ಜೆಸಿಬಿ ಅಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಹಿಂದೆ ಎಲ್ಲಾ ಕೆಲಸಗಳನ್ನು ಮನುಷ್ಯರೆ ಮಾಡಬೇಕಾಗಿತ್ತು ಮತ್ತು ಕೆಲವು ಕೆಲಸಗಳಿಗೆ ಪ್ರಾಣಿಗಳನ್ನು ಸಹ ಬಳಕೆ ಮಾಡಿಕೊಳ್ಳಲಾಗುತಿತ್ತು. ಆದರೆ ಈಗ ಈ ಜೆಸಿಬಿ ಯಂತಹ ಯಂತ್ರ ಬಂದಮೇಲೆ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುವುದನ್ನು ಕಡಿಮೆಯಾಗಿದೆ. ಹೌದು ಮನುಷ್ಯ ಮಾಡುವ ಅದೆಷ್ಟೋ ಕೆಲಸವನ್ನು ಕ್ಷಣಾರ್ಧದಲ್ಲೇ ಮಾಡುವ ಯಂತ್ರ ಅಂದರೆ ಜೆಸಿಬಿ, ಹಿಂದೆ ದೊಡ್ಡ ಕೆಲಸಗಳನ್ನು ಮಾಡಲು ಆನೆಗಳನ್ನು ಬಳಕೆ ಮಾಡಲಾಗುತಿತ್ತು ಆದರೆ ಜೆಸಿಬಿ ಅನ್ನುವ ಯಂತ್ರ ಬಂದಮೇಲೆ ಅದೆಷ್ಟೋ ಆನೆಗಳು ಮಾಡುವ ಕೆಲಸಗಳನ್ನು ಜೆಸಿಬಿ ಗಳು ಮಾಡುತ್ತದೆ.

ಹಾಗಾದರೆ ಜೆಸಿಬಿ ಪದದ ಅರ್ಥವೇನು, ಈ ಯಂತ್ರವನ್ನು ಕಂಡು ಹಿಡಿದದ್ದು ಯಾರು, ಮತ್ತು ಎಲ್ಲಾ ಜೆಸಿಬಿ ಗಳು ಹಳದಿ ಬಣ್ಣವನ್ನೇ ಯಾಕೆ ಹೊಂದಿರುತ್ತವೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಎಲ್ಲಿ ನಿರ್ಮಾಣ ಕಾರ್ಯ, ಕಾಮಗಾರಿ, ಏನೇ ನಡೆದರು ಬಹುತೇಕ ಭಾರಿ ಕ್ರೇನ್ ಅಥವಾ ಜೆಸಿಬಿ ಯಂತಹ ಯಂತ್ರಗಳನ್ನು ಬಳಸುತ್ತಾರೆ. ಈ ಎಲ್ಲಾ ಯಂತ್ರಗಳು ಹಳದಿ ಬಣ್ಣದವು, ಇದು ಏಕೆ ಹೀಗಿರುತ್ತದೆ, ಈ ಯಂತ್ರಗಳು ಯಾಕೆ ಹಳದಿ ಬಣ್ಣದಲ್ಲಿ ಇರುತ್ತವೆ, ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ, ಜೆಸಿಬಿ ಮತ್ತು ಕ್ರೇನ್ ಮುಂತಾದವು ಯಾಕೆ ಹಳದಿ ಬಣ್ಣದಲ್ಲೇ ಇರುತ್ತವೆ ಇದರ ಹಿಂದಿನ ಕಾರಣಗಳೇನು ಈ ಎಲ್ಲಾ ಅನುಮಾನಗಳು ನಿಮಗೂ ಸಹ ಬಂದಿರಬಹುದು.

