ವೀಕ್ಷಕರೆ ನಮಸ್ಕಾರ ಯಾವುದೇ ದೇವಸ್ಥಾನದಲ್ಲಿ ದೇವರ ದರ್ಶನದ ಬಳಿಕ ಭಕ್ತಾದಿಗಳಿಗೆ ಲಾಡು, ಪುಳಿಯೋಗರೆ ಪಂಚ ಕಜ್ಜಾಯ, ಪೊಂಗಲ್ ಇನ್ನಿತರ ತಿನ್ನುವ ವಸ್ತು ಗಳನ್ನು ಪ್ರಸಾದವಾಗಿ ನೀಡುವುದನ್ನು ನಾವೆಲ್ಲರೂ ನೋಡಿದ್ದೇವೆ.ಹಾಗೆಯೇ ಭಕ್ತಾದಿಗಳು ತಮ್ಮ ಕೋರಿಕೆಗಳು ಈಡೇರಿದರೆ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಚಿನ್ನ ಬೆಳ್ಳಿ ಗಳನ್ನು ನೀಡುವುದನ್ನು ನಾವು ಕಂಡಿದ್ದೇವೆ.ಆದರೆ ಇಲ್ಲೊಂದು ಅಪರೂಪದ ದೇವಾಲಯವಿದೆ. ಈ ದೇವಾಲಯದಲ್ಲಿ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಬೆಲೆಬಾಳುವ ಚಿನ್ನ ಬೆಳ್ಳಿಗಳನ್ನೇ ನೀಡ ಲಾಗುತ್ತದೆ. ಹೀಗೆ ಚಿನ್ನ ಬೆಳ್ಳಿ ಗಳನ್ನು ಪ್ರಸಾದದ ರೂಪದಲ್ಲಿ ನೀಡುವುದನ್ನು ನಂಬಲಿಕ್ಕೆ ಸಾಧ್ಯವಿಲ್ಲವಾದರೂ ಇದು ಸತ್ಯ.ಅಂದ ಹಾಗೆ ಈ ದೇವಾಲಯ ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯ. ನಮ್ಮ ಭಾರತ ದೇಶದಲ್ಲಿ ಚಿನ್ನ, ಬೆಳ್ಳಿ ಗಳನ್ನು ಭಕ್ತಾದಿ ಗಳಿಗೆ ನೀಡುವ ಏಕೈಕ ದೇವಾಲಯ ಇದಾಗಿದೆ.

ಈ ಮಹಾಲಕ್ಷ್ಮೀ ದೇವಾಲಯ ಅತ್ಯಂತ ಸಂಪತ್ಭರಿತ ವಾಗಿತ್ತು. ಗರ್ಭಗುಡಿಯಲ್ಲಿ ದೇವರನ್ನು 100 ಕೋಟಿ ಬೆಲೆಬಾಳುವ ಆಭರಣಗಳಿಂದ ಅಲಂಕರಿಸ ಲಾಗಿರುತ್ತದೆ. ಪ್ರತಿ ವರ್ಷ ವೂ ದೇವಾಲಯಕ್ಕೆ ದೇಣಿಗೆ ರೂಪದಲ್ಲಿ ಕೋಟ್ಯಂತರ ರೂಪಾಯಿಗಳ ಹಣ ಸಂಗ್ರಹ ವಾಗುತ್ತದೆ. ಸಂಪತ್ತಿನ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯು ಚಿನ್ನ ಬೆಳ್ಳಿಯ ಆಭರಣಗಳಿಂದ ಸದಾ ಕಾಲ ಮಿಂಚಿ ತ್ತಿರುತ್ತಾಳೆ. ಇಲ್ಲಿಗೆ ಆಗಮಿಸುವ ಭಕ್ತಾದಿಗಳು ತಮ್ಮ ಕೋರಿಕೆ ಈಡೇರಿ ದರೆ ದೇವಾಲಯ ಕ್ಕೆ ಬೆಳ್ಳಿ ಬಂಗಾರಗಳನ್ನೇ ಕಾಣಿಕೆಯಾಗಿ ನೀಡುತ್ತಾರೆ.ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಸಿಗುವ ಚಿನ್ನ ಹಾಗೂ ಬೆಳ್ಳಿಯನ್ನು ಇಲ್ಲಿಗೆ ಬರುವ ಭಕ್ತರಿಗೆ ದೀಪಾವಳಿ ಹಬ್ಬದ 3 ದಿನಗಳು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಪ್ರಸಾದ ಸ್ವೀಕರಿಸಲು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಹರಿದು ಬರುತ್ತಾರೆ.

