ನಿಮ್ಮ ದೇಹಕ್ಕೆ ಬೇಕಾದತಂಹ ಅನೇಕ ಔಷಧಿಯ ಗುಣಗಳನ್ನು ಹೊಂದಿರುವ ಈ ಸೊಪ್ಪಿನ ಬಗ್ಗೆ ನೀವು ತಿಳಿದುಕೊಳ್ಳಬೇಕು. ಹೌದು, ಈ ಸೊಪ್ಪುನ್ನು ಸಾಮಾನ್ಯವಾಗಿ ತಿಪ್ಪೆಗಳಲ್ಲಿ, ತೋಟದ ಬಯಲುಗಳಲ್ಲಿ, ಮನೆಯ ಹಿತ್ತಲಿನಲ್ಲಿ ಹೀಗೆ ನೀವು ಅನೇಕ ಕಡೆಗಳಲ್ಲಿ ಕಾಣಬಹುದು.

ಈ ಸೊಪ್ಪಿನ ಗಿಡದಲ್ಲಿ ಎರಡು ರೀತಿ ಸೊಪ್ಪಿನ ಗಿಡವನ್ನು ನಾವು ಕಾಣುತ್ತೆವೆ. ಈ ಗಿಡವು ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಳೆಯುವ ಸಸ್ಯವಾಗಿದೆ. ಅದರಲ್ಲಿ ಒಂದು ಗಿಡ ಕಪ್ಪು ಹಣ್ಣುಗಳನ್ನು ನೀಡಿದರೆ, ಮಾತ್ತೊಂದು ಗಿಡ ಕೆಂಪು ಹಣ್ಣುಗಳನ್ನು ನೀಡುತ್ತದೆ. ಈ ಗಿಡದಲ್ಲಿ ಕಪ್ಪು ಹಣ್ಣು ನೀಡುವ ಗಿಡವನ್ನು ಎಲ್ಲರೂ ಬಳಸುತ್ತಾರೆ. ಈ ಗಿಡಕ್ಕೆ ಅನೇಕ ಹೆಸರುಗಳು ಸಹ ಇವೆ.

ಈ ಗಿಡವನ್ನು ಗಣಿಕೆ ಗಿಡ, ಧ್ವಾಂಕ್ಷ ಮಾಚಿ, ಕಾಕ ಮಾಚಿ, ಕಾಕವ್ಯ ಮತ್ತು ಕಾಶೀಗಿಡ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ಗಿಡದಲ್ಲಿ ಬಿಡುವ ಕಪ್ಪು ಹಣ್ಣು ಬಹಳ ರುಚಿಯಾಗಿದ್ದು, ಸ್ವಲ್ಪ ಹುಳಿಯಾಗಿರುತ್ತದೆ. ಈ ಹಣ್ಣು ನಾವು ನೇರವಾಗಿ ಸಹ ಸೇವಿಸಬಹುದು.

ಕಾಶೀ ಸೊಪ್ಪಿನ ಗಿಡದ ಹಣ್ಣು ತಿನ್ನುವುದರಿಂದ ದೇಹಕ್ಕೆ ಹೆಚ್ಚು ಕಬ್ಬಿಣ ಅಂಶ ಸಹ ಸಿಗುತ್ತದೆ. ಇನ್ನು ಇದರಲ್ಲಿ ವಿಟಮಿನ್ ಬಿ ಮತ್ತು ಸಿ ಎಂಬ ಅಂಶವು ಸಹ ಹೆಚ್ಚಾಗಿ ಸಿಗುತ್ತದೆ. ನಿಮ್ಮ ಬಾಯಿಯು ಹುಣ್ಣು ಇರುವಾಗ ಕಾಶೀ ಸೊಪ್ಪಿನ ಪಲ್ಯ ಅಥವಾ ಸೊಪ್ಪಿನ ಸಾಂಬರು ಮಾಡಿ ಸೇವಿದರೆ ಬಹಳ ಬೇಗ ಬಾಯಿ ಹುಣ್ಣು ಗುಣವಾಗುತ್ತದೆ.