ಸ್ನೇಹಿತರೆ ಸಾಮಾನ್ಯವಾಗಿ ವಾಹನಗಳಲ್ಲಿ ಎರಡು ಬಗೆ ಇರುತ್ತವೆ ಹೌದು ಕಾರ್ ಮತ್ತು ಬೈಕ್ ನಂತಹ ಸಾಮಾನ್ಯ ವಾಹನಗಳು ಮತ್ತು ಎರಡನೆಯದಾಗಿ ಸ್ಪೇಷಲ್ ವೆಹಿಕಲ್ಸ್ ಅಂದರೆ ಜೆಸಿಬಿ. ಮೊದಲನೆಯದಾಗಿ ನೀವು ತಿಳಿದುಕೊಳ್ಳಬೇಕಾದದ್ದು ಏನೆಂದರೆ ಜೆಸಿಬಿ ಎಂಬುದು ಒಂದು ಕಂಪನಿಯ ಹೆಸರು ಅದು ಯಂತ್ರದ ಹೆಸರಲ್ಲ, ನೀವು ಜೆಸಿಬಿ ಎಂದು ಕರೆಯುವ ಅಗೆಯುವ ಯಂತ್ರವು ಅದರ ಕಂಪನಿಯ ಹೆಸರಿನಿಂದಲೇ ಗುರುತಿಸಿಕೊಂಡಿದೆ. ಇದು ನಿರ್ಮಾಣ ಸ್ಥಳಗಳಲ್ಲಿ ಬಳಸುವ ಹಾಗೂ ಕಟ್ಟಡ ಕೆಡಹುವ, ಒಡೆಯುವ, ಅಥವಾ ಕಟ್ಟುವ, ಸ್ಥಳ ಸಪಾಟು ಮಾಡುವ ಕೆಲಸ ಮಾಡಲಾಗುತ್ತದೆ. ಜೆಸಿಬಿ ಕಂಪೆನಿ ಹೆಸರಾದರೆ ಯಂತ್ರದ ಹೆಸರೇನು ಗೊತ್ತೇ…? ಈ ಯಂತ್ರದ ಹೆಸರು ಬ್ಯಾರ್ಹೂ ಲೋಡರ್ ಎಂದು.

ಜೆಸಿಬಿ 1945 ರಿಂದ ನಿರಂತರವಾಗಿ ಹೊಸ ಯಂತ್ರಗಳನ್ನು ತಯಾರಿಸುತ್ತಿದೆ ಅನೇಕ ಆವಿಷ್ಕಾರಗಳನ್ನು ಮಾಡಿದೆ ಕಂಪನಿಯ ಮೊದಲ ಬ್ಯಾರ್ಹೂ ಲೋಡರ್ ಅನ್ನು 1953 ರಲ್ಲಿ ತಯಾರಿಸಲಾಗಿತ್ತು. ಅದು ನೀಲಿ ಮತ್ತು ಕೆಂಪು ಬಣ್ಣಗಳಲ್ಲಿತ್ತು. ಇದರ ನಂತರ 1964 ರಲ್ಲೀ ಹಳದಿ ಬಣ್ಣದಲ್ಲಿ ತಯಾರಿಸಲಾಯಿತು ಅಂದಿನಿಂದ ಹಳದಿ ಬಣ್ಣದ ಯಂತ್ರಗಳನ್ನು ನಿರಂತರವಾಗಿ ತಯಾರಿಸಲಾಗುತ್ತದೆ. ಹಳದಿ ಬಣ್ಣ ಅನ್ನುವುದು ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ದೂರ ಹಳದಿ ಬಣ್ಣ ಸ್ವಚ್ಚವಾಗಿ ಕಾಣುವಂತೆ ಮಾಡುವ ಉದ್ದೇಶದಿಂದ ಜೆಸಿಬಿ ಗೆ ಹಳದಿ ಬಣ್ಣವನ್ನು ಕೊಡಲಾಗಿದೆ.

ಹಾಗೆಯೇ ಈ ಹಳದಿ ಬಣ್ಣದಿಂದ ಹಗಲು ರಾತ್ರಿ ಕೆಲಸ ಮಾಡುವ ಸ್ಥಳಗಳಲ್ಲಿ ಈ ಬಣ್ಣ ಎದ್ದು ಕಾಣುತ್ತದೆ ಅಷ್ಟು ಮಾತ್ರವಲ್ಲ ದೂರದಿಂದಲೇ ಗೋಚರಿಸುತ್ತದೆ ಕತ್ತಲೆಯಲ್ಲಿ ಈ ಹಳದಿ ಬಣ್ಣ ಎದ್ದು ಕಾಣುವುದರಿಂದ ಈ ಯಂತ್ರವನ್ನು ಪತ್ತೆ ಹಚ್ಚಬಹುದು. ಇನ್ನು ಈ ದೊಡ್ಡ ಗಾತ್ರದ ಜೆಸಿಬಿ ಅನ್ನುವ ಯಂತ್ರವನ್ನು ಕಂಡು ಹಿಡಿದದ್ದು ಜೋಸೆಫ್ ಸೈರಿಲ್ ಬ್ಯನ್ಪಾರ್ಡ್ ಅಂದರೆ ಶಾರ್ಟ್ ಆಗಿ ಜೆಸಿಬಿ ಮತ್ತು ಈತನ ಹೆಸರನ್ನೇ ಈತ ಕಂಡುಹಿಡಿದ ಯಂತ್ರಕ್ಕೆ ಇಡಲಾಗಿದೆ. ಹಾಗಾಗಿ ಈ ಹಳದಿ ಬಣ್ಣ ಯಂತ್ರಕ್ಕೆ ಉಪಯೋಗಿಸಲಾಗಿದೆ.

Leave a Reply

Your email address will not be published. Required fields are marked *