ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ನೋಡಲೇಬಾರದು ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ.ಗರುಡ ಪುರಾಣದ 19 ಪದ್ಯಗಳಲ್ಲಿ ಪಾಪ ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು. ಒಂದು ವೇಳೆ ನೋಡಿದರೆ ಅವರಿಗೆ ನರಕ ಪ್ರಾಪ್ತಿಯಾಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮದಲ್ಲಿ ನಮಗೆ ಕೆಟ್ಟದ್ದು ಆಗಬಹುದು ಅಥವಾ ಒಳ್ಳೆಯದು ಆಗಬಹುದು. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದನ್ನೇ ಅನುಭವಿಸುತ್ತೇವೆ.

ಇನ್ನು ಕೆಟ್ಟ ಕೆಲಸ ಮಾಡಿದ್ರೆ ಖಂಡಿತ ಕೆಟ್ಟದ್ದಾಗುತ್ತದೆ ಹಾಗೂ ನರಕದಲ್ಲೂ ನಮಗೆ ಆತ್ಮತೃಪ್ತಿ ಅನ್ನೋದು ಇರೋದಿಲ್ಲ. ವಿಷ್ಣು ಗರುಡ ಪುರಾಣವನ್ನು ಗರುಡನಿಗೆ ಹೇಳುತ್ತಿರುಬೇಕಾದರೆ ಕೆಲವೊಂದು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಅದರಲ್ಲೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ.

ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿತಪ್ಪಿಯೂ ನೋಡಬಾರದಂತೆ. ಒಂದು ಸಾರಿ ತಪ್ಪಿ ನೋಡಿದ್ರು ಕೂಡ ಆತನಿಗೆ ನರಕ ಪ್ರಾಪ್ತಿಯಾಗುವುದುನ್ನು ಯಾರಿಂದಲೂ ತಪ್ಪಿಸುವುದಕ್ಕೆ ಆಗುವುದಿಲ್ಲವಂತೆ.
ಮೊದಲನೆಯದು ಮಗುವಿಗೆ ಹಾಲುಣಿಸುವಾಗ. ಗರುಡ ಪುರಾಣದ ಪ್ರಕಾರ ಮಹಿಳೆಯರು ಮಗುವಿಗೆ ಹಾಲುಣಿಸುವಾಗ ಪುರುಷರು ನೋಡಬಾರದಂತೆ. ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದ ಇರುತ್ತೆ ಹಾಗು ಹಾಲು ಕುಡಿಯುವುದರಲ್ಲಿ ತಲ್ಲೀನವಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಆತನಿಗೆ ಖಂಡಿತ ಪಾಪ ಪ್ರಾಪ್ತಿಯಾಗುತ್ತದೆ.ಇಂತಹ ನಾಚಿಕೆ ಇಲ್ಲದ ಮನುಷ್ಯನ ರಕ್ತದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನಂತೆ. ಎರಡನೆಯದು ಮಹಿಳೆ ಯಾವ ಮನೆಗೆ ಮದುವೆಯಾಗಿ ಹೋಗುತ್ತಾರೋ ಆ ಮನೆಯಲ್ಲಿ ಅವರನ್ನು ಲಕ್ಷ್ಮಿಯಂತೆ ನೋಡಬೇಕು ಏಕೆಂದರೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ ಕೆಲವೊಮ್ಮೆ ಅತಿ ಬಡ ಕುಟುಂಬ ಮದುವೆಯಾಗಿ ಬಂದಂತಹ ಮಹಿಳೆಯಿಂದ ಬಹಳಷ್ಟು ಅಭಿವೃದ್ದಿಯನ್ನು ಕಂಡಿದ್ದಾರೆ ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ನಾವು ಅವರನ್ನು ನಿಂಧಿಸಬಾರದು.

ಹೀಗೆ ಏನಾದರೂ ಆದರೆ ನೀವು ಮುಂದೆ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತೀರಾ ಹಾಗಾಗಿ ಆದಷ್ಟು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇಂತಹ ಕೆಟ್ಟ ಮನಸ್ಥಿತಿ ಇರುವ ಪುರುಷ ಸತ್ತ ನಂತರ ನೇರವಾಗಿ ನರಕಕ್ಕೆ ಹೋಗುತ್ತಾನಂತೆ. ಮಹಿಳೆಯರ ಮೇಲೆ ಪುರುಷರು ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ. ಬಹಳಷ್ಟು ಪುರುಷರು ಯಶಸ್ಸಾಗಲು ಅವರ ಹಿಂದೆ ಒಬ್ಬ ಮಹಿಳೆಯ ಕೈ ಇರುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತು ಹಾಗಾಗಿ ನಾವು ಮಹಿಳೆಯರನ್ನು ಗೌರವಿಸುವುದು ನಮ್ಮ ಜೀವದ ಮುಖ್ಯ ಪಾತ್ರವಾಗಿದೆ ಗರುಡ ಪುರಾಣದ ಪ್ರಕಾರ, ಓರ್ವ ಪುರುಷನು ಈ ಮೇಲಿನ 2 ತಪ್ಪುಗಳನ್ನು ಮಾಡಿದರೆ ಖಂಡಿತ ಅವರು ನರಕಕ್ಕೆ ಹೋಗುತ್ತಾರೆ.

Leave a Reply

Your email address will not be published. Required fields are marked *