ನಮಸ್ತೆ ಪ್ರಿಯ ಓದುಗರೇ, ಕ್ಯಾನ್ಸರ್ ರೋಗ ತುಂಬಾ ಭಯಾನಕ ಮತ್ತು ಅಪಾಯಕಾರಿ. ಇದು ಬಂದರೆ ದೇಹದ ಒಂದೇ ಭಾಗವನ್ನು ಆಕ್ರಮಿಸಿಕೊಳ್ಳದೇ ರೋಗ ತೀವ್ರ ಆದಂತೆ ದೇಹದ ಇತರೆ ಭಾಗಗಳಿಗೆ ಹರಡಿ ಅಲ್ಲಿರುವ ಜೀವಕೋಶಗಳಿಗೆ ತೊಂದರೆ ಉಂಟು ಮಾಡಿ ದೇಹ ಪೂರ ಹಾಳಾಗದಂತೆಗುವಂತೆ ಮಾಡುತ್ತದೆ. ಆದರೆ ಹೀಗೆ ಆಗದಂತೆ ತಡೆಯಲು ಅನೇಕ ಮನೆಮದ್ದುಗಳು ಇವೆ. ಅದರಲ್ಲಿ ಒಂದು ಈ ಲಕ್ಮಣಫಲ. ಇದೊಂದು ಸೀತಾಫಲ ಹಣ್ಣಿನ ಜಾತಿಗೆ ಸೇರಿದ್ದು ಈ ಹಣ್ಣಿನ ಮೇಲೆ ಮುಳ್ಳುಗಳು ಇರುತ್ತವೆ. ನೋಡಲು ದೊಡ್ಡದಾಗಿ ಕಾಣುತ್ತದೆ. ಈ ಮರದ ಎಲೆಗಳು, ಹಣ್ಣು ಎಲ್ಲವುಗಳ ಉಪಯೋಗ ಕ್ಯಾನ್ಸರ್ ರೋಗ ತಡೆಗಟ್ಟುವಲ್ಲಿ ತುಂಬಾ ಉಪಯುಕ್ತ. ಈ ಹಣ್ಣಿನ ರುಚಿ ವಾಸನೆ ಎಲ್ಲವೂ ಸೀತಾಫಲ ಹಣ್ಣಿಗಿಂತ ಭಿನ್ನವಾಗಿರುತ್ತದೆ. ಇಂದಿನ ಲೇಖನದಲ್ಲಿ ಈ ಹಣ್ಣಿನ ಸಲಾಡ್ ಮಾಡುವ ವಿಧಾನ ನೋಡೋಣ. ಈ ಸಲಾಡ್ ತಿನ್ನುವುದರಿಂದ ಮೇಲೆಯೇ ಹೇಳಿದ ರೀತಿ ಕ್ಯಾನ್ಸರ್ ಕೋಶಗಳು ಇತರೆ ದೇಹದ ಭಾಗಗಳ ಕೋಶಗಳಿಗೆ ಹರಡದಂತೆ ತಡೆಯಲು ಸಹಾಯಕಾರಿ.

ನಮ್ಮ ಪೂರ್ವಿಕರು ಹಣ್ಣುಗಳ ಹೆಸರುಗಳನ್ನು ಇಡುವಾಗ ತುಂಬಾ ಒಳ್ಳೆಯ ಹೆಸರುಗಳನ್ನು ಇಟ್ಟಿರುತ್ತಾರೆ. ಉದಾಹರಣೆಗೆ ರಾಮಫಲ, ಸೀತಾಫಲ, ಲಕ್ಷ್ಮಣಫಲ, ಹನುಮಫಲ. ಹೀಗೆ ಹೆಸ್ರು ಇಡಲು ಕಾರಣ ಆ ಹಣ್ಣಿನಲ್ಲಿರುವ ಶಕ್ತಿ. ಆ ಶಕ್ತಿಗೆ ಅನುಸಾರವಾಗಿ ಹಣ್ಣಿನ ಹೆಸರನ್ನು ಇಡುತ್ತಿದ್ದರು. ಈ ಹಣ್ಣು ಇತ್ತೀಚೆಗೆ ಬೆಳಕಿಗೆ ಬಂದಿದೆ, ಆದರೆ ಈ ಹಣ್ಣು ಪುರಾತನ ಕಾಲದಿಂದಲೂ ಇದೆ .ಆದರೆ ನಮಗೆ ಈ ಹಣ್ಣಿನ ಪರಿಚಯ, ಉಪಯೋಗ ತಿಳಿದಿಲ್ಲ ಅಷ್ಟೇ. ಇದನ್ನು ಶ್ರೀಲಂಕಾದಲ್ಲಿ ಪ್ರತಿನಿತ್ಯ ಹಣ್ಣಿನ ರೀತಿಯಲ್ಲೇ ತಿನ್ನುವ ಮೂಲಕ ಉಪಯೋಗ ಮಾಡುತ್ತಾರೆ. ಇದು ಒಂದು ಅಪರೂಪದ ಹಣ್ಣಾಗಿದ್ದು, ಬೇಕಾದಷ್ಟು ಸಮಸ್ಯೆಗೆ ಚಿಕಿತ್ಸೆಯನ್ನು ನೀಡುವಂತಹ ಗುಣ ಕಂಡುಬರುತ್ತದೆ ಹಾಗೂ ಅನೇಕ ರೋಗಗಳು ನಮ್ಮ ಬಳಿ ಬರದೆಯೆ ಇರುವ ಹಾಗೆ ರಕ್ಷಿಸುವ ಗುಣವೂ ಶಕ್ತಿಯೂ ಇದೆ. ಇದರಲ್ಲಿ ಪೊಟ್ಯಾಸಿಯಂ, ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ಪ್ರೊಟೀನ್, ವಿಟಮಿನ್ ಸಿ ಸಮೃದ್ಧವಾಗಿದೆ. ಇಷ್ಟೆಲ್ಲಾ ಇರುವುದರಿಂದ ದೇಹಕ್ಕೆ ಒಳ್ಳೆಯ ರೋಗ ನಿರೋಧಕ ಶಕ್ತಿಯನ್ನು ಕೊಡುವಂಥದ್ದು. ಇದರ ಜೊತೆ ಇದೊಂದು ಶಕ್ತಿವರ್ಧಕ ಎಂದು ಹೇಳಬಹುದು. ಒಳ್ಳೆಯ ಟಾನಿಕ್ ರೀತಿ ಈ ಹಣ್ಣು ನಮಗೆ ಸಹಾಯ ಮಾಡುತ್ತದೆ. ಇನ್ನೂ ಓಸ್ತ್ರಿಯೋ ಫೋರಿಸಿಸ್ ಎನ್ನುವಂಥ ರೋಗಗಳು ನಮ್ಮ ಬಳಿ ಬಾರದಂತೆ ನಮ್ಮ ದೇಹವನ್ನು ಜೋಪಾನ ಮಾಡುತ್ತದೆ. ಮಧುಮೇಹಿಗಳಿಗೆ ಈ ಹಣ್ಣು ಒಂದು ವರ ಇದ್ದಂತೆ. ಇದನ್ನು ನಿಯಮಿತವಾಗಿ ಅಥವಾ ಯವಾಗದರೂ ಸಿಕ್ಕಿದಾಗ ಈ ಹಣ್ಣನ್ನು ಬಳಕೆ ಮಾಡುವುದು ಶ್ರೇಷ್ಠವಾದದ್ದು.

ಎಲ್ಲಕ್ಕಿಂತ ವಿಶೇಷವಾಗಿ ಈ ಹಣ್ಣಿನ ಉಪಯೋಗ ಇರುವಂಥದ್ದು ಕ್ಯಾನ್ಸರ್ ಕಾಯಿಲೆಗೆ. ಅನೇಕ ರೀತಿಯ ಕ್ಯಾನ್ಸರ್ ಗಳನ್ನು ಗುಣವಾಗುತ್ತದೆ. ಕ್ಯಾನ್ಸರ್ ಕೋಶಗಳು ಇತರೆ ಭಾಗಗಳಿಗೆ ಹಾನಿ ಉಂಟು ಮಾಡದಂತೆ ಹಾಗೂ ಆ ಜೀವಕೋಶಗಳನ್ನು ನಾಶ ಪಡಿಸುವ ಶಕ್ತಿಯಿದೆ ಈ ಹಣ್ಣಿಗೆ. ಹಾಗಾಗಿ ಈ ಸಮಸ್ಯೆ ಇದ್ದವರು ಈ ಹಣ್ಣು ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಂಡು ಇದರ ಬಳಕೆ ಮಾಡುವುದರಿಂದ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಆದರೂ ಗುಣ ಪಡಿಸಿಕೊಳ್ಳಬಹುದು. ಸಂಧಿವಾತ ಸಮಸ್ಯೆ ಇರುವಂತವರಿಗೆ ಕೀಲು ನೋವುಗಳಿಗೆ ಒಳ್ಳೆಯ ಶಕ್ತಿ ತುಂಬಿ, ಕೀಲುಗಳಲ್ಲಿ ಬಲ ಉಂಟು ಮಾಡುವುದರಿಂದ ನೋವುಗಳೂ ಕೂಡ ನಿವಾರಣೆ ಆಗುತ್ತದೆ. ಇನ್ನೂ ಮೂಳೆಗಳ ಸವಕಲು ಸಮಸ್ಯೆಗೆ ಕೂಡ ಇದು ಚಿಕಿತ್ಸೆ ನೀಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಮೂತ್ರಕೋಶಕ್ಕ ಸಂಬಂಧ ಇರುವಂತಹ ಅಂದರೆ ಮೂತ್ರ ಕೋಶದ ಇನ್ಫೆಕ್ಷನ್, ಮೂತ್ರ ವಿಸರ್ಜನೆ ಮಾಡುವಾಗ ಉರಿಯುವ ಭಾವನೆ, ಉರಿಮೂತ್ರ ಶಮನ ಮಾಡುತ್ತದೆ. ಇಷ್ಟೊಂದು ಉಪಯೋಗ ಇರುವ ಈ ಹಣ್ಣನ್ನು ಹುಡುಕುವುದು ತುಂಬಾ ಸುಲಭ. ಕೆಲವೊಂದು ನರ್ಸರಿಗಳಲ್ಲಿ ಈ ಸಸಿ ಸಿಗುತ್ತದೆ. ಈ ಸಸಿಯನ್ನು ತಂದು ಮನೆಯ ಮುಂದೆ ಜಾಗ ಇದ್ದರೆ ಅಲ್ಲಿ ನೆಟ್ಟು ಬೆಳೆಸಿದರೆ ಮನೆಯ ಮುಂದೆಯೇ ನಿಮಗೆ ಈ ಹಣ್ಣು ಸಿಕ್ಕಂತೆ ಆಗುತ್ತದೆ. ಸಲಾಡ್ ಮಾಡುವ ವಿಧಾನ- ಹಣ್ಣಿನ ಮಧ್ಯ ಭಾಗ ಸೀಳಿ ಆ ದಿಂಡನ್ನು ತೆಗೆದು, ಬರೀ ಹಣ್ಣಿನ ತಿರುಳನ್ನು ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿ ಅದರ ಮೇಲೆ ಕರಿ ಮೆಣಸಿನ ಪುಡಿ, ಕಪ್ಪು ಉಪ್ಪು, ಏಲಕ್ಕಿ ಪುಡಿ ಉದುರಿಸಿ ನಂತರ ಸ್ವಲ್ಪ ಜೇನತುಪ್ಪ ಸೇರಿಸಿ ಚೆನ್ನಾಗಿ ಕಲಸಿದರೆ ಲಕ್ಷ್ಮಣ ಫಲ ಹಣ್ಣಿನ ಸಲಾಡ್ ರೆಡಿ. ಇದರ ಉಪಯೋಗ ಪಡೆಯುವ ಮೊದಲು ಈ ಮರ ತುಂಬಾ ವಿರಳ ಆದ್ದರಿಂದ ಮೊದಲು ಈ ಹಣ್ಣಿನ ಮರವನ್ನು ಬೆಳೆಸುವುದರ ಬಗ್ಗೆ ಗಮನ ಹರಿಸೋಣ, ಹಣ್ಣು ಬಿಟ್ಟ ನಂತರ ನೀವು ತಿಂದು ನಾಲ್ಕು ಜನಕ್ಕೆ ಕೊಟ್ಟರೆ ಎಲ್ಲರೂ ಆರೋಗ್ಯವಾಗಿ ಇರಬಹುದಲ್ಲವೇ?. ಶುಭದಿನ.

Leave a Reply

Your email address will not be published. Required fields are marked *