ದೇಶದ ಅತ್ಯಂತ ಶ್ರೀಮಂತ ರಾಜಕಾರಣಿ ಯಾರು ಗೊತ್ತಾ? ಇವರ ಆಸ್ತಿ ಡಿಕೆಶಿ ಎಂಟಿಬಿ ಕೆಜಿಎಫ್ ಬಾಬುಗಿಂತ ಹಲವು ಪಟ್ಟು ಹೆಚ್ಚು ಇದೆ. ಇವರ ಆದಾಯ ಸಿಎಂ ಸಿದ್ದರಾಮಯ್ಯ ಅವರ ಆಸ್ತಿಗಿಂತ ಹಲವು ಪಟ್ಟು ಜಾಸ್ತಿ ಈ ಕುಬೇರನ ಕತೆ ತುಂಬಾ ಇಂಟರೆಸ್ಟಿಂಗ್ ಆಗಿದೆ. ದೇಶದ ಶ್ರೀಮಂತ ರಾಜಕಾರಣಿ ಯಾರು? ರಾಜಕಾರಣಿಗಳಲ್ಲಿ ಯಾರು ಶ್ರೀಮಂತ ಅಂತ ಗೊತ್ತಾಗೋದು ಎಲೆಕ್ಷನಲ್ಲಿ ಅವರು ಸಲ್ಲಿಸೋ ಆಧಾರದಲ್ಲಿ ಇದರ ಪ್ರಕಾರ ಸದ್ಯ ದೇಶದಲ್ಲಿರೋ ಅತ್ಯಂತ ಶ್ರೀಮಂತ ರಾಜಕಾರಣಿ ಅಂದ್ರೆ ತೆಲಂಗಾಣ ರಾಷ್ಟ್ರೀಯ ಸಮಿತಿ ಅಥವಾ ಭಾರತೀಯ ರಾಷ್ಟ್ರೀಯ ಸಮಿತಿ ಪಕ್ಷದ ಡುಂಡಿ ಪಾರ್ಥ ಸಾರಥಿ ರೆಡ್ಡಿ. ಇವರ ಹೆಸರು ಅಷ್ಟೊಂದು ಫೇಮಸ್ ಇದ್ದಿರಬಹುದು. ಆದರೆ ಆಸ್ತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. 5300 ಕೋಟಿ ಒಳ್ಳೆಯ ಪಾರ್ಥ ಸಾರಥಿ. ಹೌದು, ಪಾರ್ಥ ಸಾರಥಿ ರೆಡ್ಡಿ ಕುಟುಂಬದ ಬಳಿ ಒಂದಲ್ಲ ಎರಡಲ್ಲ ಬರೋ ಬ್ಬರಿ 5300 ಕೋಟಿ ಮೌಲ್ಯದ ಆಸ್ತಿ ಇದೆ.

ಹೀಗಂತ 2020 ರಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಇದರೊಂದಿಗೆ ಶ್ರೀಮಂತಿಕೆ ಯಲ್ಲಿ ಡಿ ಕೆ ಶಿವಕುಮಾರ್, ಎಂ ಟಿ ಬಿ ನಾಗರಾಜ್ ಮತ್ತು ಕೆಜಿಎಫ್ ಬಾಬು ರನ್ನ ಸೈಡ್ ಹೊಡೆದಿದ್ದಾರೆ. ಈ ಮೂವರ ಆಸ್ತಿ ಸೇರಿಸಿದರು ಪಾರ್ಥಸಾರಥಿಯ ಆಸ್ತಿಗೆ ಸಹ ಸೇರುವುದಿಲ್ಲ .ಆಸ್ತಿಯಲ್ಲಿ ದೊಡ್ಡ ಪಾಲು ಏನು ಗೊತ್ತಾ? ಪಾರ್ಥ ಸಾರಥಿ ಕುಟುಂಬದ ಒಟ್ಟು ಆಸ್ತಿಯಲ್ಲಿ ದೊಡ್ಡ ಪಾಲು ಇರೋದು ಶೇರುಗಳದ್ದು 5300 ಕೋಟಿ ಆಸ್ತಿಯಲ್ಲಿ 4000 ಕೋಟಿ ರೂಪಾಯಿಯನ್ನ ವಿವಿಧ ಕಂಪನಿಗಳಲ್ಲಿ ಷೇರುಗಳ ರೂಪದಲ್ಲಿ ಹೊಂದಿದ್ದಾರೆ. ಅದು ಬಿಟ್ರೆ ವಿವಿಧ ವ್ಯಕ್ತಿ ಮತ್ತು ಕಂಪನಿಗಳಿಗೆ 511 ಕೋಟಿ ಸಾಲ ಕೊಟ್ಟಿದ್ದಾರೆ. ಉಳಿದಂತೆ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ ಮನೆಗಳ ರೂಪದಲ್ಲಿ 85 ಕೋಟಿ ಆಸ್ತಿ ಹೊಂದಿದ್ದಾರೆ.

ಬರೋಬ್ಬರಿ 17 ಕೆಜಿ ಚಿನ್ನ ಭರಣ 11 ಕೋಟಿ ಮೌಲ್ಯದ ವಜ್ರ ಗಳು. ಪಾರ್ಥ ಸಾರಥಿ ರೆಡ್ಡಿ ಮತ್ತು ಪತ್ನಿ ಬಳಿ ಬರೋ ಬ್ಬರಿ 17 ಕೆಜಿಯಷ್ಟು ಚಿನ್ನಾಭರಣ ಗಳಿವೆ. ಇದರ ಮೌಲ್ಯ ₹8,00,00,000. ಇದಲ್ಲದೆ 1000, ಕ್ಯಾರೆಟ್‌ನಷ್ಟು ವಜ್ರಗಳಿವೆ. ಇದರ ಮೌಲ್ಯ ಹನ್ನೊಂದು ಕೋಟಿ ರೂಪಾಯಿ. ಕೆಲ ಶ್ರೀಮಂತ ರಾಜಕಾರಣಿಗಳು ಸಾವಿರಾರು ಕೋಟಿ ಆಸ್ತಿ ಘೋಷಿಸಿಕೊಂಡು ನೂರಾರು ಕೋಟಿಯ ಸಾಲ ಬಾಕಿ ಇದೆ ಅಂತ ತೋರಿಸಿಕೊಳ್ತಾರೆ. ಆದ್ರೆ ಪಾರ್ಥ ಸಾರಥಿ ರೆಡ್ಡಿ ಬಳಿ 5300 ಕೋಟಿ ಆಸ್ತಿ ಇದು ಕೇವಲ 73,00,000 ದಷ್ಟು ಸಾಲ ತೋರಿಸಿಕೊಂಡಿದ್ದಾರೆ. ಪಾರ್ಥ ಸಾರಥಿ ಬಳಿ ಸ್ವಂತ ಕಾರಿಲ್ಲ. ಬೇರೆ ವಾಹನಗಳು ಕೂಡ ಇಲ್ಲ. ಹೀಗಂತ ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೀವನ ವಿಡೀ ಸಂಪಾದಿಸಿದ ಒಟ್ಟು ಆಸ್ತಿನೇ ಸುಮಾರು 51,00,00,000 ಆದರೆ ಪಾರ್ಥ ಬರಿ 1 ವರ್ಷ ದಲ್ಲಿ ನೂರಾ ಮೂವತೈದು ಕೋಟಿ ದುಡಿದ್ದಾರೆ.

Leave a Reply

Your email address will not be published. Required fields are marked *