ಅಗಸೆಯ ಮರವನ್ನು ವಿಶೇಷವಾಗಿ ವೀಳ್ಯದೆಲೆ ತೋಟಗಳಲ್ಲಿ ವೀಳ್ಯದೆಲೆ ಹಂಬನ್ನು ಬೆಳೆಸಲು ಆಸರೆ ಮರವಾಗಿ ಬೆಳೆಸಿರುತ್ತಾರೆ. ಈ ಮರವು ಸುಮಾರು ಇಪ್ಪತ್ತರಿಂದ ಮೂವತ್ತು ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ಹಾಗೂ ಅಗಸೆ ಸೊಪ್ಪು ಮತ್ತು ಅಗಸೆ ಹೂವನ್ನು ಅಡುಗೆಗೆ ಸಹ ಬಳಸುತ್ತಾರೆ. ಬೇರು, ಎಲೆ, ತೊಗಟೆ,ಹೂವು, ಹಣ್ಣು ಇದರ ಉಪಯುಕ್ತ ಭಾಗಗಳಾಗಿವೆ.

ಕಫ ಹೆಚ್ಚಾಗಿರುವಾಗ ಅಗಸೆಯ ಬೇರಿನ ತೊಗಟೆಯ ಪುಡಿಯೊಂದಿಗೆ ವೀಳ್ಯದೆಲೆ ರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬೇಕು. ನೆಗಡಿ ಮತ್ತು ತಲೆನೋವಿನಿಂದ ನರಳುವವರು ಅಗಸೆ ಹೂವಿನ ರಸ ಇಲ್ಲವೇ ಎಳೆಯ ರಸ ಕುಡಿಯಬೇಕು.

ಕಣ್ಣಿನ ದೃಷ್ಟಿ ಹೆಚ್ಚಿಸಲು ಮತ್ತು ದೃಷ್ಟಿಮಾಂದ್ಯದಲ್ಲಿ ಅಗಸೆ ಹೂವಿನ ರಸವನ್ನು ಶೋಧಿಸಿ ಕಣ್ಣಿಗೆ ಹನಿ ಹಾಕಿಕೊಳ್ಳುವುದರಿಂದ ಕಣ್ಣಿನ ಸಮಸ್ಯೆಯನ್ನು ಬಗೆಹರಿಸಬಹುದು.

ಸಂಧಿವಾತದಿಂದ ಬಳಲುವವರು ಅಗಸೆ ಎಲೆ ಮತ್ತು ಬೇರನ್ನು ಅರೆದು ಲೇಪ ಹಾಕಿಕೊಂಡರೆ ನೋವು ಕಡಿಮೆಯಾಗುತ್ತದೆ. ಸ್ತ್ರಿಯರಲ್ಲಿ ಮಾಸಿಕ ಸ್ರಾವ ನಿಯಮಿತಗೊಳ್ಳಲು ಅಗಸೆ ಹೂವಿನ ಪಲ್ಯ ಸೇವನೆ ಮಾಡಬೇಕು. ಅಲ್ಲದೆ ವೀಳ್ಯದೆಲೆ ರಸ ಮತ್ತು ಹೂವಿನ ರಸ ಬೆರಸಿ ಸೇವಿಸಬೇಕು.

ಅಮ್ಮ ಬಂದಾಗ ಅಗಸೆ ಗಿಡದ ತೊಗಟೆಯ ಪುಡಿಯನ್ನು ಕುಡಿಸಿ ಆರಿಸಿದ ನೀರಿನಲ್ಲಿ ಬೆರಸಿ ಕುಡಿಯಬೇಕು. ದೀರ್ಘಕಾಲೀನ ಜ್ವರದಲ್ಲಿ ಅಗಸೆ ಎಲೆಯ ಇಲ್ಲವೇ ಹೂವಿನ ರಸ ಉತ್ತಮವಾಗಿ ಕೆಲಸ ಮಾಡುತ್ತದೆ.

ಅಗಸೆಯ ಹೂಗಳನ್ನು ಸಂಸ್ಕರಿಸಿ ಅತ್ಯಲ್ಪ ಪ್ರಮಾಣದಲ್ಲಿ ಇಲಿಗಳಿಗೆ ನೀಡಿದಾಗ ಗರ್ಭಧರಿಸಿದ ಇಲಿಗಳಲ್ಲಿ ಗರ್ಭಪಾತವಾದುದು ಪ್ರಯೋಗಗಳಿಂದ ತಿಳಿದುಬಂದಿದೆ.

ಚೇಳು ಮತ್ತು ಇತರ ಕ್ರಿಮಿಕೀಟಗಳು ಕಚ್ಚಿದಾಗ ಆ ಜಾಗದಲ್ಲಿ ಅಗಸೆ ಬೇರನ್ನು ತೇಯ್ದು ಲೇಪಿಸಬೇಕು. ಇದು ವಿಷಾಹಾರವಾಗಿ ಕೆಲಸ ಮಾಡುತ್ತದೆ. ನೆಗಡಿಯಿಂದ ಬಳಲುವವರು ಅಗ್ರಣಿಸಬೇಕು.

Leave a Reply

Your email address will not be published. Required fields are marked *