ಮಹಿಳೆಯರು ಅತಿಯಾದ ಮುಟ್ಟಿನ ಸಮಯದಲ್ಲಿ ಗಣಿಕೆ ಸೊಪ್ಪು ಪಲ್ಯ ಅಥವಾ ಸಾಂಬರ್ ಮಾಡಿ ತಿನ್ನುವುದರಿಂದ ಬಹಳ ಬೇಗ ಸ್ರಾವ ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ದೇಹದಲ್ಲಿ ಬಹಳ ಉಷ್ಣಾಂಶ ಹೆಚ್ಚಾಗಿ, ಮೂಗಿನಲ್ಲಿ ರಕ್ತಸ್ರಾವ ಆಗುವ ಸಮಯದಲ್ಲಿ ಈ ಸೊಪ್ಪಿನ ಪಲ್ಯ ಸೇವನೆ ಮಾಡಿದರೆ ಬಹಳ ಬೇಗ ನಿಮಗೆ ಸ್ರಾವ ಕಡಿಮೆಯಾಗುತ್ತದೆ.

ನಿಮ್ಮ ದೇಹದಲ್ಲಿ ರಕ್ತವು ಕೆಟ್ಟು ಸಣ್ಣ ಸಣ್ಣ ಕುರುಗಳು ಕಾಣಿಸಿಕೊಂಡ ಸಮಯದಲ್ಲಿ ನೀವು ಗಣಿಕೆ ಸೊಪ್ಪು ಚೆನ್ನಾಗಿ ಬೇಯಿಸಿ ಅದರಿಂದ ಬಂದ ರಸದ ಜೊತೆಗೆ ಸ್ವಲ್ಪ ಅರಿಶಿನ ಮಿಶ್ರಣ ಮಾಡಿ ಕುರು ಇರುವ ಜಾಗಕ್ಕೆ ಹಚ್ಚುವುದರಿಂದ ಬಹಳ ಬೇಗ ಕುರು ಮಾಯವಾಗುತ್ತದೆ.

ದೇಹದ ಮಂಡಿ ಅಥವಾ ಕೀಲುಗಳಲ್ಲಿ ಹಳೆಯ ನೋವುಗಳು ಕಾಣಿಸಿಕೊಂಡ ನೀವು ಕಾಶೀ ಸೊಪ್ಪಿನ ಜೊತೆಗೆ ಸ್ವಲ್ಪ ಬೆಳ್ಳುಳ್ಳಿಯನ್ನು ಚೆನ್ನಾಗಿ ಅರೆದು ಮಂಡಿಯ ನೋವಿನ ಜಾಗಕ್ಕೆ ಹಚ್ಚುವುದರಿಂದನೋವು ಗುಣವಾಗುತ್ತದೆ.

ಇನ್ನು ಮೂಲವ್ಯಾಧಿ ಇರುವವರು ಗಣಿಕೆ ಸೊಪ್ಪುನ್ನು ಆಹಾರ ರೂಪದಲ್ಲಿ ತಿನ್ನುವುದರಿಂದ ಬಹಳ ಬೇಗ ನಿಯಂತ್ರಣ ಮಾಡಬಹುದು. ಕಾಶೀ ಸೊಪ್ಪನ್ನು ಆಹಾರ ರೂಪದಲ್ಲಿ ಸೇವನೆ ಮಾಡುವುದರಿಂದ ನಿಮ್ಮ ದೇಹದ ರಕ್ತವು ಶುದ್ಧಿಯಾಗುತ್ತದೆ. ಇದು ಮಾತ್ರವಲ್ಲದೆ, ಕಾಶೀ ಸೊಪ್ಪಿನ ರಸಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿದರೆ ನಿಮ್ಮ ದೇಹದಲ್ಲಿ ಉರಿಮೂತ್ರ ಸಮಸ್ಯೆಯು ಸಹ ನಿಲ್ಲುತ್ತದೆ.

ಕಾಶೀ ಸೊಪ್ಪು ಆಹಾರ ರೂಪದಲ್ಲಿ ಸೇವನೆ ಮಾಡುವುದರಿಂದ ಚರ್ಮದ ರೋಗಗಳು ಸಹ ಕಡಿಮೆಯಾಗುತ್ತದೆ. ಹೌದು, ನಿಮ್ಮ ದೇಹದಲ್ಲಿ ಬರುವ ಸರ್ಪಸುತ್ತು, ಕಜ್ಜಿ, ಇಸುಬು ಮತ್ತು ಸೋರಿಯಾಸಿಸ್ ಸೇರಿದಂತೆ ಅನೇಕ ರೋಗಗಳನ್ನು ಕಾಶೀ ಸೊಪ್ಪು ನಿವಾರಣೆ ಮಾಡುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *