ಕಿಚ್ಚ ಸುದೀಪ್ ದಕ್ಷಿಣ ಭಾರತ ಕಂಡ ಮೇರು ನಟ. ಇವರು ಸಿನೆಮಾ ಕ್ಷೇತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲು ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅಹೋರಾತ್ರ ಎಂಬ ವ್ಯಕ್ತಿ ಕಿಚ್ಚ ಸುದೀಪ್ ಅವರ ವಿರುದ್ದ ಫೇಸ್‌ಬುಕ್‌ ನಲ್ಲಿ ಆಂದೋಲನವನ್ನೆ ಶುರು ಮಾಡಿದ್ದರು.ಸುದೀಪ್ ಅವ್ರು ಈ ಹಿಂದೆ ನೀಡಿದ ಒಂದು ಜಾಹಿರಾತು ಇದಕ್ಕೆ ಕಾರಣ. ಆನ್ ಲೈನ್ ರಮ್ಮಿ ಸರ್ಕಲ್ ಎಂಬ ಗೇಮ್ ಗೆ ಸುದೀಪ್ ಅವರು ರಾಯಭಾರಿಯಾಗಿ ಜಾಹಿರಾತು ನೀಡಿದ್ದರು. ಇದು ಕೆಲವರ ಕೆಂಗಣ್ಣಿಗೆ ಸಹ ಗುರಿಯಾಗಿತ್ತು. ಏಕೆಂದರೆ ಆ ಜಾಹೀರಾತು ಜೂಜಿಗೆ ಉತ್ತೇಜನ ನೀಡುವ ಅಂಶಗಳನ್ನ ಹೊಂದಿತ್ತು. ಈ ವಿಷಯಕ್ಕೆ ಆ ಸಂಧರ್ಭದಲ್ಲಿ ಏನು ಪ್ರತಿಕ್ರಿಯೆ ನೀಡಿರಲಿಲ್ಲ ಕಿಚ್ಚ.

ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಯಾರ ಹೆಸರು ತೆಗೆದು ಕೊಳ್ಳದೆ ತಮ್ಮ ಮೌನ ಮುರಿದಿದ್ದಾರೆ. ನಾನು ನೀಡಿದ ಜಾಹೀರಾತಿನ ಬಗೆಗೆ ನನಗೆ ಯಾವುದೆ ಬೇಸರವಿಲ್ಲ. ಕೆಲವರು ನನ್ನ ಬಗ್ಗೆ ಅವಹೇಳನ ಮಾಡಲು ಫೇಸ್‌ಬುಕ್‌ ಲೈವ್ ಅನ್ನು ಸಂಪೂರ್ಣವಾಗಿ ಬಳಸಿಕೊಂಡರು. ನನ್ನನ್ನು ಒಬ್ಬ ವಿಲನ್ ರೀತಿಯಲ್ಲಿ ಸಮಾಜದ ಎದುರು ಬಿಂಬಿಸ ತೊಡಗಿದ್ದರು. ನಮಗು ಕೆಲವೊಮ್ಮೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ. ನಮಗೆ ಹಣ ನೀಡಬೇಕದವರನ್ನ ಕೂಡ ಕೇಳುದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ನಮಗು ಸಮಾಜದ ಕಷ್ಟಗಳಿಗೆ ಸ್ಪಂದಿಸ ಬೇಕು ಎನ್ನುವ ಹಸಿವಿರುತ್ತದೆ. ನಮ್ಮ ಚಾರಿಟೇಬಲ್ ಟ್ರಸ್ಟ್ ಅನ್ನು ನನ್ನ ಸ್ವಂತ ಹಣದಿಂದ ನಡೆಸುತ್ತಿದ್ದೇನೆ. ಹಾಗು ನಾವು ಯಾರಿಂದಲು ದೇಣಿಗೆ ಪಡೆಯುದಿಲ್ಲ ಮತ್ತು ಆ ಸಂಪ್ರಾದಯವನ್ನು ನಾವು ಬೇಲಸಿಕೊಂಡಿಲ್ಲ ಎಂದರು. ನಾನು ಭಾಗವಹಿಸುವ ಕಾರ್ಯಕ್ರಮದಲ್ಲಿ ಬಂದ ಹಣ,ಜಾಹೀರಾತುಗಳಲ್ಲಿ ಬಂದ ಹಣವನ್ನ ಮತ್ತು ರಿಯಾಲಿಟಿ ಶೋ ನಡೆಸಿಕೊಟ್ಟ,ಬಂದ ಹಣವನ್ನ ಬಳಸಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇವೆ. ನಾನು ಜಾಹಿರಾತು ನೀಡಿರುವುದಕ್ಕೆ ಯಾವುದೆ ವಿಶಾದವಿಲ್ಲ.ಏಕೆಂದರೆ ಆ ಜಾಹೀರಾತಿನಿಂದ ಹಣ ಬರದೆ ಇದ್ದಿದ್ದರೆ ನಾನು ಇಷ್ಟು ಜನರಿಗೆ ಸಹಾಯ ಮಾಡಲು ಆಗುತ್ತಿರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸುದೀಪ್ ಅವರು ಕರೋನ ಸಂಕಷ್ಟದಲ್ಲಿರುವವರಿಗೆ ಆಸರೆ ಆಗಿದ್ದಾರೆ. ಉಚಿತ ಆಹಾರ ವಿತರಣೆಯನ್ನ ಮಾಡಿದ್ದಾರೆ. ಸಿನಿ ಕಾರ್ಮಿಕರ ಕಷ್ಟಗಳಿಗೆ ಸ್ಪನದಿಸುತ್ತಿದ್ದಾರೆ. ಹಾಗೆ ಆಕ್ಸಿಜನ್ ಕಾನ್ಸತ್ರೇಟ್ಗಳನ್ನ ಅಗತ್ಯ ಇರುವ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಿದ್ದಾರೆ. ಟೀಕೆಗಳು ಏನೆ ಇರಲಿ,ಸುದೀಪ್ ಅವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳು ಅವರ ವ್ಯಕಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗುವುದಿಲ್ಲ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *