ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಈಗ ಎಲ್ಲಿ ನೋಡಿದರೂ ಒಂದು ಬರ್ತಡೇ ಸಾಂಗ್ ಸಿಕ್ಕಾಪಟ್ಟೆ ವೈರಲಾಗುತ್ತಾ ಇದೆ. ಕಾಫಿ ನಾಡು ಚಂದು ಅಂತ ಹೇಳಿ ಈಗ ಒಂದು ಟ್ರೆಂಡಿಂಗ್ ಸಾಂಗ್ ಅನ್ನು ಶುರು ಮಾಡಿಬಿಟ್ಟಿದ್ದಾರೆ. ಈ ಒಂದು ಟ್ರೆಂಡಿಂಗ್ ಸಾಂಗ್ ಈಗ ಎಲ್ಲಿ ನೋಡಿದರೂ ಕೂಡ ಎಲ್ಲರ ಬರ್ತಡೆಗೆ ಸ್ಟೇಟಸ್ ಆಗಿಬಿಟ್ಟಿದೆ. ಹೌದು ವಾಟ್ಸಪ್ ಫೇಸ್ಬುಕ್ಕಿನಲ್ಲಿ ಇವರ ಒಂದು ಸಾಂಗ್ ಹಾಕಿ ಎಷ್ಟು ಜನ ಅವರ ನೆಚ್ಚಿನ ಗೆಳೆಯತಿಯರಿಗೆ ಎಲ್ಲರಿಗೂ ಕೂಡ ಈ ಮೂಲಕ ವಿಶ್ ಮಾಡುತ್ತಿದ್ದಾರೆ. ಹಾಗಾದರೆ ನಿಜಕ್ಕೂ ಈ ಕಾಫಿ ನಾಡು ಚಂದು ಯಾರು? ಇವರು ಇಷ್ಟು ಬೇಗ ಇಷ್ಟು ಫೇಮಸ್ ಆಗಲು ಕಾರಣವೇನು? ಎಲ್ಲ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನೋಡುತ್ತಾ ಹೋಗೋಣ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್.

ಹೌದು ಹೆಸರಲ್ಲಿ ಇರುವಂತೆ ಕಾಫಿ ನಾಡು ಚಂದು ಅವರು ಮೂಲತಹ ಚಿಕ್ಕಮಂಗಳೂರು ಜಿಲ್ಲೆಯವರು. ಚಿಕ್ಕಮಂಗಳೂರಿನಲ್ಲಿ 9ನೇ ತರಗತಿ ವ್ಯಾಸಂಗ ಮಾಡಿ ಮುಗಿಸಿರುವಂತಹ ಇವರು ಆಟೋ ಓಡಿಸುತ್ತಾರೆ. ಪ್ರತಿನಿತ್ಯ 700 ರಿಂದ 800 ಸಂಪಾದನೆ ಮಾಡುವ ಚಂದು ಅವರು ನಿಜಕ್ಕೂ ಶಿವಣ್ಣ ಹಾಗೂ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಂತೆ. ಪುನೀತ್ ರಾಜಕುಮಾರ್ ಅವರ ಫೋಟೋ ಒಂದನ್ನು ತಮ್ಮ ಆಟೋ ಮೇಲೆ ಹಾಕಿಕೊಂಡಿರುವಂತಹ ಚಂದ್ರು ಅವರು ಪ್ರತಿನಿತ್ಯ ತಾವು ದುಡಿದ ದುಡ್ಡಿನಲ್ಲಿ ನೂರು ರೂಪಾಯಿ ಹಾಡಿಗೆ ಮತ್ತು ಹೂವಿಗೆ ಬಳಕೆ ಮಾಡುತ್ತಾರೆ ಅಂತೆ. ಅಷ್ಟರ ಮಟ್ಟಿಗೆ ಇವರಿಗೆ ಪುನೀತ್ ರಾಜಕುಮಾರ್ ಅವರು ಅಂದರೆ ಇಷ್ಟವಂತೆ. ಇನ್ನು ಇವರು ಯಾವುದೇ ಹಾಡನ್ನು ಹಾಡಿದರು ಕೂಡ ಪುನೀತ್ ರಾಜಕುಮಾರ್ ಅವರಿಗೆ ನಮನವನ್ನು ಸಲ್ಲಿಸಿ, ನಾನು ಅವರ ಅಪ್ಪಟ ಅಭಿಮಾನಿ ಅಂತ ಹೇಳಿ ತಮ್ಮ ಹಾಡನ್ನು ಶುರು ಮಾಡುತ್ತಾರೆ. ಇವರಿಗೆ ಹಾಡಿನ ಗಂದ ಗಾಳಿ ಗೊತ್ತಿಲ್ಲದೆ ಇದ್ದರೂ ಕೂಡ ಇವರು ಯಾವುದೇ ರೀತಿ ಹಾಡನ್ನು ಹಾಡಿದರು ಕೂಡ ಅದನ್ನು ನೆಗೆಟಿವ್ ಆಗಿ ಒಂದಷ್ಟು ಜನ ಟ್ರೊಲ್ ಮಾಡಿದರು ಕೂಡ ಇವತ್ತು ಸ್ಟಾರ್ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ.

Leave a Reply

Your email address will not be published. Required fields are marked *