ಸಾಧನೆ ಯಾರ ಸ್ವತ್ತು ಅಲ್ಲ. ಅದು ಕಂಡಕ್ಟರ್ ಮಗಳಾಗಿರಬಹುದು. ರೈತನ ಮಕ್ಕಳಾಗಿರಬಹುದು. ಪರಿಶ್ರಮ, ಹಾರ್ಡ್‌ವರ್ಕ್‌, ಸ್ಮಾರ್ಟ್‌ವರ್ಕ್‌, ಸಾಧಿಸಲೇಬೇಕು ಎಂಬ ಛಲ ಯಾರನ್ನು ಎಲ್ಲಿಗೇ ಬೇಕಾದರೂ ಸಹ ಕರೆದುಕೊಂಡು ಹೋಗಬಹುದು. ಅದಕ್ಕೆ ಸಾಕ್ಷಿಗಳ ಪೈಕಿ ಇಂದಿನ ಯುಪಿಎಸ್‌ಸಿ ಸಕ್ಸಸ್‌ ಸ್ಟೋರಿಯ ಪೂಜಾ ಹೂಡ ಒಬ್ಬರು.

ನಾನು ಐಎಎಸ್‌ ಆಫೀಸರ್ ಆಗೇ ತೀರುತ್ತೇನೆ ಎಂದು ಒಮ್ಮೆ ನಿರ್ಧರಿಸಿದಲ್ಲಿ ಅದಕ್ಕೆ ಯಾವುದು ಅಡ್ಡಿಯಾಗದು. ಶ್ರೀಮಂತ, ಬಡವ ಎಂಬ ತಾರತಮ್ಯವು ಅಡ್ಡಿಯಾಗದು. ಇಂಗ್ಲಿಷ್‌ ಬರುತ್ತೆ, ಬರೊಲ್ಲ ಎಂಬುದು ಅಡ್ಡಿಯಾಗದು. ಕೇವಲ ಕಠಿಣ ಶ್ರಮದಿಂದ ಐಎಎಸ್ ಆಫೀಸರ್ ಆಗಬಹುದು. ಐಎಎಸ್ ಆಫೀಸರ್ ಆಗಲು ಯಾವುದೇ ಪದವಿ ವಿದ್ಯಾರ್ಹತೆಯೊಂದಿಗೆ ಅರ್ಜಿ ಹಾಕಿ, ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಬೇಕು ಅಷ್ಟೆ. ಹೀಗೆ ಏನೇ ಅಡೆ, ತಡೆ ಇದ್ದರೂ ಸಹ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಪಾಸಾದ ಯುಪಿಎಸ್‌ಸಿ ಸಕ್ಸಸ್ ಸ್ಟೋರಿಗಳು ಸಿಗುತ್ತವೆ. ಅವುಗಳ ಪೈಕಿ ಬಸ್‌ ಕಂಡಕ್ಟರ್‌ ಮಗಳಾದ ಪೂಜಾ ಹೂಡ ರವರದ್ದು ಸಹ ಒಂದಿದೆ. ಅವರ ಪರಿಶ್ರಮ, ತಾಳ್ಮೆ ಇಂದ ಅವರು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿ ಐಎಎಸ್‌ ಆಫೀಸರ್ ಆಗಿದ್ದಾರೆ. ಅವರ ಸಾಧನೆಯ ಹಾದಿಯನ್ನು ಇಲ್ಲಿ ತಿಳಿಸಲಾಗಿದೆ.

ಪೂಜಾ ಹೂಡ ರವರು ಹರಿಯಾಣದ ಬಹದುರ್ಗರ್ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಅವರ ತಂದೆ ದೆಹಲಿ ಸಾರಿಗೆ ನಿಗಮದ ಒಬ್ಬ ಸಾಮಾನ್ಯ ಬಸ್‌ ಕಂಡಕ್ಟರ್. ಪೂಜಾ ತಮ್ಮ ಶಾಲಾ ಹಂತದಿಂದಲೂ ಉತ್ತಮ ವಿದ್ಯಾರ್ಥಿನಿಯಾಗಿಯೇ ಓದಿದವರು. ಪೂಜಾ ಹೂಡ ಅವರ ಕುಟುಂಬದಲ್ಲೇ ಹೆಚ್ಚು ಓದಿದ ಮತ್ತು ದೀರ್ಘಕಾಲ ಮದುವೆ ಆಗದೇ ಉಳಿದ ಮಗಳು. ಪೂಜಾ ಐಎಎಸ್‌ ಆಫೀಸರ್ ಆಗಬೇಕು ಎಂಬುದು ಅವರ ತಂದೆಯ ಕನಸು. ಪೂಜಾ ಪರೀಕ್ಷೆ ತೆಗೆದುಕೊಂಡ ಮೊದಲ ಅಟೆಂಪ್ಟ್‌ ಪರೀಕ್ಷೆಯಲ್ಲಿಯೇ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಅವರ ಗುರಿಗೆ ಈ ಫೇಲ್ ಯಾವುದೇ ತಡೆ ಮಾಡಲಿಲ್ಲ. ಅವರು ಮತ್ತೆ ಯುಪಿಎಸ್‌ಸಿ ಪರೀಕ್ಷೆ ಬರೆದು 2017ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ರ್ಯಾಂಕ್‌’ನಲ್ಲಿ 288 ನೇ ಸ್ಥಾನ ಗಳಿಸಿ ಐಎಎಸ್ ಆಫೀಸರ್ ಆಗಿ ಹೊರಹೊಮ್ಮಿದರು.

ಪೂಜಾ ಹೂಡ’ರ ತಂದೆ ಬಸ್ ಕಂಡಕ್ಟರ್ ಆದರೂ ಸಹ ಅವರ ಮಕ್ಕಳ ಶಿಕ್ಷಣಕ್ಕೆ, ಕನಸಿನ ನನಸಿಗೆ ಬೇಕಾದ ಹಣಕಾಸು ವೆಚ್ಚವನ್ನು ಯಾವತ್ತು ಕೊರತೆ ಮಾಡಿರಲಿಲ್ಲ. ಇನ್ನೊಂದು ಇಂಟೆರೆಸ್ಟಿಂಗ್ ವಿಷಯವೆಂದರೆ ಪೂಜಾ ಹೂಡ’ರ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಅತಿ ಬೇಗನೆ ಮದುವೆ ಮಾಡಿ ಕಳುಹಿಸುವ ಸಂಪ್ರದಾಯವಿದೆ. ಆದರೆ ಈ ಒಂದು ತಡೆಗೆ ಬಗ್ಗದ ಪೂಜಾ ಐಎಎಸ್ ಆಫೀಸರ್ ಆಗಿ ನಾಗರಿಕರ ಸೇವೆಗೆ ಪಣತೊಟ್ಟಿದ್ದಾರೆ.

Leave a Reply

Your email address will not be published. Required fields are marked *