ವೀಕ್ಷಕರೆ ತುಳಸಿಗಿಡ ಇದು ಪ್ರತಿಯೊಬ್ಬರ ಮನೆಯಲ್ಲಿ ಕೂಡ ನೆಲೆಸಿರುವ ಸಾಕ್ಷಾತ ಲಕ್ಷ್ಮಿ ಎಂದು ಹೇಳಬಹುದು. ಯಾಕೆಂದರೆ ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತದೆ ಅವರ ಮನೆಯಲ್ಲಿ ಸದಾ ಸಂತೋಷ ನೆಮ್ಮದಿಯಿಂದ ಕೂಡಿರುತ್ತದೆ. ಜೊತೆಗೆ ಅವರ ಮನೆಯಲ್ಲಿ ಕಾಯಿಲೆಗಳು ಕೂಡ ತುಂಬಾನೇ ಬೇಗ ದೂರವಾಗುತ್ತದೆ ಅಂತ ಹೇಳಬಹುದು. ಯಾಕೆಂದರೆ ಈ ಗಿಡದಲ್ಲಿ ಅಷ್ಟು ಔಷಧೀಯ ಗುಣಗಳಿವೆ ಮತ್ತು ಪುಟ್ಟ ಮಗುವಿನಿಂದ ಹಿಡಿದು ಅಜ್ಜನ ವರೆಗೂ ಕೂಡ ಇದನ್ನು ಉಪಯೋಗಿಸಬಹುದು. ಅಷ್ಟು ಆರೋಗ್ಯದ ಗುಣಗಳು ಈ ತುಳಸಿ ಗಿಡ ದಲ್ಲಿ ಇದೆ. ಸಾವಿರಾರು ವರ್ಷದಿಂದಲೂ ಕೂಡ ಈ ತುಳಸಿ ಗಿಡವನ್ನು ಆಯುರ್ವೇದ ಔಷಧದಲ್ಲಿ ಇದನ್ನು ಉಪಯೋಗ ಮಾಡುತ್ತ ಬಂದಿದ್ದಾರೆ.

 

 

ಇವತ್ತಿನ ಈ ಮಾಹಿತಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತದೆ ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ತಿಳಿದುಕೊಳ್ಳಲು ಲೈಕ್ ಮಾಡಿ ಶೇರ್ ಮಾಡಿ. ಮೊದಲನೆಯದಾಗಿ ತುಳಸಿ ಗಿಡ ದಲ್ಲಿ ಯಾವೆಲ್ಲ ಪೋಸ್ಟಿಕ ಅಂಶಗಳನ್ನು ಒಳಗೊಂಡಿದೆ ಅಂತ ನೋಡುವುದಾದರೆ ಈ ತುಳಸಿ ಗಿಡದ ಎಲೆಯಲ್ಲಿ ವಿಟಮಿನ್-ಎ ಇದೆ. ವಿಟಮಿನ್ ಕೆ ಇದೆ ಹಾಗೆ ಹಾಗೂ ಕ್ಯಾಲ್ಸಿಯಂ ಇದೆ. ಮ್ಯಾಗ್ನಿಷಿಯಂ ಇದೆ ಮತ್ತು ಕ್ಯಾಲರೀಸ್ ಕೂಡ ಇವೆ. ನೋಡಿ ಇಷ್ಟೆಲ್ಲಾ ಪೌಷ್ಟಿಕಾಂಶಗಳನ್ನು ಒಳಗೊಂಡಿರುವಂತಹ ತುಳಸಿಯಲ್ಲಿ ಎಲೆಯು ನಮ್ಮ ಆರೋಗ್ಯಕ್ಕೆ ತುಂಬಾನೆ ಉತ್ತಮವಾದದ್ದು. ಇನ್ನು ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಇದು ನಮ್ಮ ಪ್ರತಿರೋಧಕ ವ್ಯವಸ್ಥೆ ಬಲಪಡಿಸುತ್ತದೆ.

 

 

ಮತ್ತು ತುಳಸಿ ಎಲೆಗಳಲ್ಲಿ ಆಂಟಿ ಅಸಿಡಿತಿ ಗಳು ಕೂಡ ಸಮೃದ್ಧವಾಗಿದ್ದು ಇದು ಸೋಂಕಿನ ವಿರುದ್ಧ ಕೂಡ ಹೋರಾಡುತ್ತದೆ. ಇನ್ನು ಸಕ್ಕರೆ ಕಾಯಿಲೆ ಇದ್ದವರು ಕೂಡ ನಿತ್ಯ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದಕ್ಕೆ ಸಹಾಯವಾಗುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಇದು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಕೂಡ ಆರೋಗ್ಯವಾಗಿಡುತ್ತದೆ. ಹಾಗೂ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡಿದಾಗ ಆಗ ನಮ್ಮ ದೇಹದಲ್ಲಿ ಪಿಹೆಚ್ ಮಟ್ಟವು ಕೂಡ ಅದು ಕಾಪಾಡುತ್ತದೆ. ಜೊತೆಗೆ ನಮ್ಮ ದೇಹದಲ್ಲಿ ಇರುವಂತಹ ಆಮ್ಲತೆಯು ಕೂಡ ನಿಯಂತ್ರಣದಲ್ಲಿಡುತ್ತದೆ. ಇನ್ನು ಪ್ರತಿನಿತ್ಯ ತುಳಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ವಿಷಕಾರಿ ವಸ್ತುಗಳನ್ನು ಕೂಡ ತೆಗೆದುಹಾಕುತ್ತದೆ.

Leave a Reply

Your email address will not be published. Required fields are marked *