ನಮಸ್ತೆ ಪ್ರಿಯ ಓದುಗರೇ, ಸನಾತನ ಹಿಂದೂ ಧರ್ಮವು ಕೇವಲ ದೇವಾನುದೇವತೆಗಳಿಗೆ ಮಾತ್ರವಲ್ಲದೆ ಹರಿಯುವ ನೀರು, ಬೀಸುವ ಗಾಳಿ ಅಷ್ಟೇ ಯಾಕೆ ಉರಿಯುವ ಬೆಂಕಿಯನ್ನೂ ಪೂಜಿಸುವ ವಿಶಿಷ್ಟ ಸಂಪ್ರದಾಯ ಹೊಂದಿದ್ದು, ಭೂಮಿಯ ಮೇಲಿರುವ ಸಕಲ ಚರಾಚರ ಜೀವಿಗಳಲ್ಲಿಯೂ ಭಗವಂತನ ಅಂಶ ಇದೆ ಎಂಬ ತತ್ವವನ್ನು ಜಗತ್ತಿಗೆ ಸಾರಿದ ಶ್ರೇಷ್ಠ ಧರ್ಮ ನಮ್ಮ ಹಿಂದೂ ಧರ್ಮ ಆಗಿದೆ. ಸಾಮಾನ್ಯವಾಗಿ ನಾಗ ದೋಷದಿಂದ ಬಳಲುವವರು ನಾಗ ದೋಷ ಪರಿಹಾರಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುತ್ತಾರೆ. ಆದ್ರೆ ಕೆಲವೊಂದು ಬಾರಿ ಈ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಲು ಸಾಧ್ಯ ಆಗೋದಿಲ್ಲ ಅಂತಹವರು ಈ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಿದರೆ ಸಾಕು ಸಕಲ ಸರ್ಪ ದೋಷಗಳು ನಿವಾರಣೆ ಆಗುತ್ತದೆ. ಬನ್ನಿ ಸ್ನೇಹಿತರೆ ಹಾಗಾದರೆ ಅದ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನೇನು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಶಿವಮೊಗ್ಗ ಈ ಜಿಲ್ಲೆಯ ಹೆಸರನ್ನ ಕೇಳಿದ ತಕ್ಷಣ ನೆನಪಾಗೋದು ವಿಶ್ವ ಪ್ರಸಿದ್ಧ ತಾಣ ಜೋಗ ಜಲಪಾತ. ಜೋಗ ಜಲಪಾತ ವನ್ನೂ ವೀಕ್ಷಿಸಲು ಹೋದವರು ವಾಡನಬೈಲಿನಲ್ಲಿರುವ ತಾಯಿ ಪದ್ಮಾವತಿ ದೇವಿಯನ್ನು ಕೂಡ ದರ್ಶನ ಮಾಡಬಹುದಾಗಿದ್ದು , ಈ ದೇಗುಲವನ್ನು ಹಸಿರು ಕಾನನನದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಪುಟ್ಟದಾದ ಗರ್ಭ ಗುಡಿಯ ಒಳಗಡೆ ಪದ್ಮಾವತಿ ತಾಯಿಯು ಅಭಯ ಹಸ್ತ ಹೊಂದಿ ಭಕ್ತರಿಗೆ ದರ್ಶನ ನೀಡ್ತಾ ಇದ್ದಾಳೆ. ಒಂದು ಕಡೆ ಕಾಣಿಸೂ ಹಚ್ಚ ಹಸುರಿನ ಪರ್ವತಗಳು ಇನ್ನೊಂದು ಕಡೆ ಶಾಂತವಾಗಿ ಹರಿಯುವ ಶರಾವತಿ ಹಿನ್ನೀರು. ಈ ಕ್ಷೇತ್ರದ ಸೌಂದರ್ಯವನ್ನು ಇನ್ನಷ್ಟೂ ಹೆಚ್ಚಿಸಿದ್ದು, ಸಂತಾನ ಹೀನತೆ ಇರುವವರು ಇಲ್ಲಿಗೇ ಹೋಗಿ ಹರಕೆ ಹೊತ್ತುಕೊಂಡ ರೆ ಅವರಿಗೆ ಉತ್ತಮವಾದ ಸಂತಾನ ಈ ದೇವಿ ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.

