ತೊಂಡೆಕಾಯಿಯ ವೈಜ್ಞಾನಿಕ ಹೆಸರು ಕೊಕ್ಸಿನಿಯಾ ಗ್ರಾಂಡಿಸ್ ಇದನ್ನು ಸಂಸ್ಕೃತದಲ್ಲಿ ರಕ್ತಫಲ, ತುಂಡರಿಕೆ ಎಂದು ಕರೆಯುತ್ತಾರೆ ಇದನ್ನು ಗದ್ದೆ ಅಥವಾ ಕೈದೋಟದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ ಇದರಲ್ಲಿ ವಿಟಮಿನ್ ಎ, ಬಿ, ಸಿ, ಮತ್ತು ಕ್ಯಾಲ್ಷಿಯಂ ಇರುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆಯಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಿಸಲು ಸಹಕಾರಿಯಾಗಿದೆ ಕಿಡ್ನಿಸ್ಟೋನ್ ಸಮಸ್ಯೆ ಎದುರಿಸುವವರಿಗೆ ತೊಂಡೆಕಾಯಿ ರಾಮಬಾಣವಾಗಿದೆ ವಾರಕ್ಕೆ ಒಮ್ಮೆಯಾದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ತೊಂಡೆಕಾಯಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಂಗ್ರಹಿಸುತ್ತದೆ. ತೊಂಡೆಕಾಯಿಯನ್ನು ಮಧುಮೇಹ ಚಿಕಿತ್ಸೆಗೆ ಆಯುರ್ವೇದದಲ್ಲಿ ಬಳಕೆ ಮಾಡುತ್ತಾರೆ ಈ ಕ್ಲೈಂಬರ್ ಪ್ಲಾಂಟ್ ಕಾಂಡ ಮತ್ತು ಎಲೆಯನ್ನು ಕುದಿಸಿ ತಿನ್ನಬಹುದು. ಇಲ್ಲಾ ಸೂಪ್ ಮಾಡಿಕೊಂಡು ಕುಡಿಯಬಹುದು ತೊಂಡೆಕಾಯಿ ಎಲೆ ಗ್ಲೂಕೋಸ್ ಟಾಲಾರೆನ್ಸ್ ನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತವೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಅದ್ಬುತವಾಗಿ ಕೆಲಸ ಮಾಡುತ್ತವೆ.

ತೊಂಡೆಕಾಯಿ ಬೊಜ್ಜು ಕರಗಿಸುವುದಕ್ಕೆ ಸಹಾಯ ಮಾಡುತ್ತವೆ ತೊಂಡೆಕಾಯಿಯಲ್ಲಿ ಬೊಜ್ಜು ಬರುವುದಕ್ಕೆ ವಿರೋದ ಮಾಡುವ ಗುಣಗಳನ್ನು ಒಳಗೊಂಡಿದೆ ಮತ್ತು ತೊಂಡೆಕಾಯಿ ಮಾತ್ರವಲ್ಲದೆ ಇದರ ಎಲೆಗಳು ಕೂಡ ಮೊಡವೆ, ಮಧುಮೇಹ, ಪಾದಗಳು ಮತ್ತು ಅಂಗೈಯಲ್ಲಿ ಇರುವ ಉಷ್ಣತೆ, ಋತುಚಕ್ರದ ನೋವು, ಯೋನಿ ನೋವು, ಇತ್ಯಾದಿಗಳನ್ನು ನಿವಾರಣೆ ಮಾಡುತ್ತದೆ.

ತಲೆಬುರುಡೆಯ ಬೊಕ್ಕೆ ನಿವಾರಣೆ: ತೊಂಡೆಕಾಯಿ ಎಲೆಗಳಿಂದ ನೀರು ಹಾಕದೆ ರಸ ತೆಗೆದುಕೊಂಡು ಕೆಲವು ಸಮುದ್ರ ಚಿಪ್ಪುಗಳನ್ನು ( ಹಸಿರು ಬಣ್ಣದ್ದು ) ಮೂರು ದಿನಗಳ ಕಾಲ ಇದರಲ್ಲಿ ನೆನೆಸಿಡಿ. ನಾಲ್ಕನೇ ದಿನ ಇದನ್ನು ಹೊರತೆಗೆದು ಹಿದ್ದಿಲಿನಲ್ಲಿ ಸುಟ್ಟು ಇದರಿಂದ ಬಂದಂತಹ ಬೂದಿ ತೆಗೆದುಕೊಂಡು ಅದನ್ನು ಹಸಿವಿನ ಬೆಣ್ಣೆಯ ಜೊತೆಗೆ ಮಿಶ್ರಣಮಾಡಿ ಪೇಸ್ಟ್ ಮಾಡಿ ಈ ಪೇಸ್ಟ್ ನ್ನು ತಲೆಬುರುಡೆಯಲ್ಲಿ ಇರುವ ಬೋಕ್ಕೆಗಳಿಗೆ ಹಚ್ಚಬೇಕು ಇದು ಸರಳ ಆಯುರ್ವೇದ ಔಷದಿ.

ಪಾದಗಳು ಮತ್ತು ಅಂಗೈಯಿ ಉರಿಗೆ ಸಹಕಾರಿಯಾಗುತ್ತದೆ ತೊಂಡೆಕಾಯಿ ಎಲೆಗಳ ರಸ, ಕಪ್ಪು ಮುಳ್ಳಿನ ಎಲೆಗಳ ರಸ, ದೊಡ್ಡ ಬೀನ್ಸ್ ನ ಎಲೆಗಳ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿಕೊಂಡು ಅದನ್ನು ತೆಗೆದಿಡಬೇಕು. ಇದರ ಬಳಿಕ ಪ್ರತಿನಿತ್ಯ ಪಾದಗಳು ಮತ್ತು ಅಂಗೈಗೆ ಇದನ್ನು ಹತ್ತರಿಂದ ಅದಿನೈದು ನಿಮಿಷಗಳ ಕಾಲ ಮಸಾಜ್ ಮಾಡಿದರೆ ಆಗ ಅತಿಯಾದ ಉಷ್ಣತೆ ಮತ್ತು ಉರಿ ನಾಲ್ಕನೇ ದಿನದಿಂದಲೇ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ತೊಂಡೆಕಾಯಿ ಜೀರ್ಣಕ್ರಿಯೆಯನ್ನು ಸುಲಭವಾಗಿ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಫೈಬರ್ ಇದರಲ್ಲಿ ಇರುತ್ತದೆ. ಹಾಗೆಯೇ ಮಲಬದ್ಧತೆ, ಅಲ್ಸರ್, ಕಾಯಿಲೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡದಲ್ಲಿ ಇರುವಂತಹ ಕಲ್ಲನ್ನು ಕರಗಿಸುವುದಕ್ಕೆ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *