ನಾವು ಸಾಮಾನ್ಯವಾಗಿ ಅಡುಗೆ ರುಚಿ ಬರಲಿ ಅಂತ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕುತ್ತೇವೆ. ಆದರೆ ನಾವು ಪ್ರತಿದಿನ ಬಳಸುವ ಈ ಪದಾರ್ಥವು ಕ್ಯಾನ್ಸರ್ ಅನ್ನು ನಿವಾರಿಸುತ್ತದೆ ಎಂದು ಹೇಳುತ್ತಿದೆ ಈ ಸಂಶೋಧನೆ.

ನಾವು ಪ್ರತಿದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೊಡ್ಡ ಕರುಳಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಇವುಗಳನ್ನು ಬೇಯಿಸಿ, ಇತರ ವಸ್ತುಗಳೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಅದರಲ್ಲಿರುವ ಪೋಷಕ ತತ್ವಗಳು ನಾಶವಾಗುತ್ತದೆ. ಆದುದರಿಂದ ಅವುಗಳನ್ನು ತಾಜಾವಾಗಿ ಸೇವಿಸುವುದು ಒಳ್ಳೆಯದು.

1600ಕ್ಕಿಂತ ಅಧಿಕ ಮಹಿಳೆಯರು ಮತ್ತು ಪುರುಷರ ಮೇಲೆ ನಡೆಸಿದ ಸಂಶೋಧನೆಯಿಂದ ಶೇ.79 ಜನರಿಗೆ ದೊಡ್ಡ ಕರುಳಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ವರದಿಯಾಗಿದೆ. ಆದುದರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಬೇಕು. ಇವುಗಳಲ್ಲಿರುವ ಬಯೋ ಆ್ಯಕ್ಟಿವ್ ಕಾಂಪೌಂಡ್ ಅಂದರೆ ಆ್ಯಂಟಿ ಇಂಪ್ಲಾಮೆಂಟ್ರಿ ಇರುತ್ತದೆ. ಈ ಬಯೋ ಆಕ್ಟಿವ್ ಕಾಂಪೌಂಡ್ಸ್ ಸ್ತನ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಸಮಸ್ಯೆ ನಿವಾರಿಸಬಲ್ಲದು.

ಡಯಟ್‌ನಲ್ಲಿ ಹೆಚ್ಚು ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸಿದರೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ವ್ಯಕ್ತಿಯೊಬ್ಬ ವರ್ಷಕ್ಕೆ ಸುಮಾರು 15 ಕೆಜಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಿದರೆ ಕ್ಯಾನ್ಸರ್‌ ಕಾರಕಗಳನ್ನು ನಿಯಂತ್ರಿಸಬಹುದು. ಆದುದರಿಂದ ಪ್ರತಿದಿನ ಸಾಧ್ಯವಾದಷ್ಟು ಒಂದು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಲು ಪ್ರಯತ್ನಿಸಿ ಕ್ಯಾನ್ಸರ್ ಗೆ ಹೇಳಿ ಗುಡ್ ಬಾಯ್.

Leave a Reply

Your email address will not be published. Required fields are marked *