ದೇವಿಯ ಪ್ರಸಾದ ರೂಪದಲ್ಲಿ ಲಭಿಸುವ ಬಂಗಾರ ಬೆಳ್ಳಿ ಯನ್ನು ತಮ್ಮ ಮನೆಯಲ್ಲಿ ತಂದಿಟ್ಟು ಕೊಂಡರೆ ಶ್ರೀಲಕ್ಷ್ಮಿಯು ತಮ್ಮ ಮನೆಯಲ್ಲೇ ನೆಲೆ ಸುತ್ತಾಳೆ ಎಂಬ ನಂಬಿಕೆ ಭಕ್ತಾಧಿಗಳಲ್ಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೂರು ದಿನಗಳ ಕಾಲ ದೇವಾಲಯವನ್ನು ಹೂಗಳಿಂದ ಅಲಂಕರಿಸುವುದಿಲ್ಲ. ಬದಲಾಗಿ ನಗದು ಹಾಗೂ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಹೊಸದಾಗಿ ಆಭರಣಗಳನ್ನು ಕೊಂಡವರು, ತಮ್ಮ ಆಭರಣಗಳನ್ನು ಧನ ತ್ರಯೋದಶಿ ಎಂದು ದೇವಾಲಯದ ಅರ್ಚಕರಿಗೆ ನೀಡಿ ಗರ್ಭಗುಡಿಯಲ್ಲಿ ಮೂರು ದಿನಗಳ ಕಾಲ ಇರಿಸುತ್ತಾರೆ.3 ದಿನ ಗಳು ಕಳೆದ ನಂತರ ಮತ್ತೆ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಸಂಪ್ರದಾಯ ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಭಕ್ತಾದಿಗಳು ನೀಡಿದ ಆಭರಣಗಳಿಗೆ ಮೂರು ದಿನಗಳ ಕಾಲ ಬಿಗಿ ಭದ್ರತೆ ಒದಗಿಸಲಾಗುತ್ತದೆ.

ಹಿಂದೆ ಈ ಪ್ರದೇಶ ವನ್ನು ಆಳುತ್ತಿದ್ದ ರಾಜರುಗಳು ರಾಜ್ಯದ ಸಂಪತ್ತು ಅಭಿವೃದ್ಧಿ ಆಗ ಲೆಂದು ಈ ದೇವಾಲಯ ಕ್ಕೆ ಅಪಾರ ಪ್ರಮಾಣದ ಬಂಗಾರಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದರು.ಈ ಆಚರಣೆಯು ಇಲ್ಲಿಯ ವರೆಗೂ ಮುಂದುವರೆದಿತ್ತು. ಭಕ್ತಾದಿಗಳು ದೇಣಿಗೆಯಾಗಿ ಬಂಗಾರವನ್ನೇ ನೀಡುತ್ತಾರೆ.ಇದೆ ಬಂಗಾರ ವನ್ನು ಮಹಾ ಪ್ರಸಾದ ವಾಗಿ ಭಕ್ತಾಧಿಗಳಿಗೆ ವಿತರಿಸಲಾಗುತ್ತದೆ. ಈ ದೇವಾಲಯ ದಲ್ಲಿ ನೀಡಲಾದ ಬಂಗಾರ ವನ್ನು ಭಕ್ತರು ಮಾರಾಟ ಮಾಡುವುದಿಲ್ಲ. ಬದಲಾಗಿ ಮನೆಯಲ್ಲೇ ಇಟ್ಟು ಪೂಜೆಯನ್ನು ಮಾಡುತ್ತಾರೆ.ಈ ವಿಶಿಷ್ಟ ಮಹಾಲಕ್ಷ್ಮಿ ಕ್ಷೇತ್ರದ ಮಾಹಿತಿಯನ್ನು ಪಡೆದುಕೊಂಡೆ.

Leave a Reply

Your email address will not be published. Required fields are marked *