ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸೇರಿದಂತೆ ಭಾರತದ ವಿವಿಧ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗಾಗಿ IBPS ನೇಮಕಾತಿ ಸಂಸ್ಥೆಯು ಅಧಿಸೂಚನೆ ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕೆ ನಾವು ವಯೋಮಿತಿಯನ್ನು ನೋಡುವುದಾದರೆ .

ಆಫೀಸ್ ಅಸಿಸ್ಟೆಂಟ್ 18-28 ವರ್ಷ, ಆಫೀಸರ್ ಸ್ಕೇಲ್ 1 18-30 ವರ್ಷ,ಆಫೀಸರ್ ಸ್ಕೆಲ್ 2 : 21-32 ವರ್ಷ ,ಆಫೀಸರ್ ಸ್ಕೆಲ್ 3 : 21-40 ವರ್ಷ ಇನ್ನು ಯಾವುದೇ ಕೆಲಸವಾದರೂ ಕೂಡ ವಯೋಮಿತಿ ಇದರಲ್ಲಿ ಸಡಿಲಿಕೆಯನ್ನು ನಾವು ಕಾಣುತ್ತೇವೆ ವಯೋಮಿತಿ ಸಡಿಲಿಕೆ .ಒಬಿಸಿ ಅಭ್ಯರ್ಥಿಗಳಿಗೆ ~ 03 ವರ್ಷ ಸಡಿಲಿಕೆ ಪ.ಜಾತಿ, ಪ.ಪಂ ~ 05 ವರ್ಷ ಸಡಿಲಿಕೆ,ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ~ 10 ವರ್ಷ ಸಡಿಲಿಕೆ.ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ನೀಡಲಾಗಿದೆ.

ಆಯ್ಕೆ ವಿಧಾನ ನಾವು ನೋಡುವುದಾದರೆ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಹಾಗೆ ಇನ್ನೊಂದು ಉತ್ತಮವಾದ ಅವಕಾಶವೇನೆಂದರೆ ನಾವು ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಸರ್ಕಾರ ಒದಗಿಸಿ ಕೊಟ್ಟಿದೆ. ಇದರಿಂದ ಎಷ್ಟು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಬಹಳಷ್ಟು ಸಹಾಯವಾಗುತ್ತದೆ. ಇನ್ನು ನೀವು ಅರ್ಜಿ ಸಲ್ಲಿಸುವ ವಿಧಾನವನ್ನು ಗಮನವಿಟ್ಟು ನೋಡಬೇಕು

ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಬಿಪಿಎಸ್ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಇದಕ್ಕೆ ನೀವು ನಿಮ್ಮ ಸಮೀಪ ಇರುವಂತಹ ಯಾವುದಾದರೂ ಇಂಟರ್ನೆಟ್ ಅಂಗಡಿಗೆ ಹೋಗಿ ಅವರ ಬಳಿ ನೀವು ಹಣವನ್ನು ಕೊಟ್ಟರೆ ಸಾಕು ಅವರೇ ಎಲ್ಲವನ್ನು ಕೂಡ ಹಾಕುತ್ತಾರೆ. ಅರ್ಜಿ ಶುಲ್ಕವನ್ನು ನಾವು ನೋಡುವುದಾದರೆ ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು ಉಳಿದ ಅಭ್ಯರ್ಥಿಗಳು ~ ರೂ. 850 ಶುಲ್ಕ ಪಾವತಿಸುವ ವಿಧಾನ

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು. ಇನ್ನು ಖಾಲಿ ಇರುವ ಹುದ್ದೆಯ ಯಾವ್ಯಾವು ಎಂದು ನಾವು ನೋಡುವುದಾದರೆ ಆಫೀಸ್ ಅಸಿಸ್ಟೆಂಟ್ ,ಆಫೀಸರ್ ಸ್ಕೆಲ್ 1 ,ಆಫೀಸರ್ ಸ್ಕೆಲ್ 2 ,ಆಫೀಸರ್ ಸ್ಕೇಲ್ 3 ಒಟ್ಟು ಹುದ್ದೆಗಳ ಸಂಖ್ಯೆ ಖಾಲಿ ಇರುವುದನ್ನು ನಾವು ನೋಡುವುದಾದರ 8612 ಕರ್ನಾಟಕದಲ್ಲಿ 806 ಹುದ್ದೆಗಳು ಖಾಲಿ ಇದೆ.

ಉದ್ಯೋಗ ಸ್ಥಳ : ಭಾರತದೆಲ್ಲೆಡೆ ವಿದ್ಯಾರ್ಹತೆ :ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕುಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 01/06/2023ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21/06/2023 ಆದಷ್ಟು ಬೇಗನೆ ನೀವು ಕೂಡ ಅರ್ಜಿಯನ್ನು ಸಲ್ಲಿಸಿ, ಈ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ. ಹಾಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *