ಅನುಶ್ರೀ ಕನ್ನಡ ಕಿರುತೆರೆಯ ಮನೋರಂಜನ ಲೋಕದ ಜನಪ್ರಿಯ ನಿರೂಪಕಿ. ಟಿವಿ ಷೋಗಳು ಮಾತ್ರವಲ್ಲ ಸಿನಿಮಾ ಕಾರ್ಯಕ್ರಮಗಳಿಗೂ ಅನುಶ್ರೀ ಅವರ ನಿರೂಪಣೆ ಬಹಳ ಬೇಡಿಕೆ. ಅನುಶ್ರೀ ಇದ್ದರೆ ಕಾರ್ಯಕ್ರಮ ಕಳೆಗಟ್ಟುತ್ತದೆ ಎಂಬ ನಂಬಿಕೆ ಸಿನಿಮಾ ಮಂದಿಗೆ. ನಟಿ ನೃತ್ಯ ಗಾರಥಿ ಆಗಿರುವ ಅನುಶ್ರೀ ಅವರಿಗೆ ಕಾರ್ಯಕ್ರಮ ನಿರೂಪಣೆ ಚೆನ್ನಾಗಿ ಕೈ ಹಿಡಿದಿದೆ. ಅದ್ಭುತ ಮಾತುಗಾತಿಯಾಗಿರುವ ಅನುಶ್ರೀ ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ. ಅಪ್ಪು ಮಾತ್ರವಲ್ಲದೆ ಶಿವರಾಜ್ ಕುಮಾರ್ ಅವರ ಬಗ್ಗೆಯೂ ಬಹಳ ಗೌರವ ಅಭಿಮಾನವನ್ನು ಅನುಶ್ರೀ ಅವರು ಹೊಂದಿದ್ದಾರೆ. ದೊಡ್ಮನೆ ಸದಸ್ಯರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅನುಶ್ರೀ ಅವರು ದೊಡ್ಡ ಮನೆಯವರು ಸಹ ತಮ್ಮ ಸ್ವಂತ ಮಗಳಂತೆ ಕಾಣುತ್ತಾರೆ.

ಇದೀಗ ದೊಡ್ಡ ಮನೆಯ ಹಿರಿಯ ಸದಸ್ಯ ಶಿವರಾಜ್ ಕುಮಾರ್ ಅವರು ಭಾಗವಹಿಸಿರುವ ಡಿಕೆಡಿ ಶೋ ಅನ್ನು ಅನುಶ್ರೀ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಈ ಶೋನಲ್ಲಿ ನಡೆದಿರುವ ಒಂದು ಆಪ್ತ ಘಟನೆಯ ವಿಡಿಯೋವನ್ನು ಅನುಶ್ರೀ ಅವರು ತಮ್ಮ instagram ನಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಶ್ ನಟ ಶಿವಣ್ಣ ಅದ್ಭುತವಾದ ಜಾಕೆಟ್ ಒಂದನ್ನು ಧರಿಸಿ ಡಿಕೆಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಣ್ಣ ಅವರ ಜಾಕೆಟ್ ನೋಡಿದ ಅನುಶ್ರೀ ಶಿವಣ್ಣ ನೀವು ಧರಿಸಿರುವ ಜಾಕೆಟ್ ಬಹಳ ಚೆನ್ನಾಗಿದೆ ಎಂದಿದ್ದಾರೆ. ಅದಕ್ಕೆ ಶಿವಣ್ಣ ಸರಿ ಕಣಮ್ಮ ಶಿವಮೊಗ್ಗದ ಮೇಲೆ ಈ ಜಾಕೆಟ್ ನಿನಗೆ ಕೊಟ್ಟು ಹೋಗುತ್ತೇನೆ. ಎಂದಿದ್ದಾರೆ ಆದರೆ ಈ ಮಾತನ್ನು ತಮಾಷೆಯಾಗಿ ಶಿವಣ್ಣ ಹೇಳಿದ್ದಾರೆ ಎಂದು ಅಂದುಕೊಂಡಿದ್ದಾರಂತೆ ಅನುಶ್ರೀ. ಆದರೆ ಶಿವಣ್ಣ ನೆನಪಿಟ್ಟುಕೊಂಡು ಜಾಕಿಟ್ ಅನ್ನು ಅನುಶ್ರೀಗೆ ನೀಡಿದ್ದಾರೆ. ಅನುಶ್ರೀಗೆ ಇಷ್ಟವಾದ ಜಾಕೆಟ್ ಮೇಲೆ ಶಿವರಾಜ್ ಕುಮಾರ್ ಪ್ರೀತಿಪೂರ್ವಕವಾಗಿ ಗೆಳತಿಗೆ ಅನುಶ್ರೀಗೆ ಎಂದು ಬರೆದು ತಮ್ಮ ಜಾಕೆಟ್ ಅನ್ನು ತಾವೇ ಕೈ ಯಾರೇ ಅನುಶ್ರೀಗೆ ತೊ ಡಿಸಿದ್ದಾರೆ.

Leave a Reply

Your email address will not be published. Required fields are marked *