ನಮಸ್ತೆ ಪ್ರಿಯ ಓದುಗರೇ, ಅಮ್ಮ ಅಂತ ಭಕ್ತಿ ಇಂದ ಕೂಗಿದರೆ ಸಾಕು ತನ್ನ ಮಕ್ಕಳ ಕಷ್ಟವನ್ನು ಪರಿಹರಿಸಲು ಆ ತಾಯಿ ಓಡೋಡಿ ಬರ್ತಾಳೆ. ತನ್ನನ್ನು ನಂಬಿ ಬರುವ ಭಕ್ತರ ಕಣ್ಣೀರನ್ನು ಒರೆಸಿ ಅವರ ಮುಖದಲ್ಲಿ ನಗುವಿನ ಸಿಂಚನ ಉಣ ಬಡಿಸುತ್ತಾಳೆ ಈ ದೇವಿ. ದೇಹಿ ಎಂದವರ ಬೆನ್ನ ಬಿಡದೇ ಕಾಪಡುತ್ತಿರೋ ಈ ಜಗನ್ಮಾತೆಯನ್ನು ಎಷ್ಟು ಬಾರಿ ಸ್ಮರಣೆ ಮಾಡಿದರೂ ಕಡಿಮೆಯೇ. ಬನ್ನಿ ಇವತ್ತಿನ ಲೇಖನದಲ್ಲಿ ದಸರಿಘಟ್ಟದಲ್ಲಿ ನೆಲೆನಿಂತ ತಾಯಿ ಚೌಡೇಶ್ವರಿ ತಾಯಿಯ ಬಗ್ಗೆ ತಿಳಿದು ಪಾವನರಾಗೋಣ. ಶುಭ್ರ ವರ್ಣದವಳಾದ ಈ ತಾಯಿ ಶಿವನ ಸ್ವರೂಪವನ್ನಾ ಹೊಂದಿ ಕೈಯಲ್ಲಿ ಶೂಲ, ಕಪಾಲ ಕೈಯಲ್ಲಿ ಖಡ್ಗವನ್ನಾ ಹಿಡಿದು ತನ್ನ ಸನ್ನಿಧಿಗೆ ಬರುವ ಎಲ್ಲಾ ಭಕ್ತರ ಮನೋಕಾಮನೆಗಳನ್ನು ಪೂರ್ತಿ ಮಾಡ್ತಾ ಇದ್ದಾಳೆ. ಈ ಕ್ಷೇತ್ರದ ವಿಶೇಷತೆ ಎಂದರೆ ನಾವು ಕೇಳುವ ಪ್ರಶ್ನೆಗಳಿಗೆ ಸ್ವತಃ ಚೌಡೇಶ್ವರಿ ದೇವಿ ಉತ್ತರವನ್ನು ನೀಡೋದು. ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ, ತೆಲುಗು ನಾವು ಯಾವ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದರೂ ಆ ತಾಯಿ ಕನ್ನಡ ಭಾಷೆಯಲ್ಲಿ ಉತ್ತರವನ್ನು ನೀಡ್ತಾರೆ. ಇಂತಹ ಅಪರೂಪದ ದೇವಸ್ಥಾನವನ್ನು ನಾವು ಕರ್ನಾಟಕದಲ್ಲಿ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಯಂತ್ರ ಮಂತ್ರ ಸಮಸ್ಯೆ, ಗ್ರಹದೋಷ ಸಮಸ್ಯೆ, ಸಂತಾನ ಪ್ರಾಪ್ತಿ, ವ್ಯವಹಾರ ವ್ಯಾಪಾರ ಸಮಸ್ಯೆ, ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆಗಳು ಇದ್ರೆ ಈ ದೇವಿಯ ಬಳಿ ಉತ್ತರವನ್ನು ಪಡೆಯಬಹುದು.

ದೇವಿಗೆ ಪ್ರಶ್ನೆ ಕೇಳುವವರು ಮೊದಲು ದೇವಸ್ಥಾನದ ಕೌಂಟರ್ ಅಲ್ಲಿ ಟಿಕೆಟ್ ಪಡೆದು ಆಲಯದ ಪ್ರಾಂಗಣದಲ್ಲಿ ಕುಳಿತುಕೊಳ್ಳಬೇಕು. ನಂತರ ಪೂಜಾರಿಗಳು ಚೌಡೇಶ್ವರಿಅಮ್ಮನವರ ಪಂಚಲೋಹದ ವಿಗ್ರಹವನ್ನು ಅಕ್ಕಿ ಹಿಟ್ಟಿನ ಮೇಲಿಟ್ಟು, ದೇವಿಯ ವಿಗ್ರಹದ ಮೇಲೆ ಕಳಸವನ್ನು ಇಡುತ್ತಾರೆ. ನಂತರ ನಮ್ಮ ಮನದಾಳದ ಪ್ರಶ್ನೆಗಳನ್ನು ಅಕ್ಕಿ ಹಿಟ್ಟಿನ ಮೇಲೆ ಬರೆದರೆ, ಆ ತಾಯಿ ಕಳಸದ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಅಕ್ಕಿ ಹಿಟ್ಟಿನ ಮೇಲೆ ಬರೆಯುವುದರ ಮೂಲಕ ಸೂಚಿಸುತ್ತಾಳೆ. ದೇವಿ ನೀಡಿದ ಉತ್ತರವನ್ನು ದೇವಸ್ಥಾನದ ಅರ್ಚಕರು ಭಕ್ತರಿಗೆ ತಿಳಿಸುತ್ತಾರೆ. ಈ ರೀತಿಯ ಎಲ್ಲಾ ಬಗೆಯ ಪ್ರಶ್ನೆಗಳಿಗೂ ತಾಯಿ ಉತ್ತರವನ್ನು ನೀಡುತ್ತಾಳೆ. ನಮ್ಮ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಸಿದ್ಧಿ ಆಗಬೇಕು ಅಂದರೆ, ಈ ತಾಯಿಗೆ ಸೀರೆಯನ್ನು ಸಮರ್ಪಿಸಬೇಕು. ವಿಶೇಷವಾಗಿ ಮಹಿಳೆಯರು ಈ ತಾಯಿಗೆ ಸೀರೆಯಿಂದ ಉಡಿಯನ್ನು ತುಂಬಿಸುತ್ತೇವೆ ಅಂತ ಹರಕೆ ಹೊತ್ತುಕೊಂಡರು ಅವರ ಮನಸ್ಸಿನ ಎಲ್ಲಾ ಅಭೀಶ್ಟೆಗಳನ್ನು ಇಡೇರಿಸುತ್ತಾಳೆ. ಅಲ್ಲದೇ ಹೆಣ್ಣುಮಕ್ಕಳಿಗೆ ಕುಂಕುಮ ಭಾಗ್ಯವನ್ನು ಕರುಣಿಸುತ್ತಾಳೆ ಈ ಆದಿಶಕ್ತಿ ಜಗನ್ಮಾತೆ. ಇನ್ನೂ ಮಕ್ಕಳಿಗೆ ದೃಷ್ಟಿ ದೋಷದ ಸಮಸ್ಯೆ ಇದ್ದರೆ, ಮಕ್ಕಳು ಭಯ ಪಡುತ್ತಿದ್ದರೆ, ಮಕ್ಕಳಿಗೆ ಬಾಲಗ್ರಹ ದೋಷ ಇದ್ದರೆ ಮಕ್ಕಳನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತಾಯತವನ್ನು ಕಟ್ಟಿಸಿಕೊಂಡು ಹೋದ್ರೆ, ಮಕ್ಕಳ ಎಲ್ಲಾ ಸಮಸ್ಯೆಗಳು ಪರಿಹಾರ ಆಗಿ ಮಕ್ಕಳು ಆಯುಷ್ಯವಂತರು ಆಗ್ತಾರೆ ಅನ್ನುವುದು ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ. ಕೆವಲ ಜನ ಸಾಮಾನ್ಯರಲ್ಲ, ಚಿತ್ರರಂಗದವರು, ರಾಜಕಾರಣಿಗಳು ಈ ದೇವಿಯನ್ನು ಆರಾಧಿಸುತ್ತಾರೆ.

ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿ ಆಗಿದ್ದಾಗ ಈ ದೇವಿಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಭವಿಷ್ಯದ ಬಗ್ಗೆ ಕೇಳಿದ್ದರಂತೆ, ಆಗ ದೇವಿಯು ನೀವು ಮುಂದಿನ ಪ್ರಧಾನ ಮಂತ್ರಿ ಆಗ್ತೀರಾ ಅಂದು ಭವಿಷ್ಯ ನುಡಿದಿದ್ದರಂತೆ ಎಂದು ಹೇಳಲಾಗುತ್ತದೆ. ಮನುಷ್ಯ ಎಷ್ಟು ದೊಡ್ಡವನಾದರು ಅದ ದೇವಿಯ ಮುಂದೆ ತಲೆ ಬಾಗಲೇಬೇಕು. ಭಯ, ಭಕ್ತಿಯಿಂದ ಈ ದೇವಿಯ ಮುಂದೆ ನಿಂತು ಕೈ ಜೋಡಿಸಿ ಬೇಡಿದ್ರೆ, ಅದ ತಾಯಿ ಎಂದಿಗೂ ನಮ್ಮ ಕೈ ಬಿಡೋದಿಲ್ಲ. ದಸರಿಘಟ್ಟದಲ್ಲೀ ನೆಲೆನಿಂತ ತಾಯಿ ಚೌಡೇಶ್ವರಿ ದೇವಿಯನ್ನು ಬೆಳಿಗ್ಗೆ 9 ಘಂಟೆ ಇಂದ ಸಂಜೆ 9 ರ ವರೆಗೆ ದರ್ಶನ ಮಾಡಬಹುದಾಗಿದ್ದು, ಮಂಗಳವಾರ ಹಾಗೂ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ನವರಾತ್ರಿಯನ್ನು ಈ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ನವರಾತ್ರಿಯ ಒಂಭತ್ತು ದಿನಗಳ ಕಾಲ ಈ ದೇವಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಆ ಸಮಯದಲ್ಲಿ ಈ ಚೌಡೇಶ್ವರಿ ದೇವಿಯನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಅತ್ಯಂತ ಶಕ್ತಶಾಲಿ ಯಾದ ಚೌಡೇಶ್ವರಿ ದೇವಸ್ಥಾನವು ಬೆಳಗಾವಿ ಜಿಲ್ಲೆಯಿಂದ 439 ಕಿಮೀ, ಹುಬ್ಬಳ್ಳಿಯಿಂದ 341 ಕಿಮೀ, ಶಿವಮೊಗ್ಗದಿಂದ 145 ಕಿಮೀ, ಹಾಸನದಿಂದ 47ಕಿಮೀ , ಬೆಂಗಳೂರಿನಿಂದ 155 ಕಿಮೀ ಹಾಗೂ ತುಮಕೂರಿನಿಂದ 85 ಕಿಮೀ ದೂರದಲ್ಲಿದೆ. ತುಮಕೂರಿನ ತಿಪಟೂರಿ ನಿಂದ ಕೇವಲ 10 ಕಿಮೀ ದೂರದಲ್ಲಿದೆ. ಕರ್ನಾಟಕ ಬಸ್ ಸಾರಿಗೆ ಇಂದ ತಿಪಟೂರು ತಲುಪಿ ಅಲ್ಲಿಂದ ಬಾಡಿಗೆ ವಾಹನದಲ್ಲಿ ಈ ದೇವಸ್ಥಾನವನ್ನು ತಲುಪಬಹುದು. ತಿಪಟೂರಿಗೆ ರೈಲ್ವೇ ವ್ಯವಸ್ಥೆ ಇದ್ದು, ಸಾಧ್ಯವಾದರೆ ನೀವು ನಿಮ್ಮ ಜೀವನದಲ್ಲಿ ಈ ಸರ್ವ ಶಕ್ತಿಯ ದರ್ಶನ ಪಡೆದು ಕೃತಾರ್ಥರಾಗಿ.

Leave a Reply

Your email address will not be published. Required fields are marked *