ನಮಸ್ತೇ ಪ್ರೀತಿಯ ಗೆಳೆಯರೇ, ಒಣ ಕೊಬ್ಬರಿ ಮತ್ತು ಹಸಿ ಕೊಬ್ಬರಿ ಅಂತ ಎರಡು ವಿಧಗಳಿವೆ. ನಿಮಗೆ ಗೊತ್ತೇ ಹಸಿ ಕೊಬ್ಬರಿಗಿಂತ ಒಣಗಿದ ಕೊಬ್ಬರಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಷ್ಟೇ ಅಲ್ಲದೇ ಈ ಒಣ ಕೊಬ್ಬರಿ ಇಂದ ರುಚಿಯಾದ ಅಡುಗೆಯನ್ನು ಮಾಡಬಹುದು. ಹೌದು ಆದರೆ ಕೇವಲ ಅಡುಗೆಗೆ ಮಾತ್ರವಲ್ಲದೇ ಹಲವಾರು ಬಗೆಯ ಉಪಯೋಗಗಳನ್ನು ಹೊಂದಿದೆ. ಒಣಕೊಬ್ಬರಿ ಅನ್ನುವುದು ಕೇವಲ ಅಡುಗೆಗೆ ಮತ್ತು ಪೂಜೆ ಪುರಸ್ಕಾರಗಳಲ್ಲಿ ಮಾತ್ರವಲ್ಲದೆ ಮನುಷ್ಯನ ಆರೋಗ್ಯಕ್ಕೂ ಕೂಡ ತುಂಬಾನೇ ಒಳಿತು. ಹಾಗೂ ಅತಿ ಉಪಯುಕ್ತವಾದ ಅಡುಗೆ ಪದಾರ್ಥಗಳಲ್ಲಿ ಒಂದಾಗಿದೆ ಅಂತ ಹೇಳಬಹುದು.
ಈ ಒಣಕೊಬ್ಬರಿಯನ್ನು ಚಿಕ್ಕವರಿನಿಂದ ಹಿಡಿದು ದೊಡ್ಡವರವರೆಗೂ ತಿನ್ನಬಹುದು. ಇದು ಪ್ರತಿಯೊಬ್ಬರ ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗಾದರೆ ಒಣಕೊಬ್ಬರಿ ಅನ್ನು ಹಾಗೆಯೇ ಸೇವನೆ ಮಾಡಬೇಕೇ? ಅಥವಾ ಒಣಕೊಬ್ಬರಿಯನ್ನು ಬೆಲ್ಲದ ಜೊತೆಗೆ ತಿಂದರೆ ಏನಾಗುತ್ತದೆ ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ.

ಇಡೀ ಜಗತ್ತಿನಲ್ಲಿ ಉಪಯೋಗಿಸುವ ಆರೋಗ್ಯಕರ ಗುಣಗಳು ಈ ಒಣ ಕೊಬ್ಬರಿಯಲ್ಲಿ ಅಡಗಿದೆ. ಹೌದು ಒಣಕೊಬ್ಬರಿ ಅನ್ನುವುದು ಪೌಷ್ಟಿಕಾಂಶಗಳ ಆಗರವಾಗಿದೆ. ಒಣಕೊಬ್ಬರಿಯಲ್ಲಿ ಇರುವ ಅಂಶಗಳು ಅಂದರೆ ನಾರು ತಾಮ್ರ ಕೊಬ್ಬಿನ ಅಂಶ ಸಲೊನಿಯಂ ಅಂಶವು, ಹೇಳರವಾಗಿದೆ. ಕೊಬ್ಬರಿ ರುಚಿಯಲ್ಲಿ ಚೆನ್ನಾಗಿರುತ್ತದೆ. ಅತಿಯಾಗಿ ಸಿಹಿಯಾಗಿ ಇರುವುದಿಲ್ಲ ಕಹಿಯಾಗಿ ಇರುವುದಿಲ್ಲ, ತಿನ್ನಲು ಬಲು ಚೆನ್ನಾಗಿರುತ್ತದೆ. ಹಾಗಾದರೆ ಬನ್ನಿ ಒಣಕೊಬ್ಬರಿಯ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳಿ. ಒಣ ಕೊಬ್ಬರಿ ತಿನ್ನುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಹಾಗೂ ಮಲಬದ್ಧತೆ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ ಅಷ್ಟೇ ಅಲ್ಲದೇ ಪುರುಷರಿಗೆ ಇದು ಅತ್ಯದ್ಭುತವಾದ ಆಹಾರ ಪದಾರ್ಥ ಅಂತ ಹೇಳಬಹುದು. ನಿಯಮಿತವಾಗಿ ಒಣಕೊಬ್ಬರಿ ತಿನ್ನುವುದರಿಂದ ಪುರುಷರಲ್ಲಿ ಕಾಡುವ ಬಂಜೆತನ ಸಮಸ್ಯೆಯನ್ನು ನೀಗಿಸುತ್ತದೆ. ಈ ಬಂಜೆತನ ಸಮಸ್ಯೆಯನ್ನು ನಾವು ಹೆಚ್ಚಾಗಿ ಮಹಿಳೆಯರಲ್ಲಿ ಕಾಣುತ್ತೇವೆ ಆದರೆ ನಿಮಗೆ ಗೊತ್ತೇ ಬಂಜೆತನ ಸಮಸ್ಯೆ ಅನ್ನುವುದು ಪುರುಷರಲ್ಲಿ ಕೂಡ ಕಾಣಬಹುದು. ಈ ಒಣಕೊಬ್ಬರಿಯಲ್ಲಿ ಸಲೊನಿಯಂ ಎಂಬ ಅಂಶವು ಪುರುಷರ ಫಲವತ್ತತೆ ಅನ್ನು ಹೆಚ್ಚಿಸುತ್ತದೆ ಹಾಗೂ ಬಂಜೆತನವನ್ನು ದೂರ ಮಾಡುತ್ತದೆ.

ಪ್ರತಿ 28 ಗ್ರಾಮ್ ಒಣಕೊಬ್ಬರಿಯಲ್ಲಿ 5.2 ಮೈಕ್ರೋ ಸಲೊನಿಯಂ ಎಂಬ ಅಂಶವು ಇರುತ್ತದೆ. ಇದು ಮನುಷ್ಯರಲ್ಲಿ ಕಾಡುವ ರಕ್ತಹೀನತೆ ಸಮಸ್ಯೆ ಯನ್ನು ದೂರ ಮಾಡುತ್ತದೆ. ಈ ರಕ್ತ ಹೀನತೆ ಸಮಸ್ಯೆ ಅನ್ನುವುದು ಕಬ್ಬಿನಾಂಶ ಕೊರತೆ ಇಂದ ಬರುತ್ತದೆ. ಇದನ್ನು ನಿಯಂತ್ರಣ ಮಾಡಲು ನಿತ್ಯವೂ ಒಣಕೊಬ್ಬರಿ ಸೇವನೆ ಮಾಡುವುದು ಸೂಕ್ತ ಇದರಿಂದ ದೇಹದಲ್ಲಿ ರಕ್ತದ ಉತ್ಪತ್ತಿ ಆಗುತ್ತದೆ. ಒಣಕೊಬ್ಬರಿಯಲ್ಲಿ ಅನೇಕ ಪೌಷ್ಟಿಕಾಂಶ ಮತ್ತು ಇನ್ನಿತರ ಅಂಶಗಳು ಅಡಗಿರುವುದರಿಂದ ಅನೇಕ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ನೋಡಿಕೊಳ್ಳುತ್ತದೇ ಇದರಿಂದ ಕ್ಯಾನ್ಸರ್ ಎಂಬ ಮಹಾಮಾರಿ ರೋಗವು ಹತ್ತಿರಕೂಡ ಬರುವುದಿಲ್ಲ.
ಇನ್ನು ಈಗಿನ ಅನೇಕ ಯುವಜನತೆಯು ಯಾವುದೇ ಒಂದು ಕೆಲಸವನ್ನು ಮಾಡಲು ಆಸಕ್ತಿ ತೋರದೆ ತುಂಬಾನೇ ನಿಶ್ಶಕ್ತಿ ನಿರಾಕರಣೆ ಶಕ್ತಿ ಇಲ್ಲದಂತೆ ಆಡುತ್ತಾರೆ, ಅಂಥವರು ಒಣಕೊಬ್ಬರಿ ಜೊತೆಗೆ ಬೆಲ್ಲವನ್ನು ತಿನ್ನುವುದರಿಂದ ನಿಶ್ಯಕ್ತಿ ಅನ್ನುವುದು ದೂರವಾಗುತ್ತದೆ. ಹೀಗಾಗಿ ಒಣಕೊಬ್ಬರಿ ನಿತ್ಯವೂ ತಿನ್ನುವ ಅಭ್ಯಾಸವನ್ನು ರೂಢಿಸಿ ಕೊಳ್ಳಿ. ಜೊತೆಗೆ ಈ ಅದ್ಭುತವಾದ ಆರೋಗ್ಯಕರ ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ. ಇದರಿಂದಾಗುವ ಲಾಭಗಳನ್ನು ಪಡೆದುಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *