಕೆಲಸ ಮಾಡಿದ್ರೂ ಬೇಗ ಸುಸ್ತು ಆಗೋದು ಇವೆಲ್ಲಾ ಖಿನ್ನತೆ ಗೆ ಒಳಗಾಗಿದ್ದರೆ ಕಾಣಿಸಿಕೊಳ್ಳುವ ಲಕ್ಷಣಗಳು. ಇನ್ನೂ ಕೆಲವು ಲಕ್ಷಣಗಳು ಎಂದರೆ ನಿದ್ದೆ ಕೆಡುವುದು, ಅಂದ್ರೆ ಏನು ಮಾಡಿದರೂ ನಿದ್ದೆ ಬರದೇ ಇರುವುದು, ಇಲ್ಲ ಅಂದ್ರೆ ಜಾಸ್ತಿ ನಿದ್ದೆ ಮಾಡೋದು, ಕಷ್ಟಗಳು, ಬೇಜಾರನ್ನು ಮರೆಯಲು ಜಾಸ್ತಿ ನಿದ್ದೆ ಮಾಡಬೇಕು ಎನ್ನುವ ಭಾವನೆ ಬರೋದು, ಅದೇ ರೀತಿ ಕೆಲವೊಮ್ಮೆ ಹಸಿವೇ ಆಗಲ್ಲ, ಇನ್ನೂ ಕೆಲವರಿಗೆ ಜಾಸ್ತಿ ಹಸಿವು, ತಿನ್ನುವುದು ಆಗುತ್ತಾ ಇರುತ್ತದೆ. ತೂಕ ಜಾಸ್ತಿ ಅಥವಾ ತೂಕ ಕಡಿಮೆ ಆಗೋದು, ಶೇಕಡಾ ಹತ್ತು ಹತ್ತಕ್ಕಿಂತ ಜಾಸ್ತಿ ದೇಹದ ತೂಕ ಜಾಸ್ತಿ ಆದ್ರೆ, ಇನ್ನೂ ಕೆಲವರಲ್ಲಿ ಜೀವನ ಸಾಕು ನಂಗೆ ಬದುಕೋಕೆ ಇಷ್ಟ ಇಲ್ಲ, ನಾನು ಏನಾದರೂ ಮಾಡಿಕೊಂಡು ಸತ್ತು ಹೋಗ್ತೀನಿ ಎನ್ನುವ ನಿರ್ಧಾರ, ಭಾವನೆಗಳು ಪದೇ ಪದೇ ಮೇಲಿಂದ ಮೇಲೆ ಮನಸ್ಸಿನಲ್ಲಿ ಮೂಡಿದರೆ ಅದನ್ನು ಖಿನ್ನತೆ ಎಂದು ಗುರುತಿಸಬಹುದು. ನಿಮ್ಮಲ್ಲೂ ಈ ತರಹದ ಸೂಚನೆಗಳು, ಸಂಶಯಗಳು ಇದ್ದರೆ ತಪ್ಪದೇ ಬೇಗ ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ. ಶುಭದಿನ.

Leave a Reply

Your email address will not be published. Required fields are marked *