ಜಾತಕದಲ್ಲಿ ಸರ್ಪ ದೋಷ ಇದ್ದರೆ ಅವರಿಗೆ ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಉದ್ಯೋಗ ಸಮಸ್ಯೆ, ಸಂತಾನ ಸಮಸ್ಯೆ ಹೀಗೆ ಇನ್ನೂ ಅನೇಕ ಸಮಸ್ಯೆಗಳು ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಅಂಥವರು ಇಲ್ಲಿರುವ ಏಳು ಅಡಿ ಉದ್ದದ ಏಳು ಇಂಚು ಎತ್ತರದ ಏಳು ಎಡೆ ಹಾಗೂ ಎಪ್ಪತ್ತೇಳು ಕ್ವಿಂಟಾಲ್ ತೂಕ ಹೊಂದಿರುವ ಶ್ರೀ ಮುಕ್ತಿ ನಾಗದೇವತೆ ಯನ್ನೂ 108 ಬಾರಿ ಪ್ರದಕ್ಷಿಣೆ ಹಾಕಿದ್ರೆ ಎಲ್ಲಾ ಬಗೆಯ ಸರ್ಪ ದೋಷಗಳು ನಿವಾರಣೆ ಆಗುತ್ತವೆ ಎಂದೂ ಹೇಳುವುದುಂಟು. ಅಲ್ಲದೆ ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಕೈಯಾರೆ ಮುಕ್ತಿನಾಗದೇವನ ಹಾಲಿನಿಂದ ಅಭಿಷೇಕ ಕೂಡ ಮಾಡಬಹುದಾಗಿದೆ. ಇವಿಷ್ಟೂ ಮಾತ್ರವಲ್ಲದೆ ಇಲ್ಲಿಗೆ ಬಂದವರು ತಮ್ಮ ಕೋರಿಕೆ ಇಡೇರುತ್ತದೊ ಇಲ್ಲವೋ ಎಂದು ಪುಷ್ಪದ ಪ್ರಸಾದದ ಮೂಲಕ ಕೆಳಿಸಬಹುದಾಗಿದೆ. ಹೂವಿನ ಪ್ರಸಾದವನ್ನು ಕೇಳುವವರಿಗೆ ಪ್ರತಿದಿನ 9.15-11.30 ರ ವರೆಗೆ ಮಾತ್ರ ಅವಕಾಶ ಇರುತ್ತದೆ. ಇನ್ನೂ ಈ ದೇವಸ್ಥಾನದಲ್ಲಿ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಆಗ್ತಾ ಇದ್ದು, ನವರಾತ್ರಿಯ ಒಂಭತ್ತು ದಿನವೂ ಪದ್ಮಾವತಿ ಅಮ್ಮನವರ ನ್ನ ಒಂದೊಂದು ದಿನ ಒಂದೊಂದು ರೂಪದಲ್ಲಿ ಅಲಂಕರಿಸಲಾಗುತ್ತದೆ. ಈ ಪದ್ಮಾವತಿ ದೇವಿಯನ್ನು ನಂಬಿ ಬಂದರೆ ಸಕಲ ಸಂಕಷ್ಟಗಳು ದೂರವಾದಂತೆ. ವಡನಬೈಲಿನಲ್ಲಿ ವಿರಾಜ ಮಾನಳಾಗಿರುವ ತಾಯಿ ಪದ್ಮಾವತಿ ದೇವಿಗೆ ನಿತ್ಯ ತ್ರಿಕಾಲ ಪೂಜೆಯನ್ನು ಮಾಡಲಾಗುತ್ತದೆ. ಬೆಳಿಗ್ಗೆ 7.30 ರಿಂದ ಸಂಜೆ 7.30 ರ ವರೆಗೆ ದರ್ಶನ ಮಾಡಬಹುದು.

ಇಲ್ಲಿಗೆ ಬರುವ ಪ್ರತಿ ಭಕ್ತಾದಿಗಳಿಗೆ ಉಚಿತ ಉಪಹಾರ ಹಾಗೂ ಅನ್ನ ದಾಸೋಹ ಇದ್ದು ಬೆಳಿಗ್ಗೆ 9.15 ರಿಂದ 10.30ರ ವರೆಗೆ ಉಪಹಾರ ಹಾಗೂ ಮಧ್ಯಾನ 12.30 ರಿಂದ 3.00 ಗಂಟೆಯ ವರೆಗೆ ಮಧ್ಯಾನದ ಭೋಜನ ಹಾಗೂ ಸಾಯಂಕಾಲ 5.30-7.30 ರ ವರೆಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಹೀಗಾಗಿ ಈ ದೇವಿಯ ಸನ್ನಿಧಾನಕ್ಕೆ ಬಂದರೆ ಹಸಿವು ನೀಗಿಸಿ ಆ ಜಗನ್ಮಾತೆ ಭಕ್ತರ ಅನುಗ್ರಹಿಸುತ್ತಾಳೆ ಎಂಬುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಮನದಾಳದ ಮಾತಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ, ಮುಡಿ ಸೇವೆ, ಕುಂಕುಮ ಆರ್ಚನೆ, ಹಣ್ಣು ಕಾಯಿ ಸೇವೆ ಮಾಡಿಸಬಹುದು. ಪದ್ಮಾವತಿ ದೇವಿಯ ಈ ಪುಣ್ಯ ಕ್ಷೇತ್ರವೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಡನಬೈಲು ಎಂಬ ಗ್ರಾಮದಲ್ಲಿದ್ದು. ಈ ದೇಗುಲಕ್ಕೆ ಹೋಗಬೇಕಾದರೆ ಜೋಗದಿಂದ ಅನುಮತಿ ಪತ್ರವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಬೆಂಗಳೂರಿನಿಂದ 413 ಕಿಮೀ, ಹುಬ್ಬಳ್ಳಿ ಇಂದ 173 ಕಿಮೀ, ಶಿವಮೊಗ್ಗದಿಂದ 111 ಕಿಮೀ, ಸಾಗರ ಡಿಂದ 41 ಕಿಮೀ, ಜೋಗದಿಂದ 8 ಕಿಮೀ ದೂರದಲ್ಲಿದೆ. ರಾಜ್ಯದ ಹಲವಾರು ಭಾಗಗಳಿಂದ ಶಿವಮೊಗ್ಗ ಸಾಗರಕ್ಕೆ ಕರ್ನಾಟಕ ಸಾರಿಗೆ ವ್ಯವಸ್ಥೆ ಹೊಂದಿದ್ದು, ಜೋಗವನ್ನು ತಲುಪಿ ಅಲ್ಲಿಂದ ಬಾಡಿಗೆ ವಾಹನದಲ್ಲಿ ಸುಲಭವಾಗಿ ಈ ಸ್ಥಳಕ್ಕೆ ತಲುಬಹುದಾಗಿದೆ. ಸಾಧ್ಯವಾದರೆ ಜೋಗ ಜಲಪಾತವನ್ನು ವೀಕ್ಷಿಸಲು ಹೋದವರು ತಪ್ಪದೇ ಈ ದೇವಿಯ ದೇಗುಲಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗಿ. ಶುಭದಿನ.

Leave a Reply

Your email address will not be published. Required fields are marked *