ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲು ಹೆಚ್ಚಾಗಿ ಜನ ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಸಾಮನ್ಯವಾಗಿ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಇದು. ಸಮಾನ್ಯವಾಗಿ ಗ್ಯಾಸ್ ಸಮಸ್ಯೆ ಇದ್ದವರಿಗೆ ಹುಳಿ ತೇಗು,ಗಂಟಲಲ್ಲಿ ಉರಿಯುತ,ತಲೆ ನೋವು,ಹೊಟ್ಟೆ ಉಬ್ಬರಿಸುವುದು,ಹೊಟ್ಟೆ ನೋವು ಬರುವುದು ಮತ್ತು ಕೆಲವೊಮ್ಮೆ ಕುತ್ತಿಗೆ ನೋವಿನ ಲಕ್ಷಣಗಳು ಕಾಣಿಸಿ ಕೊಳ್ಳುತ್ತದೆ‌.

ಇದಕ್ಕೆಲ್ಲ ಇಂದಿನ ದಿನಮಾನಗಳಲ್ಲಿ ನಾವು ಸೇವಿಸುತ್ತಿರುವ ಆಹಾರ ಪದ್ದತಿಯೆ ಪ್ರಮುಖ ಕಾರಣ. ಹಲವರು ಗ್ಯಾಸ್ ಸಮಸ್ಯೆಗೆ ಹೆಚ್ಚಾಗಿ ಮಾತ್ರೆಗಳಿಗೆ ಅವಲಂಬಿತರಾಗಿರುತ್ತಾರೆ. ಅತಿಯಾದ ಮಾತ್ರೆ ಸೇವನೆಯಿಂದ ಬೇರೆ ಸಮಸ್ಯೆಗಳಿಗು ತುತ್ತಾಗುವ ಸನ್ನಿವೇಶ ಎದುರಾಗಬಹುದು. ಹಿಂದೆ ನಮ್ಮ ಪೂರ್ವಿಕರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರಲಿಲ್ಲ. ಏಕೆಂದರೆ ನಮ್ಮ ಹಿರಿಯರು ಮನೆ ಮದ್ದುಗಳನ್ನ ಅನುಸರಿಸುತ್ತಿದ್ದರು.ಮನೆಯಲ್ಲಿಯೆ ತಮಗೆ ಬೇಕಾದ ಔಷದಿಗಳನ್ನ ಸಿದ್ದ ಪಡಿಸಿಕೊಳ್ಳುತ್ತಿದ್ದರು.

ಗ್ಯಾಸ್ ಸಮಸ್ಯೆಯ ಶೀಘ್ರ ಉಪಶಮನಕ್ಕೆ ಇಲ್ಲಿದೆ ಒಂದು ಮನೆ ಮದ್ದು. ಒಂದು ಚಮಚ ಬೆಲ್ಲದ ಪುಡಿ ತೆಗೆದುಕೊಳ್ಳ ಬೇಕು.ಬೆಲ್ಲ ದೇಹದಲ್ಲಿ ಜೀರ್ಣಕ್ರೀಯೆಗೆ ತುಂಬ ಉಪಕಾರಿಯಾಗಿದೆ ಹಾಗು ದೇಹದಲ್ಲಿ ರಕ್ತ ಕಣಗಳ ಉತ್ಪತ್ತಿಗೆ ಸಹಕಾರಿಯಾಗಿದೆ. ನಂತರ ಒಂದು ಚಮಚ ಅಜ್ವಾರ ಅಥವಾ ಓಮ್ ಕಾಳನ್ನ ತೆಗೆದುಕೊಳ್ಳಬೇಕು. ಅಜ್ವಾರ ದೇಹದಲ್ಲಿ ಶಕ್ತಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ತಿಂದ ಆಹಾರವನ್ನ ಚೆನ್ನಾಗಿ ಜೀರ್ಣಿಸಿ ಗ್ಯಾಸ್ ಆಗಲು ಬಿಡುವುದಿಲ್ಲ.

ನಂತರ ಬೆಲ್ಲ ಮತ್ತು ಅಜ್ವಾನವನ್ನ ಒಂದು ಪ್ಲೇಟ್ ನಲ್ಲಿ ಹಾಕಿ ಕೊಳ್ಳಬೇಕು. ಹದಕ್ಕೆ ಸ್ವಲ್ಪ ನೀರು ಸೇರಿಸಿ,ಚಿಕ್ಕ ಚಿಕ್ಕ ಉಂಡೆ ಕಟ್ಟಬೇಕು. ಈ ಮಿಶ್ರಣವನ್ನ ದಿನಕ್ಕೆ 3 ಹೊತ್ತು,3 ದಿನ ಊಟಕ್ಕೆ ಅರ್ಧ ಘಂಟೆಯ ಮೊದಲು ಸೇವಿಸ ಬೇಕು. ಈ ಮನೆ ಮದ್ದು ನಿಮ್ಮ ದೇಹದಲ್ಲಿನ ಜೀರ್ಣಕ್ರೀಯೆಯನ್ನ ಉತ್ತೇಜಿಸುವುದಲ್ಲದೆ,ಹಸಿವನ್ನ ಹೆಚ್ಚಿಸುತ್ತದೆ. ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಪದೆ ಪದೆ ಎದುರಾಗಲು ಬಿಡುವುದಿಲ್ಲ.

ಹಾಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದನ್ನು ಮಕ್ಕಳಿಗೂ ನೀಡಬಹುದು. ಶೀತ,ಕೆಮ್ಮು,ಗನ್ಟಲು ನೋವನ್ನು ಕೂಡ ನಿವಾರಿಸ ಬಲ್ಲದು. ಈ ಮನೆ ಮದ್ದನ್ನು ಒಮ್ಮೆ ನೀವು ಕೂಡ ಪ್ರಯತ್ನಿಸಿ ನೋಡಿ. ಮನೆಯಲ್ಲೆ ಒಂದೆ ನಿಮಷಕ್ಕೆ ತಯಾರು ಮಾಡಬಹುದು.ಈ ಮನೆ ಮದ್ದು ಖಂಡಿತವಾಗಿಯು ನಿಮ್ಮ ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *