ದಂಟಿನ ಸೊಪ್ಪಿನ ಬಗ್ಗೆ ಬಹುತೇಕರಿಗೆ ಗೊತ್ತೇ ಇರುವುದಿಲ್ಲ ಅಥವಾ ಕಡಿಮೆ ತಿಳಿದಿರಬಹುದು. ಜನರು ಇದನ್ನು ಬಳಸುವುದು ತುಂಬಾನೇ ವಿರಳ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪೋಷಕಾಂಶಗಳ ವಿಷಯಕ್ಕೆ ಬಂದಾಗ ದಂಟಿನ ಸೊಪ್ಪು ಪೋಷಕಾಂಶಗಳ ಭಂಡಾರವಾಗಿದೆ. ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ಅವರು ವಿವರಿಸಿದ ಅದರ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಾಗುತ್ತವೆ ಎಂದು ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ ಅಲ್ಲವೇ ಹೌದು. ಹಸಿರು ತರಕಾರಿಗಳಲ್ಲಿ ಅದರಲ್ಲೂ ಈ ಹಸಿರು ಸೊಪ್ಪುಗಳನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಹಸಿರು ಸೊಪ್ಪು ಎಂದ ತಕ್ಷಣ ನಮ್ಮ ತಲೆಯಲ್ಲಿ ಹೊಳೆಯುವ ಕೆಲವು ಸೊಪ್ಪುಗಳು ಎಂದರೆ ಅದು ಪಾಲಕ್, ಮೆಂತ್ಯ ಅಥವಾ ಎಲೆಕೋಸು ಎಂದು ಹೇಳಬಹುದು. ಇದರಂತೆಯೇ ಅನೇಕ ಸೊಪ್ಪುಗಳು ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತವೆ.

ದಂಟಿನ ಸೊಪ್ಪು ಅಥವಾ ಹರಿವೆ ಸೊಪ್ಪಿನ ಬಗ್ಗೆ ನೀವು ಕೇಳಿದ್ದೀರಾ ಅದನ್ನು ನೀವು ಎಂದಾದರೂ ನಿಮ್ಮ ಮನೆಯಲ್ಲಿ ಮಾಡಿಕೊಂಡು ತಿಂದಿದ್ದೀರಾ ನಿಮ್ಮ ಉತ್ತರ ಇದಕ್ಕೆ ಹೌದು ಎಂದಾದಲ್ಲಿ ಇದರಿಂದಾಗುವ ಆರೋಗ್ಯ ಪ್ರಯೋಜನಗಳನ್ನು ನಿಮಗೆ ತಿಳಿಸುತ್ತೇವೆ. ಈ ಸೊಪ್ಪಿನಿಂದ ನೀವು ಪಲ್ಯ ಮಾಡಿಕೊಂಡು ತಿನ್ನಬಹುದು ಅಥವಾ ಬೆಳೆ ಸಾರಿನಲ್ಲಿ ಸಹ ಹಾಕಿಕೊಂಡು ಸೇವಿಸಬಹುದು. ಹೀಗೆ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ಹೃದಯವನ್ನು ಆರೋಗ್ಯಕರವಾಗಿಡಲು ಸಹ ಇದು ಸಹಾಯ ಮಾಡುತ್ತದೆ. ದಂಟಿನ ಸೊಪ್ಪಿನ ಬಗ್ಗೆ ಬಹುತೇಕರಿಗೆ ಗೊತ್ತೇ ಇರುವುದಿಲ್ಲ ಅಥವಾ ಕಡಿಮೆ ತಿಳಿದಿರಬಹುದು. ಜನರು ಇದನ್ನು ಬಳಸುವುದು ತುಂಬಾನೇ ವಿರಳ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪೋಷಕಾಂಶಗಳ ವಿಷಯಕ್ಕೆ ಬಂದಾಗ ದಂಟಿನ ಸೊಪ್ಪು ಪೋಷಕಾಂಶಗಳ ಭಂಡಾರವಾಗಿದೆ. ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ಅವರು ವಿವರಿಸಿದ ಅದರ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ. ದಂಟಿನ ಸೊಪ್ಪಿನ ಎಲೆಗಳ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯ. ಹೆಚ್ಚಿನ ನಾರಿನಂಶದಿಂದಾಗಿ, ಈ ಸೊಪ್ಪು/ತರಕಾರಿ ರಕ್ತದಲ್ಲಿನ ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಟೊಕೊಟ್ರಿನಾಲ್ ಗಳು, ಈ ತರಕಾರಿ ಸೊಪ್ಪಿನಲ್ಲಿ ಲಭ್ಯವಿರುವ ಒಂದು ರೀತಿಯ ವಿಟಮಿನ್ ಇ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಲಾಗುತ್ತದೆ.ದಂಟಿನ ಸೊಪ್ಪಿನ ಎಲೆಗಳು ಹೈಪರ್ ಗ್ಲೈಸೆಮಿಕ್ ವಿರೋಧಿ ಚಟುವಟಿಕೆಯನ್ನು ಪ್ರದರ್ಶಿಸುತ್ತವೆ ಮತ್ತು ಇದರಿಂದಾಗಿ, ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *