ಗಣೇಶನನ್ನು ಆಕರ್ಷಿಸುವಂತಹ ಸಾಮರ್ಥ್ಯವನ್ನು ಹೊಂದಿರುವ ಗರಿಕೆ ಹುಲ್ಲನ್ನು ಗಣೇಶನಿಗೆ ಪ್ರಮುಖವಾಗಿ ಅರ್ಪಿಸಲಾಗುತ್ತದೆ. ಹೌದು ಎಲ್ಲರೂ ಗರಿಕೆ ನೀಡುತ್ತಾರೆ. ಗರಿಕೆಯ ಎಳಸು ಚಿಗುರುಗಳನ್ನು ದೇವತಾ ಕಾರ್ಯದಲ್ಲಿ ಬಳಸಲಾಗುತ್ತದೆ. ಈ ಚಿಗುರುಗಳು ತಮ್ಮ ಎಲೆಗಳ ಮೇಲೆ ಬಿದ್ದ ಇಬ್ಬನಿಗಳಲ್ಲಿರುವ ದೇವತೆಗಳ ತತ್ವವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಹಾಗಾಗಿ ಇದನ್ನು ಪೂಜೆಯಲ್ಲಿ ಬಳಸುವ ಆರಾಧಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಒಮ್ಮೆ ಆಂಗ್ಲ ಸುರ ಎನ್ನುವ ದೈತ್ಯನಿದ್ದ ಅವನು ತನ್ನ ಜ್ವಾಲೆಯ ಪ್ರಭಾವದಿಂದ ಮೂರು ಲೋಕದಲ್ಲಿ ಎಲ್ಲರಿಗೂ ಹಿಂಸೆ ಕೊಡುತ್ತಿದ್ದ ದೇವಾದಿ ದೇವತೆಗಳು ಹಾಗೂ ಋಷಿಮುನಿಗಳು ಅವನ ಕಾಟ ತಳಲಾರದೆ ಶಿವನಲ್ಲಿ ಬರುತ್ತಾರೆ. ಆಗ ಶಿವನು ದೇವತೆಗಳ ಸಹಾಯಕ್ಕಾಗಿ ಅವರ ಜೊತೆ ಕಳುಹಿಸುತ್ತಾನೆ. ದೇವತೆಗಳ ಹಾಗೂ ಋಷಿಗಳ ಜೊತೆಗೆ ಗಣೇಶನು ಆಂಗ್ಲ ಸುರನಿಗೆ ಬರುತ್ತಾನೆ. ಅಲ್ಲಿ ಆಂಗ್ಲಸುರನಿಗೂ ಗಣೇಶನಿಗೂ ವಾದ ವಿವಾದಗಳು ಆಗುತ್ತದೆ.

ಆಗ ಗಣೇಶನು ಅಂಗ್ಲಾಸುರನನ್ನು ಬಿಡುತ್ತಾನೆ. ಆಂಗ್ಲ ಸುರನ ಜ್ವಾಲೆಯ ತಾಪದಿಂದ ಗಣೇಶನ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ. ಆಗ ದೇವತೆಗಳು ಋಷಿಮುನಿಗಳು ಕೆಲವು ಉಪಚಾರ ಮಾಡುತ್ತಾರೆ. ಆದರೂ ಹೊಟ್ಟೆ ಉರಿ ಕಡಿಮೆಯಾಗುವುದಿಲ್ಲ. ಆಗ ಕಶ್ಯಪ್ ಮುನಿಯು 21 ಗರಿಕೆ ಹುಲ್ಲಿನ ಕಟ್ಟುಗಳನ್ನು ಮಾಡಿ ಗಣೇಶನಿಗೆ ತಿನ್ನಲು ಕೊಡುತ್ತಾರೆ.

ಆಗ ಗಣೇಶನ ಹೊಟ್ಟೆ ಉರಿ ಶಾಂತವಾಗುತ್ತದೆ. ಆದ್ದರಿಂದ ಗಣೇಶನಿಗೆ ಗರಿಕೆ ಹುಲ್ಲು ತುಂಬಾ ಇಷ್ಟ. ಗರಿಕೆಯನ್ನು ಗಣೇಶನಿಗೆ ಅರ್ಪಿಸುವಾಗ ಮೂರು ಅಥವಾ ಐದು ಎಳೆಯನ್ನು ಹೊಂದಿರಬೇಕು. ಗರಿಕೆಯ ಮಧ್ಯದ ಎಸಳು ಗಣೇಶನನ್ನು ಆಕರ್ಷಿಸಿದರೆ, ಇತರ ಎರಡು ಎಸಳು ಶಿವ ಹಾಗೂ ಶಕ್ತಿಯನ್ನು ಆಕರ್ಷಿಸುತ್ತದೆ. ಗಣೇಶನಿಗೆ 21 ಗರಿಕೆಯನ್ನು ನೀಡುವುದು ಕಡ್ಡಾಯ.

ಈ 21 ಗರಿಕೆಯನ್ನು ಕಟ್ಟಿ, ನೀರಿನಲ್ಲಿ ಅದ್ದಿದ ನಂತರ ಗಣೇಶನಿಗೆ ಅರ್ಪಿಸಬೇಕು. ಗಣೇಶನನ್ನು ಗರಿಕೆಯಿಂದ ಅಲಂಕರಿಸುವಾಗ ಮುಖವನ್ನು ಹೊರತುಪಡಿಸಿ, ಇತರ ಭಾಗವನ್ನು ಗರಿಕೆಯಿಂದ ಮುಚ್ಚಬೇಕು. ಮೊದಲು ಪಾದವನ್ನು ಮುಚ್ಚಿ ನಂತರ ಇತರ ಭಾಗವನ್ನು ಗರಿಕೆಯಿಂದ ಅಲಂಕರಿಸುತ್ತಾ ಬರಬೇಕು.21 ಗರಿಕೆ ಚಿಕ್ಕ ಚಿಕ್ಕ ಕಟ್ಟನ್ನು ಮಾಡಿ ಗಣೇಶನಿಗೆ ಅರ್ಪಿಸುತ್ತಾ ಈ ಮಂತ್ರವನ್ನು ಉಚ್ಚಾರಣೆ ಮಾಡಬೇಕು.ಓಂ ಗಣಪತಿಯೇ ನಮಃ ಓಂ ಉಮಾ ಪುತ್ರಾಯ ನಮಃ ವಿಘ್ನನಾಶಾಯ ನಮಃ. ಓಂ ವಿನಾಯಕಾಯ ನಮಃ ಓಂ ಈಶ ಪುತ್ರಯನಮಃ. ಓಂ ಸರ್ವಾಸಿದ್ಧಿ ಪಡೆದಾಯಿ ನಮಹ ಓಂ ಏಕದಂತಾಯೆ ನಮಃ.

Leave a Reply

Your email address will not be published. Required fields are marked *