ಬೂದು ಕುಂಬಳಕಾಯಿ, ಆಹಾರ ಪದಾರ್ಥಗಳನ್ನು ತಯಾರಿಸಲು ಉಪಯೋಗಿಸುವಂತಹ ತರಕಾರಿ. ಅಷ್ಟೇ ಅಲ್ಲದೆ ಧಾರ್ಮಿಕವಾಗಿ ಸಾಕಷ್ಟು ವಿಶೇಷತೆಯನ್ನ ಹೊಂದಿದೆ. ಬೂದು ಕುಂಬಳಕಾಯಿ ಉಪಯೋಗಿಸಿಕೊಂಡು ದೃಷ್ಟಿ ದೋಷ, ನರ ದೋಷ, ನಕಾರಾತ್ಮಕ ಶಕ್ತಿಗಳು ಹಾಗೂ ದುಷ್ಟ ಶಕ್ತಿಗಳನ್ನು ನಿವಾರಣೆಯನ್ನು ಮಾಡಿಕೊಳ್ಳಬಹುದು. ಇದನ್ನು ಸಾಮಾನ್ಯವಾಗಿ ಮನೆಯ ಮುಂದೆ ಎರಡು ಕಡೆಯಲ್ಲಿ ಕಟ್ಟುತ್ತಾರೆ. ಇದರಿಂದ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಪ್ರಭಾವ ಮನೆಯ ಮೇಲೆ ಬೀಳುವುದಿಲ್ಲ. ಇದನ್ನ ಉಪಯೋಗಿಸಿಕೊಂಡು ನಮ್ಮ ಜೀವನದಲ್ಲಿ ಎದುರಾಗುವಂತಹ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಣೆಯನ್ನು ಮಾಡಿಕೊಳ್ಳಬಹುದು ಹಾಗೂ ಇದು ಅತ್ಯುತ್ತಮ ಆರೋಗ್ಯಕರ ಗುಣವನ್ನು ಕೂಡ ಹೊಂದಿದೆ. ಮನೆಯ ಮುಂದೆ ಸಾಮಾನ್ಯವಾಗಿ ಬೂದು ಕುಂಬಳಕಾಯಿಯನ್ನು ಕಟ್ಟುತ್ತಾರೆ. ಹಾಗಾದ್ರೆ ಬೂದುಗುಂಬಳಕಾಯಿಯನ್ನ ಯಾವ ಕಾರಣಕ್ಕಾಗಿ ಮನೆಯ ಮುಂದೆ ಕಟ್ಟುತ್ತಾರೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಮನೆಯ ಬಾಗಿಲಿಗೆ ಎರಡು ತಿಂಗಳು ಇಲ್ಲವೇ ಮೂರು ತಿಂಗಳಿಗೆ ಒಮ್ಮೆ ಈ ಬೂದುಗುಂಬಳಕಾಯನ್ನು ಕಟ್ಟುವುದರಿಂದ ದೃಷ್ಟಿ ದೋಷ ಬರುವುದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನ ನಿವಾರಣೆ ಮಾಡುತ್ತದೆ. ಬೂದುಗುಂಬಳ ಕಾಯಿ ಕಾಲಭೈರವೇಶ್ವರನ ಸ್ವರೂಪ ಎಂದು ಹೇಳಲಾಗುತ್ತೆ. ತಾಂತ್ರಿಕ ವಿಧಾನದಲ್ಲಿ ಸಾಕಷ್ಟು ಉಪಯೋಗವನ್ನ ಮಾಡಲಾಗುತ್ತೆ. ಹಾಗಾಗಿ ಇದಕ್ಕೆ ಅರಿಶಿನ ಕುಂಕುಮ ನಲ್ಲಿ ಮನೆಯ ಹೊರಭಾಗದಲ್ಲಿ ಕಟ್ಟುತ್ತಾರೆ ಹಾಗೂ ಇದನ್ನ ಮನೆಗೆ ಅಷ್ಟೇ ಅಲ್ಲದೆ ವ್ಯಾಪಾರ ವ್ಯವಹಾರ ಮಾಡುವಂತಹ ಮಳಿಗೆಗಳು ಸಹ ಇದನ್ನ ಕಟ್ಟಲಾಗುತ್ತೆ. ಈ ರೀತಿ ಕಟ್ಟುವುದರಿಂದ ಯಾರ ಕೆಟ್ಟ ದೃಷ್ಟಿಯು ಬೀಳುವುದಿಲ್ಲ. ಒಳ್ಳೆಯ ಪ್ರಗತಿಯನ್ನ ಕಾಣಬಹುದು. ಬೂದುಗುಂಬಳ ಕಾಯಿಯನ್ನು ಕಟ್ಟುವುದರಿಂದ ನರ ದೃಷ್ಟಿ ದೋಷ, ನರ ದೋಷ, ಶತ್ರು ದೃಷ್ಟಿ, ಶತ್ರು ದೋಷ ಹಾಗೂ ದುಷ್ಟ ಶಕ್ತಿಯ ಪ್ರಭಾವ ಮನೆಯ ಒಳಗೆ ಬರುವುದಿಲ್ಲ. ಈ ಬೂದುಗುಂಬಳ ಕಾಯಿಯನ್ನ ಅಮವಾಸ್ಯೆ ದಿನದಂದು ಕಟ್ಟುವುದರಿಂದ ಒಳ್ಳೆಯ ಪ್ರಭಾವವನ್ನು ಬೀರುತ್ತದೆ.

ಅಮಾವಾಸ್ಯ ದಿನದಂದು ಕಟ್ಟಿ ದೇವರಿಗೆ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಬೂದುಗುಂಬಳ ಕಾಯಿಗೂ ಸಹ ಪೂಜೆ ಯನ್ನು ಮಾಡಬೇಕು. ಈ ಬೂದುಗುಂಬಳ ಕಾಯಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಕೊಲ್ಲುವ ಶಕ್ತಿಯನ್ನು ಹೊಂದಿದೆ. ಇದರ ಜೊತೆಗೆ ಅಮಾವಾಸ್ಯೆ ದಿನದಂದು ಮನೆಯ ಮುಖ್ಯ ದ್ವಾರದ ಒಳಗೆ ಮೇಲ್ಭಾಗದಲ್ಲಿ ಕಟ್ಟ ಬೇಕು. ಮನುಷ್ಯನ ಕೆಟ್ಟ ದೃಷ್ಟಿಗೆ ಕಲ್ಲು ಕೂಡ ಕರಗುತ್ತದೆ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಹಾಗಾಗಿ ಯಾವುದೇ ರೀತಿಯ ದೃಷ್ಟಿ ದೋಷ ಇದ್ದರು ಕೂಡ. ಬೂದುಗುಂಬಳಕಾಯನ್ನು ಕಟ್ಟುವುದರಿಂದ ಅದು ನಿವಾರಣೆ ಆಗುತ್ತದೆ ಹಾಗೂ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಗಳು ಕೂಡ ಮನೆಯೊಳಗೆ ಪ್ರವೇಶವನ್ನು ಮಾಡದಂತೆ ತಡೆಯುತ್ತದೆ ಹಾಗು ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ಕಲಹ ಮನಸ್ಥಾಪಗಳನ್ನ ನಿವಾರಣೆಯನ್ನು ಮಾಡುತ್ತದೆ. ಶಾಂತಿ ವಾತಾವರಣ ಹಾಗೂ ಸಕಾರಾತ್ಮಕ ಶಕ್ತಿಯನ್ನ ಪಸರಿಸುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *