ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ದೇಶದ ಅತ್ಯುತ್ತಮ ಉದ್ಯೋಗವನ್ನು ಪಡೆಯುವುದು ಅನೇಕರ ಕನಸಾಗಿದೆ. ಆದರೆ ಕೆಲವರು ಮಾತ್ರ ಅದನ್ನು ಸಾಧಿಸಲು ಸಮರ್ಥರಾಗಿದ್ದಾರೆ. ಅಂತಹವರ ಬಗ್ಗೆ ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ತಿಳಿಯೋಣ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಯೊಬ್ಬ ವ್ಯಕ್ತಿಯ ಕಥೆಯು ವಿಶೇಷವಾಗಿದೆ. 22ನೇ ವಯಸ್ಸಿನಲ್ಲಿ ಯುಪಿಎಸ್ ಸಿ ಉತ್ತೀರ್ಣರಾಗಿ ಐಎಎಸ್ ಆದ ಸ್ವಾತಿ ಮೀನಾ ಅವರ ಕಥೆ ಇಲ್ಲಿದೆ ನೋಡಿ.

ಹೌದು ನಾವು ಚಿಕ್ಕವರಿದ್ದಾಗಿದ್ದರೆ ಮುಂದೆ ಏನು ಆಗಬೇಕು ಎಂಬುದು ಆಸೆಯನ್ನು ಇಟ್ಟುಕೊಂಡು ಬರುತ್ತೇನೆ ಕೆಲವೊಬ್ಬರ ಆಸೆಯನ್ನು ಈಡೇರಿಸಿದರೆ ಕೆಲವೊಬ್ಬರು ಹಿಂದೆ ಸರಿಯುತ್ತಾರೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಶ್ರಮ ಹಾಗೂ ಏಕಾಗ್ರತೆ ಇವೆಲ್ಲವೂ ಇದ್ದರೆ ಕೂಡ ನಮ್ಮನ್ನು ಯಾರು ತಡೆಯಲು ಸಾಧ್ಯವಾಗುವುದಿಲ್ಲ. ಸ್ವಾತಿ 8ನೇ ತರಗತಿಯಲ್ಲಿದ್ದಾಗ ಆಕೆಯ ತಾಯಿಯ ಸೋದರ ಸಂಬಂಧಿ ಅಧಿಕಾರಿಯಾದರು. ಸ್ವಾತಿಯ ತಂದೆ ಆ ಅಧಿಕಾರಿಯನ್ನು ಭೇಟಿಯಾದಾಗ ತುಂಬಾ ಸಂತೋಷವಾಯಿತು.

ತಂದೆಯ ಮುಖದಲ್ಲಿನ ಸಂತೋಷವನ್ನು ನೋಡಿದ ಸ್ವಾತಿ, ಅವರ ಬಳಿ ಯುಪಿಎಸ್ ಸಿ ಬಗ್ಗೆ ವಿಚಾರಿಸಿದಳು. ಆಗಲೇ ಆಕೆ ಐಎಎಸ್ ಅಧಿಕಾರಿಯಾಗಬೇಕೆಂದು ನಿರ್ಧರಿಸಿದಳು. ಹೌದು ತಂದೆಯ ಈ ಖುಷಿ ಅವಳು ಐಎಎಸ್ ಆಫೀಸರ್ ಆಗಬೇಕು ಎಂಬ ಆಸೆ ಚಿಗುರೊಡಿತು . ಹಾಗಾಗಿ ಅವಳು ಹಗಲು ರಾತ್ರಿಯಲ್ಲದೆ ತುಂಬಾ ಕಷ್ಟಪಟ್ಟು ಓದಿ ಮುಂದೆ ಬರುತ್ತಾರೆ 10ನೇ ಕ್ಲಾಸು ಹಾಗೂ ಪಿಯುಸಿಯಲ್ಲಿ ಕೂಡ ಅವರು ತುಂಬಾನೇ ಓದುವುದರಲ್ಲಿ ಮುಂದೆ ಇರುತ್ತಾರೆ. ಕೇವಲ 22ನೇ ವಯಸ್ಸಿನಲ್ಲಿ ಯುಪಿಎಸ್ ಸಿ ತೇರ್ಗಡೆಯಾಗಿ ಐಎಎಸ್ ಆದ ಸ್ವಾತಿ ಮೀನಾ ತಮ್ಮ ಬ್ಯಾಚ್ ನ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಯಾಗಿದ್ದರು.

