ಫುಡ್, ಎಜುಕೇಶನ್ ಅಂಡ್ ಎಕಾನಮಿಕ್ ದೆವಲಪ್ಮೆಂಟ್ (ಫೀಡ್) ಸಂಸ್ಥೆಯ ಸಂಸ್ಥಾಪಕರಾದ ಚಂದ್ರಶೇಖರ್ ಅವರ ಬಗ್ಗೆ ಇಂದು ನಾವೆಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ, ಕಾರಣ ಸುಮಾರು ನಾಲ್ಕು ವರ್ಷಗಳಿಂದ ಉತ್ಸವಗಳು ಅಥವಾ ಮನೆಯ ಔತಣಗಳಲ್ಲಿ ವ್ಯರ್ಥವಾಗುವ ಆಹಾರಗಳನ್ನು ಸಂಗ್ರಹಿಸಿ ಕೋಲ್ಕತ್ತಾದ ನೂರಾರು ಹಸಿದ ಮಕ್ಕಳಿಗೆ ಆಹಾರ ನೀಡಲು ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮೂರು ಸ್ಥಳಗಳಲ್ಲಿ ಬಡ ಮಕ್ಕಳಿಗಾಗಿಯೇ ತಾಜಾ ಆಹಾರಗಳನ್ನು ಸಹ ಖುದ್ದು ಅವರೇ ತಯಾರು ಮಾಡಿ ಬಡ ಮಕ್ಕಳ ಹಸಿವನ್ನು ನೀಗಿಸುತ್ತಿದ್ದಾರೆ, ಹಾಗೂ ಅದೇ ಸಮಯದಲ್ಲಿ ಆ ಮಕ್ಕಳಿಗೆ ಶಿಕ್ಷಣ ಮತ್ತು ಪೌಷ್ಟಿಕಾಂಶದ ಅಗತ್ಯಗಳ ಬಗ್ಗೆ ಪಾಠಗಳನ್ನು ಮಾಡುತ್ತಾರೆ.

ನಮ್ಮ ದೇಶದಲ್ಲಿ ಹಲವರು ಹಸಿದವರು ಇದ್ದಾರೆ, ಎಲ್ಲರಿಗೂ ನಾವು ಆಹಾರ ಪೂರೈಸುವುದು ಕಷ್ಟ ಸಾಧ್ಯ, ಆದರೆ ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸಿ ಅಗತ್ಯವಿರುವ ಹಸಿದವರಿಗೆ ನೀಡಿದರೆ ಸಾಕು, ಈ ಕಾರ್ಯವನ್ನು ನಾನೊಬ್ಬನೇ ಮಾಡುವುದಕ್ಕಿಂತ ದೇಶದಲ್ಲಿನ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಆಹಾರ ವ್ಯರ್ಥವಾಗುವುದನ್ನು ನಿಲ್ಲಿಸಿ ಹಸಿದವರ ಸಂಕಟವನ್ನು ದೂರ ಮಾಡಬಹುದು ಎನ್ನುತ್ತಾರೆ. 2016 ರಲ್ಲಿ ಆಹಾರ ಹಾನಿಯಾಗುವುದರ ಬಗ್ಗೆ ಅಧ್ಯಯನ ನಡೆಸಿರುವ ಇವರು, ಒಂದು ಕ್ಷಣ ಆಶ್ಚರ್ಯ ವಾಗಿದ್ದರೂ ಕಾರಣ ಪ್ರತಿವರ್ಷ ಭಾರತದಲ್ಲಿ ಸುಮಾರು 22,000 ಕೋಟಿ ಟನ್ನುಗಳಷ್ಟು ಆಹಾರ ವ್ಯರ್ಥವಾಗುತ್ತಿದೆ, ಇದರಲ್ಲಿ ಕೇವಲ 10% ನಾವು ಆಹಾರ ಉಳಿಸಿದರೆ ಸಾಕು ಹಲವರಿಗೆ ಇದು ಊಟವಾಗುತ್ತದೆ ಎನ್ನುತ್ತಾರೆ.

2015 ರಲ್ಲಿ ಇವರ ಮಗನ ಹುಟ್ಟುಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ಆ ಸಮಯದಲ್ಲಿ ಹೆಚ್ಚುವರಿ ಆಹಾರಗಳನ್ನು ಬಿಸಾಕಲು ಹೊರಟಾಗ, ಕಸದ ತೊಟ್ಟಿಯಲ್ಲಿ ಬಿದ್ದಿದ್ದ 2 ಚಿಕನ್ ಪೀಸ್ ಅನ್ನು ಸಣ್ಣ ಮಕ್ಕಳು ಆಯ್ದು ತಿನ್ನುತ್ತಿದ್ದರು, ಇದನ್ನು ನೋಡಿ ನನ್ನ ಮನ ಕಲಕಿತು, ತಕ್ಷಣ ಆ ಮಕ್ಕಳನ್ನು ಮನೆಗೆ ಕರೆದು ಆಹಾರ ನೀಡಿದೆ, ಆದರೆ ರಾತ್ರಿ ನನಗೆ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ, ಇದೇ ತರ ಎಷ್ಟು ಮಕ್ಕಳು ರಾತ್ರಿ ಹಸಿವಿನಿಂದ ತಮ್ಮ ದಿನವನ್ನು ಕಳೆಯುತ್ತಾರೆ.

ತಕ್ಷಣ ಆಹಾರ ವ್ಯರ್ಥ ಮಾಡದಿರುವಂತೆ ಕಿರು ಚಿತ್ರವನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು, ನಂತರ 2016 ನಲ್ಲಿ ಫೀಡ್ ಸಂಸ್ಥೆಯನ್ನು ತೆರೆದು ಕೋಲ್ಕತ್ತಾದಲ್ಲಿ ಇರುವ ಹಲವಾರು ಶೈಕ್ಷಣಿಕ ಸಂಸ್ಥೆಗಳು ಮತ್ತು ಕಚೇರಿಗಳ ಕ್ಯಾಂಟೀನ್ ಗಳ ಮಾಲೀಕರನ್ನು ಭೇಟಿಮಾಡಿ, ಪ್ರತಿ ನಿತ್ಯ ನಿನಗೆ ಉಳಿಯುವ ಹೆಚ್ಚುವರಿ ಆಹಾರವನ್ನು ನಮ್ಮ ಕಚೇರಿಗೆ ಕೊಡಲು ಕೇಳಿಕೊಂಡರು, ಇದಕ್ಕೆ ಒಪ್ಪಿಕೊಂಡ ಶೈಕ್ಷಣಿಕ ಸಂಸ್ಥೆಗಳು ವರ್ಷದ 365 ದಿನವೂ ಪ್ರತಿನಿತ್ಯ ತಮ್ಮ ಹೆಚ್ಚುವರಿ ಆಹಾರವನ್ನು ಫೀಡ್ ಸಂಸ್ಥೆಗೆ ನೀಡುತ್ತಿದೆ. ಇಂದು ಸುಮಾರು 180 ಬೀದಿ ಮಕ್ಕಳಿಗೆ ಪ್ರತಿದಿನ ಊಟವನ್ನು ನೀಡುತ್ತಿದ್ದೇವೆ, ಎಂದು ಹೆಮ್ಮೆಯಿಂದ ಮಂದಹಾಸ ಬೀರಿದರು ಚಂದ್ರಶೇಖರ್.ಕೃಪೆ:ನಾಡಸುದ್ದಿ

Leave a Reply

Your email address will not be published. Required fields are marked *