ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನೀವು ಈ ಒಂದು ತಪ್ಪು ಮಾಡಿದ್ದೆ ಆದರೆ ನೀವು ದುಡಿದ ಹಣವೆಲ್ಲ ಖಾಲಿಯಾಗುವುದು ಕಂಡಿತ ಮತ್ತು ಬರೀ ಕಷ್ಟಗಳೆ ಜೀವನದಲ್ಲಿ ತುಂಬಿರುತ್ತದೆ ಮತ್ತು ಹೇಳಲಾಗದಷ್ಟು ದರಿದ್ರ ನಿಮ್ಮಲ್ಲಿ ಕಾಡುತ್ತದೆ ಹೌದು ಸ್ನೇಹಿತರೆ ಎಷ್ಟೋ ಜನರ ಜೀವನದಲ್ಲಿ ಇಂತಹ ಘಟನೆಗಳು ನೋಡಿರುತ್ತೇವೆ ಮೊದಲು ಆ ವ್ಯಕ್ತಿ ಎಲ್ಲ ರೀತಿಯಿಂದಲೂ ಅನುಕೂಲಕರವಾಗಿದ್ದು ಚೆನ್ನಾಗಿ ಇರುತ್ತಾರೆ ಆದರೆ ಕ್ರಮೇಣವಾಗಿ ಅವರು ಆರ್ಥಿಕ ಪರಿಸ್ಥಿತಿ ಆಗಿರಬಹುದು ಮನೆಯ ಪರಿಸ್ಥಿತಿ ಆಗಿರಬಹುದು ಹದಗೆಟ್ಟು ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಅಂತಹ ಸ್ಥಿತಿಗೆ ಬರುತ್ತಾರೆ ಈ ರೀತಿಯಾಗಿ ಎಲ್ಲ ರೀತಿಯಿಂದಲೂ ಅನುಕೂಲತೆಯಿಂದ ಇರುವ ವ್ಯಕ್ತಿಗೆ ಸಮಸ್ಯೆಗೆ ಒಳಗಾಗುತ್ತಾರೆ ಜೀವನದಲ್ಲಿ ಸೋಲನ್ನ ಎದುರಿಸುತ್ತಾನೆ ಎಂದರೆ ಅವನು ಮಾಡುವಂತ ತಪ್ಪುಗಳು ಕಾರಣವಾಗುತ್ತವೆ ಹಾಗಾದರೆ ವ್ಯಕ್ತಿ ಯಾವ ತಪ್ಪಿನಿಂದ ತನ್ನ ಜೀವನದ ಸೋಲಿಗೆ ತಾನೇ ಕಾರಣ ಆಗುತ್ತಾನೆ ಎಂದು ನಾನು ಹೇಳುತ್ತೇನೆ.

ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಬೇರೆಯವರ ಜೊತೆಗೆ ನಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ನಮಗೆ ಇರುವ ಆಸ್ತಿಯ ಬಗ್ಗೆ ಹೇಳಿಕೊಳ್ಳಬಾರದು ಬೇರೆಯವರು ನಾವು ಅನುಕೂಲದಿಂದ ಜೀವನದಲ್ಲಿ ಚೆನ್ನಾಗಿದ್ದೇವೆ ಅಂದರೆ ಬೇರೆಯವರ ಕೆಟ್ಟದೃಷ್ಟಿ ನಮ್ಮ ಮೇಲೆ ಬಿಳುವುದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಆರ್ಥಿಕವಾಗಿ ಸಮಸ್ಯೆಗಳು ಎದುರಾಗುತ್ತಿವೆ ಹಾಗಾಗಿ ನಮ್ಮ ಆರ್ಥಿಕ ವಿಚಾರದ ಬಗ್ಗೆ ಬೇರೆಯವರೊಂದಿಗೆ ಮಾತನಾಡಬಾರದು ಎರಡನೆಯದಾಗಿ ಯಾವುದೇ ಕಾರಣಕ್ಕೂ ನಮ್ಮ ವೃತ್ತಿಜೀವನದ ಬಗ್ಗೆ ನಮ್ಮ ಸಂಪಾದನೆಯ ಬಗ್ಗೆ ಬೇರೆಯವರಲ್ಲಿ ಹೇಳಿಕೊಳ್ಳಬಾರದು ಹೇಳಿಕೊಂಡರೆ ಬೇರೆಯವರ ಸಂಪಾದನೆಗಿಂತ ನಮ್ಮ ಸಂಪಾದನೆ ನಮ್ಮ ಆದಾಯ ಹೆಚ್ಚಾಗಿದ್ದರೆ ಸಾಮಾನ್ಯವಾಗಿ ಅಸೂಯೆ ಹೊಟ್ಟೆಕಿಚ್ಚು ಭಾವನೆ ಮೂಡುತ್ತದೆ ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ನಮ್ಮ ಸಂಪಾದನೆ ಮತ್ತು ಆದಾಯದ ಬಗ್ಗೆ ಬೇರೆಯವರಿಗೆ ಹೇಳಿಕೊಳ್ಳಬಾರದು ಅತಿ ಮುಖ್ಯವಾಗಿ ಯಾವುದೇ ಕಾರಣಕ್ಕೂ ಬೇರೆಯವರ ಪರಿಸ್ಥಿತಿಯನ್ನು ನೋಡಿ ಇನ್ನೊಬ್ಬರ ಜೊತೆ ಮಾತನಾಡಿಕೊಂಡು ಅವರ ಆಡಿಸುವುದು ಅಪಹಾಸ್ಯ ಮಾಡಬಾರದು ಏಕೆಂದರೆ.

ಮುಂದೆ ಒಂದು ದಿನ ಅದೇ ರೀತಿಯಾದ ಪರಿಸ್ಥಿತಿ ನಮಗೆ ಬರಬಹುದು ಮತ್ತು ನಿಮ್ಮ ಜೀವನದ ಅಭಿವೃದ್ಧಿ ಮಾರಕವಾಗಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು ಇನ್ನು ಈ ಒಂದು ತಪ್ಪನ್ನು ಎಷ್ಟು ಮಹಿಳೆಯರು ಮಾಡುತ್ತಾರೆ ಮನೆಗೆ ನಡೆಯುವಂತ ಘಟನೆಗಳ ಬಗ್ಗೆ ಗುಟ್ಟಿನ ಬಗ್ಗೆ ರಹಸ್ಯಗಳ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ ಆದರೆ ಈ ರೀತಿ ಯಾವುದೇ ಕಾರಣಕ್ಕೂ ಮಾಡಬಾರದು ಇದು ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತೆ ಇದರಿಂದ ಘನತೆ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಇನ್ನು ಅತಿ ಮುಖ್ಯವಾಗಿ ಯಾವುದೇ ವ್ಯಕ್ತಿ ಯು ಎಲ್ಲ ತಿಳಿದಿರುವ ಹಾಗೆ ನಡೆದುಕೊಳ್ಳಬಾರದು ಹೌದು ಸ್ನೇಹಿತರೆ ನನಗೆ ಎಲ್ಲ ತಿಳಿದ ಹಾಗೆ ನಾನೇ ಸರ್ವಜ್ಞ ಎಂದು ಜೀವನದಲ್ಲಿ ನಡೆದರೆ ಹಾಳಾಗುವುದು ನಮ್ಮ ಜೀವನವೇ ಹೊರತು ಬೇರೆಯವರ ಜೀವನವಲ್ಲ ಆದ್ದರಿಂದ ಇನ್ನು ಮುಂದೆಯಾದರೂ ಇಂತಹ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ.

Leave a Reply

Your email address will not be published. Required fields are marked *