ಸ್ವಾತಿ ರಾಜಸ್ಥಾನದಲ್ಲಿ ಜನಿಸಿ, ಅಶ್ಮೀರ್ ನಲ್ಲಿ ಶಿಕ್ಷಣ ಪಡೆದರು. ತಾಯಿ ಯಾವಾಗಲೂ ಮಗಳು ವೈದ್ಯೆ ಆಗಬೇಕೆಂದು ಬಯಸುತ್ತಿದ್ದರು.ಸ್ವಾತಿ ಅಧಿಕಾರಿಯಾಗಲು ನಿರ್ಧರಿಸಿದಾಗ, ಆಕೆಯ ತಂದೆ ಬೆಂಬಲಿಸಿದರು. ಸ್ವಾತಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದರು.ಈ ತಯಾರಿಯ ಅವಧಿಯಲ್ಲಿ ಸ್ವಾತಿಯ ತಾಯಿ ಪೆಟ್ರೋಲ್ ಪಂಪ್‌ ನಡೆಸುತ್ತಿದ್ದರು. ತಾಯಿಯ ಬ್ಯುಸಿ ಇದ್ದ ಕಾರಣ, ಸ್ವಾತಿಯ ಉತ್ತಮ ತಯಾರಿಗಾಗಿ ತಂದೆ ಅನೇಕ ಡೆಮೊ ಸಂದರ್ಶನಗಳನ್ನು ತೆಗೆದುಕೊಂಡರು.

ಸ್ವಾತಿಯನ್ನು ಮಧ್ಯಪ್ರದೇಶದ ಮಂಡ್ಲಾದಲ್ಲಿ ನೇಮಿಸಿದಾಗ ಅಲ್ಲಿ ಗಣಿ ಮಾಫಿಯಾದ ಪ್ರಾಬಲ್ಯವಿತ್ತು. ಜಿಲ್ಲಾಧಿಕಾರಿಯಾಗಿ ಅಲ್ಲಿಗೆ ಬಂದ ಆಕೆಗೆ ವಿವಿಧ ಇಲಾಖೆಗಳಿಂದ ಗಣಿ ಮಾಫಿಯಾದ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ಎಲ್ಲ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ಮೀನಾ ಅಲ್ಲಿಗೆ ಬಂದ ಕೂಡಲೇ ಈ ಮೈನಿಂಗ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದರು.

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸ್ವಾತಿ ಅವರ ಅಧಿಕಾರಾವಧಿಯೂ ತುಂಬಾ ಸವಾಲಿನದ್ದಾಗಿತ್ತು. ಸಿಮಿಯ ಹತ್ಯೆಗೀಡಾದ ಭಯೋತ್ಪಾದಕರ ಮೃತದೇಹಗಳು ಪ್ರದೇಶವನ್ನು ತಲುಪಿದಾಗ, ದುಷ್ಕರ್ಮಿಗಳು ಗದ್ದಲ ಸೃಷ್ಟಿಸಲು ಪ್ರಯತ್ನಿಸಿದರು. ಆದರೆ ಸ್ವಾತಿ ಮೀನಾ ಆಡಳಿತದ ಜೊತೆಗೆ ಈ ಸವಾಲಿನ ಕೆಲಸವನ್ನು ಸುಲಭವಾಗಿ ನಿಭಾಯಿಸಿದರು

Leave a Reply

Your email address will not be published. Required fields are marked *