ವಿಶ್ವದಲ್ಲಿಯೇ ಮಧುಮೇಹಿಗಳು ಅಧಿಕ ಹೊಂದಿರುವ ದೇಶ ಭಾರತವಾಗಿದೆ. ಈ ಜೀವನಶೈಲಿ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಕೆಲವರಿಗೆ ವಂಶಪಾರಂಪರ್ಯವಾಗಿ ಬಂದರೆ ಇನ್ನು ಕೆಲವರಲ್ಲಿ ಬದಲಾದ ಜೀವನಶೈಲಿಯಿಂದಾಗಿ ಮಧುಮೇಹದ ಸಮಸ್ಯೆ ಉಂಟಾಗುತ್ತಿದೆ.ಮಧುಮೇಹ ಬಂದ್ರೆ ಕಾಯಿಲೆಯನ್ನು ನಿಯಂತ್ರಿಸಬಹುದೇ ಹೊರತು ಇದರಿಂದ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿಲ್ಲ. ಮಧುಮೇಹಿಗಳು ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಟ್ಟರೆ ಇತರರಂತೆ ಸಾಮಾನ್ಯ ಬದುಕು ಸಾಗಿಸಬಹುದು.ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಗಿಡಮೂಲಿಕೆಗಳು ಪರಿಣಾಮಕಾರಿಯೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ನೈಸರ್ಗಿಕವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹಲವಾರು ವಿಧಾನಗಳಿವೆ. ನಾವಿಲ್ಲಿ ಮಾವಿನ ಎಲೆ ಹಾಗೂ ಕಹಿಬೇವು ಬಳಸಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ

ಮಾವಿನ ಕಾಯಿ, ಮಾವಿನ ಹಣ್ಣಿನ ರುಚಿ ನಮಗೆಲ್ಲಾ ಗೊತ್ತು ಇನ್ನು ಎಲೆಯನ್ನು ತೋರಣಕ್ಕೆ ಬಳಸುತ್ತೇವೆ, ಆದರೆ ಎಲೆಯಲ್ಲಿ ಅದ್ಭುತ ಔಷಧೀಯ ಗುಣಗಳಿದ್ದು ಈ ಎಲೆಯನ್ನು ಔಷಧವಾಗಿ ಹೇಗೆ ಬಳಸಬೇಕೆಂದು ಕೆಲವರಿಗಷ್ಟೇ ಗೊತ್ತಿರುತ್ತದೆ.ಮಾವಿನ ಎಲೆಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದ್ದು ಇದನ್ನು ಮಧುಮೇಹ ನಿಯಂತ್ರಣಕ್ಕೆ ಎರಡು ರೀತಿಯಲ್ಲಿ ಬಳಸಬಹುದು. ಮಾವಿನ ಎಲೆಯನ್ನು ಅರಿದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚದಷ್ಟು ಪ್ರತಿದಿನ ಸೇವಿಸಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ.6-10 ಮಾವಿನ ಎಲೆಯನ್ನು ಒಂದು ಲೋಟ ನಿರಿನಲ್ಲಿ ಹಾಕಿಡಿ, ಆ ನೀರನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.ಮಧುಮೇಹಿಗಳಿಗೆ ಕಹಿಬೇವು ತುಂಬಾನೇ ಒಳ್ಳೆಯದು. ಕಹಿಬೇವನ್ನು ಈ ರೀತಿ ಮಬಳಸಿದರೆ ಮಧುಮೇಹ ನಿಯಂತ್ರಣದಲ್ಲಿಡಬಹುದು.ಕಹಿಬೇವಿನ ಎಲೆಯನ್ನು ಹಿಸುಕಿ ಪುಡಿ-ಪುಡಿ ಮಾಡಿ.ಒಂದು ಪ್ಯಾನ್‌ನಲ್ಲಿ 2 ಲೋಟ ನೀರು ಹಾಕಿ ಅದರಲ್ಲಿ ಈ ಎಲೆ ಹಾಕಿ ಕುದಿಸಿ.ಕುದಿಸಿದ ನೀರನ್ನು ಸೋಸಿ ಈ ನೀರನ್ನು ಕುಡಿಯಬಹುದು.ಇನ್ನು ಕಹಿ ಬೇವಿನ ಎಲೆ ಹಾಗೇ ತಿಂದರು ಕೂಡ ಆರೋಗ್ಯಕ್ಕೆ ಒಳ್ಳೆಯದು.ನೀವು ಈ ವಿಧಾನಗಳನ್ನು ತಯಾರಿಸುವ ಮುನ್ನ ನಿಮ್ಮ ವೈದ್ಯರ ಅಥವಾ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ.

Leave a Reply

Your email address will not be published. Required fields are marked *