ಪ್ರಕೃತಿಯು ಬಹಳಷ್ಟು ವಿಸ್ಮಯಕಾರಿಯಿಂದ ಕೂಡಿದೆ ಇಲ್ಲಿ ನಮಗೆ ದೊರೆಯುವಂತಹ ಎಷ್ಟು ಗಿಡ ಮೂಲಿಕೆಗಳು ನಮ್ಮ ಹಲವಾರು ರೀತಿಯಾದಂತಹ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಆದರೆ ನಮಗೆ ಇದರ ಪ್ರಯೋಜನಗಳು ಸರಿಯಾಗಿ ತಿಳಿದಿರುವುದಿಲ್ಲ ಅಂತಹದೇ ಒಂದು ಅದ್ಭುತವಾದ ಕಾಯಿ ಹಾಗೂ ಎಲೆಯ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ.

ಗುಪ್ಪಟೆ ಗಿಡದ ಹಣ್ಣು ಈ ಒಂದು ಹಣ್ಣಿನ ಹೆಸರನ್ನು ಸಾಮಾನ್ಯವಾಗಿ ಹಳ್ಳಿ ಪ್ರದೇಶದ ಜನರು ಕೇಳಿರುತ್ತಾರೆ ಯಾಕೆಂದರೆ ಅಲ್ಲಿ ಈ ಸಸ್ಯ ಹೆಚ್ಚಾಗಿ ಕಂಡು ಬರುತ್ತದೆ. ಈ ಸಸ್ಯ ನೋಡುವುದಕ್ಕೆ ಸಾಮಾನ್ಯವಾಗಿ ಕಂಡು ಬಂದರು ಕೂಡ ಇದರಲ್ಲಿ ಇರುವ ಔಷಧೀಯ ಮಹತ್ವವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುವುದಂತು ಖಚಿತ.

ಯಾಕೆಂದರೆ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿ ಬೇಕಾದಂತಹ ಎಲ್ಲಾ ರೀತಿಯ ಜೀವಸತ್ವಗಳನ್ನು ಈ ಒಂದು ಹಣ್ಣು ಒಳಗೊಂಡಿದೆ. ಇದು ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ದೇಹದಲ್ಲಿ ರಕ್ತದ ಪ್ರಮಾಣ ಅಧಿಕವಾಗಿ ಇಲ್ಲ ಅಂದರೆ ಮೈ, ಕೈ ನೋವು, ಬರುತ್ತದೆ.

ಪ್ರತಿನಿತ್ಯ ಈ ಗುಪ್ಪಟೆ ಗಿಡದ ಐದು ಹಣ್ಣನ್ನು ಸೇವಿಸುತ್ತಾ ಬಂದರೆ ದೇಹಕ್ಕೆ ಉಪಯುಕ್ತವಾಗಿ ಬೇಕಾಗಿರುವಂತಹ ಹೇರಳವಾದ ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ದೊರೆಯುತ್ತದೆ. ಇನ್ನೂ ಒಂದು ಗಿಡದ ಎಲೆಯನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಅದರ ಜೊತೆಗೆ ಸ್ವಲ್ಪ ಜೀರಿಗೆ,

ನಾಲ್ಕು ಮೆಣಸು, ಹಾಗೂ ಚಿಟಿಕೆ ಅರಿಶಿನ ಪುಡಿ ಮತ್ತು ಸ್ವಲ್ಪ ಬೆಲ್ಲವನ್ನು ಹಾಕಿ ಇವೆಲ್ಲವನ್ನು ಕೂಡ ಕಷಾಯ ಮಾಡಿಕೊಂಡು ಸೇವಿಸಿದರೆ ಮಂಡಿ ನೋವು ಕೈಕಾಲು ನೋವು ಹಾಗೂ ಪಾದಗಳಲ್ಲಿ ಉರಿ ಮುಂತಾದ ರೀತಿಯಾದಂತಹ ನೋವುಗಳು ಉಪಶಮನವಾಗುತ್ತದೆ.

ಅಷ್ಟೇ ಅಲ್ಲದೆ ನಿಮ್ಮ ಕೈ ಕಾಲುಗಳಲ್ಲಿ ಗಾಯವಾಗಿದ್ದರೆ ಈ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ಅರೆದು ಅದರ ರಸವನ್ನು ಗಾಯದ ಮೇಲೆ ಹಚ್ಚುವುದರಿಂದ ಗಾಯಗಳು ಬೇಗನೆ ವಾಸಿಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *