ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ: ಹೊಟ್ಟೆಯಲ್ಲಿ ಆಮ್ಲೀಯತೆಯ ಕಾರಣ ಹೊಟ್ಟೆಯುರಿಯ ತೊಂದರೆ ಇರುವವರಿಗೆ ಬಾಳೆದಿಂಡಿನ ಜ್ಯೂಸ್ ಅತ್ಯುತ್ತಮ ಪರಿಹಾರವಾಗಿದೆ. ತುಂಬಾ ದಿನಗಳಿಂದ ವಿವಿಧ ಔಷಧಿಗಳಿಗೆ ಬಗ್ಗದ ತೊಂದರೆಯೂ ಈ ಜ್ಯೂಸಿಗೆ ಬಗ್ಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ಜೊತೆಗೇ ಆಮ್ಲೀಯತೆಯ ಕಾರಣ ಉದ್ಭವವಾಗುವ ಎದೆಯುರಿ ಮತ್ತು ಹುಳಿತೇಗು ಮೊದಲಾದ ತೊಂದರೆಗಳೂ ನಿವಾರಣೆಯಾಗುತ್ತವೆ.

ಮಧುಮೇಹವನ್ನು ನಿಯಂತ್ರಿಸುತ್ತದೆ: ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ವ್ಯರ್ಥವಾಗಿ ಹೋಗುವ ಟೈಪ್-2 ಮಧುಮೇಹಕ್ಕೆ ಬಾಳೆದಿಂಡಿನ ಜ್ಯೂಸ್ ಉತ್ತಮವಾದ ಪರಿಹಾರ ನೀಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಇನ್ಸುಲಿನ್ ಬಳಕೆಯಲ್ಲಿ ನೆರವಾಗಿ ಮಧುಮೇಹವನ್ನು ನಿಯ್ರಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ: ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಿ ನೋವು ಕಾಣಿಸಿಕೊಂಡಿದ್ದರೆ ಈ ಜ್ಯೂಸ್ ಉತ್ತಮವಾದ ಹಾಗೂ ಶೀಘ್ರವಾಗಿ ಪರಿಣಾಮವನ್ನು ನೀಡುತ್ತದೆ.

ತೂಕ ಇಳಿಸಲು ನೆರವಾಗುತ್ತದೆ: ಬಾಳೆದಿಂಡಿನ ಅತ್ಯುತ್ತಮ ಪ್ರಯೋಜನವೆಂದರೆ ತೂಕ ಇಳಿಕೆ. ಇದರಲ್ಲಿರುವ ಪೋಷಕಾಂಶಗಳನ್ನು ಕರಗಿಸಲು ದೇಹ ಅತಿಹೆಚ್ಚು ಪ್ರಮಾಣದಲ್ಲಿ ಕೊಬ್ಬನ್ನು ಬಳಸುವುದರಿಂದ ತೂಕ ಇಳಿಯಲು ಸಾಧ್ಯವಾಗುತ್ತದೆ. ಜೊತೆಗೇ ಹೆಚ್ಚಿನ ಕ್ಯಾಲೋರಿಗಳನ್ನು ಬಳಸುವುದರಿಂದ ತೂಕ ಇನ್ನಷ್ಟು ಹೆಚ್ಚುವುದರಿಂದ ತಡೆಯುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ: ಬಾಳೆದಿಂಡಿನ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಮಲಬದ್ದತೆಯ ನಿವಾರಣೆ. ಈ ಜ್ಯೂಸ್ ನಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ. ನಿಯಮಿತ ಸೇವನೆಯಿಂದ ಮಲಬದ್ಧತೆ ದೂರಾಗುವ ಜೊತೆಗೇ ಸುಲಭ ವಿಸರ್ಜನೆಗೂ ನೆರವಾಗುತ್ತದೆ.

ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ: ಉರಿಮೂತ್ರಕ್ಕೆ ಮೂತ್ರನಾಳದೊಳಗಿನ ಸೋಂಕು ಮುಖ್ಯ ಕಾರಣವಾಗಿದೆ. ಇದಕ್ಕಾಗಿ ದಿನಕ್ಕೊಂದು ಅಥವಾ ಎರಡು ಲೋಟ (ಉರಿ ಹೆಚ್ಚಿರುವಾಗ) ಬಾಳೆದಿಂಡಿನ ಜ್ಯೂಸ್ ಕುಡಿಯುವುದರಿಂದ ಶೀಘ್ರವೇ ಉರಿ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬಾಳೆದಿಂಡಿನ ಜ್ಯೂಸ್ ನಲ್ಲಿ ಪೊಟ್ಯಾಶಿಯಂ ಪ್ರಮಾಣ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಬಾಳೆದಿಂಡಿನ ಜ್ಯೂಸ್ ಉತ್ತಮ ಆಹಾರ ಮತ್ತು ಔಷಧಿಯಾಗಿದೆ. ಅಧಿಕ ರಕ್ತದೊತ್ತಡಕ್ಕೆ ಕಾರಣವಾದ ಕೆಟ್ಟ ಕೊಲೆಸ್ಟ್ರಾಲ್, ನರಗಳ ಸೆಡೆತ ಮೊದಲಾದ ಕಾರಣಗಳಿಗೆ ಈ ಜ್ಯೂಸ್ ಉತ್ತಮ ಪರಿಹಾರ ನೀಡುತ್ತದೆ.

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ: ವಾರಕ್ಕೊಮ್ಮೆ ಉಪವಾಸ ಮತ್ತು ಇಡಿಯ ಜೀರ್ಣಾಂಗಗಳನ್ನು ಖಾಲಿ ಮಾಡಲು ಆಯುರ್ವೇದ ಸೂಚಿಸುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ. ಇದನ್ನು ಅನುಸರಿಸಲು ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಬಾಳೆದಿಂಡಿನ ಜ್ಯೂಸ್ ಕುಡಿಯಿರಿ. ಬಳಿಕ ಸಾಧ್ಯವಾದಷ್ಟು ದ್ರವ ಮತ್ತು ಸುಲಭ ಆಹಾರವನ್ನು ಮಾತ್ರ ಸೇವಿಸಿ.ಬಳಿಕ ಹೊಟ್ಟೆ ಪೂರ್ಣವಾಗಿ ಖಾಲಿಯಾಗುತ್ತದೆ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸುವುದು ಆರೋಗ್ಯಕ್ಕೆ ಪೂರಕವಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *